ETV Bharat / state

ದಂಪತಿ ಮಧ್ಯೆ ಕೌಟುಂಬಿಕ ಕಲಹ.. ಹೈಕೋರ್ಟ್​ ಮೆಟ್ಟಿಲೇರಿತು ಮಗಳ ಕೂದಲು ಕತ್ತರಿಸುವ ವಿವಾದ - ಬಾಲಕಿಯ ಕೇಶ ಕತ್ತರಿಸದಂತೆ ಕೋರಿ ಹೈಕೋರ್ಟ್​ಗೆ ಅರ್ಜಿ

ಅರ್ಜಿಯಲ್ಲಿ, ಮಗಳೊಂದಿಗೆ ವಾಟ್ಸಾಪ್ ಕಾಲ್ ನಲ್ಲಿ ಮಾತನಾಡುವಾಗ ಬೈಯುವುದನ್ನು ಕಲಿತಿರುವುದು ಹಾಗೂ ಕೂದಲು ಕತ್ತರಿಸಿಕೊಳ್ಳಲು ಕ್ಷೌರದ ಅಂಗಡಿಗೆ ಹೋಗುತ್ತಿರುವ ಕುರಿತು ತಿಳಿದಿದೆ. ಕೂದಲು ಕತ್ತರಿಸುವುದು ಸಿಖ್ಖರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾದುದು. ಆದ್ದರಿಂದ, ಮಗು ಕೇಶ ಕತ್ತರಿಸಿಕೊಳ್ಳದಂತೆ ನಿರ್ದೇಶಿಸಬೇಕು ಮಧ್ಯಂತರ ತಂದೆಯೋರ್ವ ಮನವಿ ಮಾಡಿದ್ದರು.

ಹೈಕೋರ್ಟ್
ಹೈಕೋರ್ಟ್
author img

By

Published : Jan 4, 2022, 10:50 PM IST

ಬೆಂಗಳೂರು : ಸಿಖ್‌ ದಂಪತಿ ನಡುವಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ತಂದೆ ತನ್ನ 11 ವರ್ಷದ ಮಗಳ ಕೇಶಕ್ಕೆ ಕತ್ತರಿ ಹಾಕದಂತೆ ನಿರ್ದೇಶಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ತಾತ್ಕಾಲಿಕವಾಗಿ ಮಾನ್ಯ ಮಾಡಿರುವ ನ್ಯಾಯಾಲಯ ಮುಂದಿನ ವಿಚಾರಣೆವರೆಗೂ ಬಾಲಕಿಯ ಕೂದಲು ಕತ್ತರಿಸಬಾರದು ಎಂದು ನಿರ್ದೇಶಿಸಿದೆ.

ಈ ಕುರಿತು 44 ವರ್ಷದ ಪತಿ ಸಲ್ಲಿಸಿರುವ ಅರ್ಜಿ ಮಾನ್ಯ ಮಾಡಿರುವ ನ್ಯಾ. ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ಪ್ರಕರಣದ ಪ್ರತಿವಾದಿ ಆಗಿರುವ 41 ವರ್ಷದ ಪತ್ನಿಗೆ ತುರ್ತು ನೋಟಿಸ್ ಜಾರಿಗೊಳಿಸುವಂತೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಸಿಖ್‌ ಧರ್ಮಕ್ಕೆ ಸೇರಿರುವ ದಂಪತಿ ನಡುವೆ ವೈಮನಸ್ಸು ಏರ್ಪಟ್ಟಿದ್ದು, ಪತಿ ನವದೆಹಲಿಯಲ್ಲಿ ಹಾಗೂ ಪತ್ನಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ಪತಿಯಿಂದ ವಿಚ್ಛೇದನ ಕೋರಿ ಪತ್ನಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ. ದಂಪತಿಯ 11 ವರ್ಷದ ಮಗಳು ತಾಯಿಯ ಪೋಷಣೆಯಲ್ಲಿದ್ದಾಳೆ.

ಮಗಳ ಭೇಟಿಗಾಗಿ ಮನವಿ ಮಾಡಿ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ ವಾಟ್ಸ್‌ ಆ್ಯಪ್‌ ಕಾಲ್‌ನಲ್ಲಿ ಮಾತನಾಡಲು ಅವಕಾಶ ನೀಡಿತ್ತು. ತಂದೆಗೆ ಮೀಸಲಿರುವ ಭೇಟಿಯ ಹಕ್ಕು’ ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆತ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಅರ್ಜಿಯಲ್ಲಿ, ಮಗಳೊಂದಿಗೆ ವಾಟ್ಸಾಪ್ ಕಾಲ್ ನಲ್ಲಿ ಮಾತನಾಡುವಾಗ ಬೈಯುವುದನ್ನು ಕಲಿತಿರುವುದು ಹಾಗೂ ಕೂದಲು ಕತ್ತರಿಸಿಕೊಳ್ಳಲು ಕ್ಷೌರದ ಅಂಗಡಿಗೆ ಹೋಗುತ್ತಿರುವ ಕುರಿತು ತಿಳಿದಿದೆ. ಕೂದಲು ಕತ್ತರಿಸುವುದು ಸಿಖ್ಖರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾದುದು. ಆದ್ದರಿಂದ, ಮಗು ಕೇಶ ಕತ್ತರಿಸಿಕೊಳ್ಳದಂತೆ ನಿರ್ದೇಶಿಸಬೇಕು ಮಧ್ಯಂತರ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.