ಬೆಂಗಳೂರು: ನಗರದ ಸೆಂಟ್ರಲ್ ಜೈಲಿನಲ್ಲಿ ಸಜಾಬಂಧಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆರೋಪದಡಿ ಬಂಧಿತನಾಗಿರುವ ಪ್ರಥಮ ದರ್ಜೆ ಅಧಿಕಾರಿ (ಎಫ್ ಡಿಎ) ಪೊಲೀಸ್ ವಿಚಾರಣೆ ವೇಳೆ ಡ್ರಗ್ಸ್ ಸಾಗಾಟ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಆರೋಪಿಯ ಚಾಲಾಕಿತನ ನಡೆಗೆ ಪೊಲೀಸರೇ ಶಾಕ್ ಆಗಿದ್ದಾರೆ. ಒಳ ಉಡುಪಿಯನಲ್ಲಿ ಡ್ರಗ್ಸ್ ಬಚ್ಚಿಟ್ಟುಕೊಂಡು ಶರ್ಟ್ ಜೇಬಿನಲ್ಲಿ ಮಾತ್ರೆಗಳನ್ನು ಭದ್ರತಾ ಸಿಬ್ಬಂದಿಗೆ ತೋರಿಸಿ ಸಜಾಬಂಧಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
52 ವರ್ಷದ ಗಂಗಾಧರ್ ಡ್ರಗ್ಸ್ ಸಾಗಾಟ ಆರೋಪ ಸಂಬಂಧ ಫೆಬ್ರುವರಿ 3ರಂದು ಬಂಧಿಸಿ 14 ದಿನಗಳ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದರು. ಕಾರಾಗೃಹ ದಾಖಲಾತಿ ವಿಭಾಗದ ಎಫ್ಡಿಎ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗಂಗಾಧರ್, ಜೈಲಿನ ಕೆಲ ಸಜಾಬಂಧಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು.
ಓದಿ: ‘ಆಂಧ್ರಪ್ರದೇಶಕ್ಕೆ ನೂತನ ಡಿಜಿಪಿಯಾಗಿ 1992 ಬ್ಯಾಚ್ನ ಐಎಎಸ್ ಅಧಿಕಾರಿ ಆಯ್ಕೆ!
ಈ ಹಿಂದೆ ನಾಲ್ಕೈದು ಬಾರಿ ಒಳ ಉಡುಪಿನಲ್ಲಿ ಡ್ರಗ್ಸ್ ಇಟ್ಟು ಜೈಲಿನೊಳಗೆ ಹೋಗಿ ಆರೊ ಕೊಡುತ್ತಿದ್ದ. ಜೈಲಿನ ಭದ್ರತಾ ಸಿಬ್ಬಂದಿಗೆ ಅನುಮಾನ ಬಾರದಿರಲು ಶರ್ಟ್ ಜೇಬಿನಲ್ಲಿ ಮಾತ್ರೆಗಳನ್ನು ಇಟ್ಟುಕೊಳ್ಳುತ್ತಿದ್ದ. ಅನುಮಾನ ಬಂದು ಪ್ರಶ್ನಿಸಿದರೆ ಮಾತ್ರೆ ನೀಡುವುದಾಗಿ ಹೇಳಿ ತಪ್ಪಿಸಿಕೊಳ್ಳುತ್ತಿದ್ದ.
ಜೈಲಿನ ಒಳಗಿದ್ದ ಓರ್ವ ಸಜಾಬಂಧಿ ಕೈದಿಯ ಸ್ನೇಹಿತನ ಮುಖಾಂತರ ಡ್ರಗ್ಸ್ ಸರಬರಾಜು ಮಾಡಿದರೆ ಕೈದಿಯಿಂದ ಸಾವಿರಾರು ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದ ಎನ್ನಲಾಗಿದೆ. ಡ್ರಗ್ಸ್ ಪ್ಯಾಕೇಟ್ಗಳನ್ನ ಚಿಕ್ಕ ಚಿಕ್ಕ ಪ್ಯಾಕೇಟ್ ಗಳನ್ನಾಗಿ ಮಾಡಿ ರೌಡಿಶೀಟರ್ಗಳಿಗೂ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದ. ಸದ್ಯ ನಾಲ್ಕೈದು ಮಂದಿ ಸಜಾಬಂಧಿ ಕೈದಿಗಳನ್ನ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪೊಲೀಸರು ಪಡೆದು ವಿಚಾರಣೆಗೊಳಪಡಿಸಿದ್ದಾರೆ.