ETV Bharat / state

ಬಿತ್ತನೆಯಾಗಿ 8 ದಿನ‌ವಾದ್ರೂ ಮೊಳಕೆ ಬರದ ಜೋಳ.. ಕಳಪೆ ಬಿತ್ತನೆ ಬೀಜದಿಂದ ರೈತರು ಕಂಗಾಲು..

ದೊಡ್ಡಬಳ್ಳಾಪುರದ ರೈತರು ಸಿ.ಪಿ.8.18 ಕಂಪನಿಯ ಮೆಕ್ಕೆಜೋಳದ ಬಿತ್ತನೆ ಬೀಜಗಳನ್ನು ಮುಗಿಬಿದ್ದು ಖರೀದಿ ಮಾಡಿದ್ದು, ಬಿತ್ತನೆ ಮಾಡಿ 8 ದಿನ ಕಾದರು ಬೀಜ ಮೊಳಕೆ ಬರದೆ ಮಣ್ಣಿನಲ್ಲೆ ಕೊಳೆಯುತ್ತಿತ್ತು. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೀಜ ಮೊಳಕೆ ಬರದೆ ಇದ್ದಿದರಿಂದ ರೈತರು ಕಂಗಾಲಾಗಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

dhoddaballapura
ಕಳಪೆ ಬಿತ್ತನೆ ಬೀಜ
author img

By

Published : Jun 30, 2020, 10:23 PM IST

ದೊಡ್ಡಬಳ್ಳಾಪುರ : ರಾಜ್ಯದಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಆದರೆ, ತಾಲೂಕಿನ ರೈತರು ಜೋಳ ಬಿತ್ತನೆ ಮಾಡಿ 8 ದಿನ ಕಾದರೂ ಬೀಜ ಮೊಳಕೆ ಒಡೆದು ಹೊರ ಬರದ ಕಳಪೆ ಬಿತ್ತನೆ ಬೀಜ ಬಿತ್ತಿದ ರೈತರು ಕಂಗಾಲಾಗಿದ್ದಾರೆ.

ತಾಲೂಕಿನಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಜೋಳ ಬಿತ್ತನೆಗೆ ಸೂಕ್ತ ವಾತಾವರಣ ಇದ್ದ ಹಿನ್ನೆಲೆ ರೈತರು ಸಿಪಿ 8.18 ಕಂಪನಿಯ ಮೆಕ್ಕೆಜೋಳದ ಬಿತ್ತನೆ ಬೀಜಗಳನ್ನು ಮುಗಿಬಿದ್ದು ಖರೀದಿ ಮಾಡಿದ್ದರು. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಒಂದು ಚೀಲದ ಬಿತ್ತನೆ ಬೀಜಕ್ಕೆ 950 ರೂ. ಕೊಟ್ಟು ಖರೀದಿ ಮಾಡಿ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿ 8 ದಿನ ಕಾದರೂ ಬೀಜ ಮೊಳಕೆ ಬರದೆ ಮಣ್ಣಿನಲ್ಲೇ ಕೊಳೆಯುತ್ತಿತ್ತು. ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ಬೀಜ ಮೊಳಕೆ ಬರದೆ ಕಾರಣ ರೈತರು ಕಂಗಾಲಾಗಿದ್ದರು.

ಬಿತ್ತನೆ ಬೀಜ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು..

ತಾಲೂಕಿನ ನೇರಳೆಘಟ್ಟದ ಸುಮಾರು ರೈತರು ಸಿಪಿ 8.18 ಕಂಪನಿಯ ಬಿತ್ತನೆ ಬೀಜವನ್ನು ಬಿತ್ತನೆ ಮಾಡಿ ಪರಿತಪಿಸುವಂತಾಗಿದೆ. ತಾಲೂಕಿನಲ್ಲಿ ಮೊದಲು ಬಿತ್ತನೆ ಮಾಡಿದ್ದಾರೆ ಈ ಗ್ರಾಮದ ರೈತರು. ಕಂಪನಿ ಕೊಟ್ಟ ಕಳಪೆ ಬೀಜದ ಫಲಿತಾಂಶ ಈಗ ಬೆಳಕಿಗೆ ಬಂದಿದೆ.

ಅಂದಹಾಗೆ ಒಂದು ಎಕರೆ ಬಿತ್ತನೆ ಮಾಡಲು ರಸಗೊಬ್ಬರ, ಕೂಲಿ ಸೇರಿ ₹10 ಸಾವಿರ ಖರ್ಚು ಬೀಳುತ್ತೆ. ರೈತರು 10 ಸಾವಿರ ಹಣದೊಂದಿಗೆ ಹಾಕಿದ ಶ್ರಮ ಸಹ ವ್ಯರ್ಥವಾಗಿದೆ. ಬಿತ್ತನೆ ಬೀಜ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು 20 ಸಾವಿರ ಬೆಳೆ ಪರಿಹಾರ ನೀಡುವಂತೆ ಆಗ್ರಹಿಸಿದರು. ಬಳಿಕ ಸ್ಥಳಕ್ಕೆ ಕೃಷಿ ಅಧಿಕಾರಿಗಳು, ಕೃಷಿ ವಿಜ್ಞಾನಿ ಮತ್ತು ಬಿತ್ತನೆ ಬೀಜದ ಕಂಪನಿಯ ಸಿಬ್ಬಂದಿ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಬಿತ್ತನೆಯಾದ ಹೊಲಗಳನ್ನು ಪರಿಶೀಲಿಸಿದ ಅಧಿಕಾರಿಗಳು ಬಿತ್ತನೆ ಬೀಜ ಕಳಪೆ ಗುಣಮಟ್ಟದೆಂದು ದೃಢಪಡಿಸಿದ್ದಾರೆ. ಈಗಾಗಲೇ ವಿತರಣೆಗೆಂದು ತರಿಸಲಾಗಿದ್ದ ಸಿಪಿ 8.18 ಕಂಪನಿಯ ಬಿತ್ತನೆ ಬೀಜಗಳನ್ನು ಬ್ಲಾಕ್​ ಮಾಡಲಾಗಿದೆ. ರೈತರಿಗೆ ಈ ಬೀಜ ಬಿತ್ತನೆ ಮಾಡದಂತೆ ಸೂಚನೆ ನೀಡಲಾಗುವುದು ಮತ್ತು ಇತರೆ ಕಂಪನಿಯ ಬಿತ್ತನೆ ಬೀಜ ಬಿತ್ತನೆ ಮಾಡುವಂತೆ ಸೂಚನೆ ನೀಡಲಾಗುವುದು ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ. ಕೃಷಿ ವಿಜ್ಞಾನಿಗಳಿಂದ ತನಿಖೆ ನಡೆಸಿ ತಪ್ಪಿತಸ್ಥ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಜೊತೆಗೆ ನಷ್ಟಕ್ಕೆ ತುತ್ತಾದ ರೈತರಿಗೆ ಬೆಳೆ ಪರಿಹಾರ ನೀಡುವ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.