ಬೆಂಗಳೂರು: ಲಾಕ್ ಡೌನ್ ವಿಧಿಸಿದ ಹಿನ್ನೆಲೆ ಹಸಿದ ಹೊಟ್ಟೆಯಲ್ಲೇ ನೂರಾರು ಕಿಲೋಮೀಟರ್ ನೆಡೆದ ವಲಸೆ ಕಾರ್ಮಿಕರಿಗಾಗಿ ಒಂದು ದಿನ ಉಪವಾಸ ಮಾಡಬೇಕೆಂದು ರಂಗಕರ್ಮಿ ಪ್ರಸನ್ನ ಹೆಗ್ಗೊಡು ಕರೆ ಕೊಟ್ಟಿದ್ದಾರೆ.
ದೆಹಲಿಯ ಆನಂದ ವಿಹಾರಿಯಿಂದ ಬಿಹಾರ , ಉತ್ತರಪ್ರದೇಶ , ಒಡಿಶಾ, ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕರು ವಾಪಸ್ ತಮ್ಮ ಊರುಗಳತ್ತ ನಡೆದೇ ಹೋಗಲು ತೀರ್ಮಾನಿಸಿ ಹೊರಟರು. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ಬೆಂಗಳೂರಿನಿಂದಲೂ ಸಾವಿರಾರು ಕಾರ್ಮಿಕರು ಉತ್ತರ ಕರ್ನಾಟಕದ ತಮ್ಮ ಊರುಗಳತ್ತ ನಡೆದೇ ಸಾಗಿದರು. ಈ ಮಧ್ಯೆ, ಸಾಗರೋಪಾದಿಯಲ್ಲಿ ನಡೆದು ಹೋಗುತ್ತಿದ್ದ ಮಂದಿಗೆ ಅನ್ನ, ಆಹಾರ, ನೀರು, ಸಾರಿಗೆ ಮತ್ತು ವೈದ್ಯಕೀಯ ಸೇವೆ ಒದಗಿಸಲು ಆಯಾಯ ರಾಜ್ಯ ಸರ್ಕಾರಗಳು ಹೆಣಗಾಡಿದವು. ಹಳ್ಳಿಗರು ಹಸಿದ ಕಾರ್ಮಿಕರಿಗೆ ಅನ್ನ - ನೀರು ಪೂರೈಸಿದರು. ರಾಜ್ಯ ಸರ್ಕಾರಗಳು ಸರ್ಕಾರಗಳು ವಾಹನ ಪೂರೈಸಲು , ವೈದ್ಯಕೀಯ ಸೇವೆ ಹೊಂದಿಸಲು ಹೆಣಗಾಡಿದವು. ಈ ನಡುವೆ ಹಲವು ಮಂದಿ ಉಪವಾಸದಿಂದಲೇ ಮುಂದೆ ಸಾಗಿ. ಕೆಲವರು ಪ್ರಾಣವನ್ನೆ ಕಳೆದುಕೊಂಡಿದ್ದರು. ಹೀಗಾಗಿ, ಏಪ್ರಿಲ್ 10 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರಗೆ ಗ್ರಾಮ ಸೇವಾ ಸಂಘದ ಮೂಲಕ ಪ್ರಸನ್ನ ಅವರು ಉಪವಾಸ ಅಭಿಯಾನ ಆರಂಭಿಸಲಿದ್ದಾರೆ.
ವಲಸೆ ಕಾರ್ಮಿಕರು ಅನುಭವಿಸಿದ ಕಷ್ಟ - ಸಂಕಟಗಳಿಗಾಗಿ ನಾವೆಲ್ಲರೂ ಒಂದು ದಿನದ ಉಪವಾಸದಲ್ಲಿ ಜೊತೆ ಸೇರೋಣ ಎಂದು ಪ್ರಸನ್ನ ಕರೆಕೊಟ್ಟಿದ್ದಾರೆ.