ETV Bharat / state

ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್: ತಂದೆ ಮಗ ಸಾವು, ಅಳಿಯನ ಸ್ಥಿತಿ ಗಂಭೀರ..ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

Hit and run: ಬೆಂಗಳೂರಿನ ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬಳಿಯ ಇಸ್ರೋ ಸರ್ಕಲ್ ಬಳಿ ಮಾರುತಿ ಇಕೋ ಕಾರ್ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದಾಗಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

author img

By

Published : Aug 7, 2023, 11:27 AM IST

Updated : Aug 7, 2023, 2:02 PM IST

ಮೃತ ತಂದೆ ಮಗ
ಮೃತ ತಂದೆ ಮಗ
ಸಿಸಿಟಿವಿಯಲ್ಲಿ ಸೆರೆಯಾದ ಅಪಘಾತದ ದೃಶ್ಯ

ಬೆಂಗಳೂರು: ಹಿಟ್ ಅಂಡ್ ರನ್​ಗೆ ತಂದೆ ಮಗ ಸಾವನ್ನಪ್ಪಿದ್ದು, ಕುಟುಂಬದ ಮತ್ತೊರ್ವ ಸದಸ್ಯ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡರಾತ್ರಿ ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಹತ್ತಿರದ ಇಸ್ರೋ ಸರ್ಕಲ್ ಬಳಿ ನಡೆದಿದೆ. ರಘು (65) ತಂದೆ ಮತ್ತು ಚಿರಂಜೀವಿ (25)ಮಗ ಮೃತರಾಗಿದ್ದು, ರಘು ಅವರ ಅಳಿಯ ವಾಸು ಎಂಬಾತನ ಸ್ಥಿತಿ ಗಂಭೀರವಾಗಿದೆ‌.

ಕುವೆಂಪು ನಗರದ ನಿವಾಸಿಗಳಾಗಿದ್ದ ರಘು, ಚಿರಂಜೀವಿ ಹಾಗೂ ರಘು ಅಳಿಯ ವಾಸು ಪುಸ್ತಕದ ವ್ಯಾಪಾರ ಮಾಡುತ್ತಿದ್ದರು. ಕಳೆದ ರಾತ್ರಿ ಕೆಲಸ ಮುಗಿಸಿ ವಾಪಸ್ ಬರುವಾಗ ಎಂ.ಎಸ್ ರಾಮಯ್ಯ ಆಸ್ಪತ್ರೆ ಕಡೆಯಿಂದ ಬಂದ ಮಾರುತಿ ಇಕೋ ಕಾರು ಚಾಲಕ, ನಿಂತಿದ್ದ ಒಂದು ಕಾರು ಹಾಗೂ ಮತ್ತೊಂದು ಆಟೋಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿ ನಿಂತಿದ್ದ ವಾಸುವಿಗೆ ಡಿಕ್ಕಿ ಹೊಡೆದಿದ್ದಾರೆ. ನಂತರ ಚಿರಂಜೀವಿ ಹಾಗೂ ರಘುರಿದ್ದ ಸ್ಕೂಟರಿಗೆ ಕಾರು ಡಿಕ್ಕಿ ಹೊಡೆದಿದೆ.

ಅಪಘಾತವೆಸೆಗಿರುವ ಕಾರು
ಅಪಘಾತವೆಸೆಗಿರುವ ಕಾರು

ಹೀಗೆ ಸರಣಿ ಅಪಘಾತ ಮಾಡಿದ ಕಾರು ಚಾಲಕ, ಘಟನೆ ಬಳಿಕ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಸ್ಥಳದಲ್ಲಿದ್ದ ಸ್ಥಳೀಯರು, ಆಟೋ ಚಾಲಕರು ಸೇರಿ ಅಪಘಾತ ಮಾಡಿದ ಕಾರನ್ನು ತಡೆದು ನಿಲ್ಲಿಸಿದ್ದು, ಕಾರಿನಲ್ಲಿದ್ದ ಆಕಾಶ್ ಎಂಬವನನ್ನು ವಶಕ್ಕೆ ಪಡೆದು ಸದಾಶಿವನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾರಿನಲ್ಲಿದ್ದ ಇನ್ನೂ ಕೆಲವರು ಎಸ್ಕೇಪ್ ಆಗಿದ್ದಾರೆ. ಕಾರಿನಲ್ಲಿದ್ದವರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿರುವುದೇ ಇಂತಹ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳ ವಿರುದ್ಧ ಸದಾಶಿವನಗರ ಸಂಚಾರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಬಗ್ಗೆ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್‌.ಅನುಚೇತ್ ಪ್ರತಿಕ್ರಿಯೆ ನೀಡಿದ್ದಾರೆ. "ನಿನ್ನೆ ರಾತ್ರಿ ಸುಮಾರು 11.30ರ ವೇಳೆ‌ ಭೀಕರ ಅಪಘಾತವಾಗಿದೆ. ಮಾರುತಿ ಇಕೊ ಕಾರಿನಲ್ಲಿ ಐವರಿದ್ದರು. ಪಬ್​ವೊಂದರಿಂದ ಹೊರಬಂದು, ಪಾನಮತ್ತರಾಗಿ ಕಾರು ಚಲಾಯಿಸುವಾಗ ಮೊದಲು ಆಟೊಗೆ ಕಾರನ್ನು ಡಿಕ್ಕಿ ಹೊಡೆಸಿದ್ದಾರೆ. ‌ನಂತರ ಸ್ಕೂಟರ್​ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಆಕಾಶ್ ಎಂಬಾತನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ತಪಾಸಣೆ ಮಾಡುವಾಗ ಮದ್ಯ ಸೇವಿಸಿರುವುದು ಖಚಿತವಾಗಿದೆ. ಅಲ್ಲದೇ ಘಟನಾ‌ ಸ್ಥಳದಲ್ಲಿ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ.‌ ತಲೆಮರೆಸಿಕೊಂಡಿರುವ ನಾಲ್ವರ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಅನುಚೇತ್​ ತಿಳಿಸಿದ್ದಾರೆ.

ಇದನ್ನೂ ಓದಿ: ಹೆದ್ದಾರಿ ಪಕ್ಕದಲ್ಲಿ ನಿಂತಿದ್ದವರಿಗೆ ಕಾರು ಡಿಕ್ಕಿ: ಇಬ್ಬರು ಸಾವು

Last Updated : Aug 7, 2023, 2:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.