ETV Bharat / state

ಮಹದಾಯಿಗೆ ಅನ್ಯಾಯ ಮಾಡಿದವ್ರು ಒಂದಿನ ಜೈಲಿಗ ಹೋಗ್ತಾರ: ಡಿಸಿಎಂಗೆ ರೈತ ಮುಖಂಡನ ತಿರುಗೇಟು

ಮಹದಾಯಿ ನೀರಿಗಾಗಿ ಮೂರನೇ ದಿನ ಧರಣಿ ಉತ್ತರ ಕರ್ನಾಟಕ ಭಾಗದ ರೈತರನ್ನು ಡಿಸಿಎಂ ಗೋವಿಂದ ಕಾರಜೋಳ ಭೇಟಿಯಾದರು. ಹೋರಾಟ ಕೈಬಿಟ್ಟು ಊರಿಗೆ ತೆರಳುವಂತೆ ಸಚಿವರು ಮನವಿ ಮಾಡಿದರು.

ಡಿಸಿಎಂಗೆ ರೈತ ಮುಖಂಡನ ತಿರುಗೇಟು
author img

By

Published : Oct 19, 2019, 1:22 PM IST

ಬೆಂಗಳೂರು: ಮಹದಾಯಿ ನೀರಿಗಾಗಿ ಮೂರನೇ ದಿನ ಧರಣಿ ಉತ್ತರ ಕರ್ನಾಟಕ ಭಾಗದ ರೈತರನ್ನು ಡಿಸಿಎಂ ಗೋವಿಂದ ಕಾರಜೋಳ ಭೇಟಿಯಾದರು. ಈ ವೇಳೆ ಹೋರಾಟ ಕೈಬಿಟ್ಟು ಊರಿಗೆ ತೆರಳುವಂತೆ ಮನವಿ ಮಾಡಿದರು.

ಡಿಸಿಎಂಗೆ ರೈತ ಮುಖಂಡನ ತಿರುಗೇಟು

ಡಿಸಿಎಂ ಕಾರಜೋಳ ಮಾತನಾಡಿ, ನಾವು ಈಗಾಗಲೇ ಪ್ರಧಾನ ಮಂತ್ರಿಗಳಿಗೂ ಸಹ ಈ ಕುರಿತು ಮನವಿ ಮಾಡಿದ್ದೇವೆ. ಯಡಿಯೂರಪ್ಪನವರು ಕೂಡ ಈ ಕುರಿತು ಗೋವಾ ಹಾಗೂ ಮಹಾರಾಷ್ಟ್ರ ಸಿಎಂಗಳಿಗೆ ವಿನಂತಿಸಿದ್ದಾರೆ. ಈ ಕೂಡಲೇ ಗೆಜೆಟ್​ ನೋಟಿಫಿಕೇಶನ್​ ಆಗಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ. ಖಂಡಿತವಾಗಿಯೂ ಸಮಸ್ಯೆ ಬಗೆಹರಿಸುತ್ತೇವೆ. ಮಹಾದಾಯಿ ಹೋರಾಟಗಾರರು ತಮ್ಮ ಧರಣಿಯನ್ನು ಹಿಂಪಡೆದು, ತಮ್ಮ ಊರುಗಳಿಗೆ ಮರಳಬೇಕೆಂದು ವಿನಂತಿಸಿದರು.

ಬಳಿಕ ಮಾತನಾಡಿದ ರೈತ ಮುಖಂಡ ವೀರೇಶ್ ಸೊರಬದಮಠ, ಇಲ್ಲಿ ಡಿಸಿಎಂ ಅವರು ಬಂದಿದ್ದಕ್ಕೆ ನಾವು ಹೋರಾಟ ಹಿಂಪಡೆಯಬೇಕು ಎಂದು ಹೇಳಿದವರು ಯಾರು? ಈ ರಾಜ್ಯದ ಮುಖ್ಯಮಂತ್ರಿಗಳು ಬಂದರೂ ನಮ್ಮ ನಿಲುವು ರಾಜ್ಯಪಾಲರಿಗೆ ಮನವಿ ಕೊಡುವುದು. ನಮಗೆ ಬಂದ ಸೂಚನೆ ಪ್ರಕಾರ, ರಾಜ್ಯಪಾಲರು ಭೇಟಿ ಮಾಡಲು, ಮನವಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಾಜ್ಯಪಾಲರು ನಮ್ಮ ಮನವಿ ಸ್ವೀಕರಿಸದಿದ್ದರೂ ನಾವು ಗೌರವವಾಗಿ ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡಿ ವಾಪಾಸ್​ ತೆರಳುತ್ತೇವೆ. ಆದರೆ ಅಲ್ಲಿಯವರೆಗೂ ನಾವು ನಮ್ಮ ಧರಣಿ ಹಿಂಪಡೆಯಲ್ಲ ಎಂದು ಖಡಕ್​ ಎಚ್ಚರಿಕೆ ನೀಡಿದರು.

ಒಂದು ಸಂದರ್ಭ ಬರುತ್ತದೆ. ಮಹದಾಯಿಗೆ ಯಾರೆಲ್ಲಾ ಅನ್ಯಾಯ ಮಾಡಿದ್ದಾರೆ, ಅವರು ಜೈಲಿಗೆ ಹೋಗುತ್ತಾರೆ ಎಂದು ತಿರುಗೇಟು ನೀಡಿದರು.

ರಾಜ್ಯಪಾಲರ ಕಚೇರಿಗೆ ತೆರಳಿದ ರೈತ ಮಹಿಳೆಯರು :

ಆರು ಜನ ರೈತ ಮಹಿಳೆಯರು ರಾಜ್ಯಪಾಲರ ಕಚೇರಿಗೆ ಮನವಿ ಸಲ್ಲಿಸಲು ತೆರಳಿದರು. ಉಪವಾಸ ನಿರತ ರೈತ ಮಹಿಳೆಯರನ್ನ ಪೊಲೀಸರು ತಮ್ಮ ವಾಹನದ ಮೂಲಕ ರಾಜಭವನ ಕಚೇರಿಗೆ ಕರೆದುಕೊಂಡು ಹೋದರು. ರಾಜಭವನದ ಕಚೇರಿಗೆ ಹೋಗಿ ಮನವಿ ಸಲ್ಲಿಸಿ ಸ್ವೀಕೃತಿ ಪತ್ರ ಪಡೆದು ರೈತ ಮಹಿಳೆಯರು ವಾಪಾಸ್ಸಾಗಲಿದ್ದಾರೆ. ಬಳಿಕ ಧರಣಿ ಕೈಬಿಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

Intro:ಡಿಸಿಎಂ ಭೇಟಿಗೂ ಸೊಪ್ಪುಹಾಕದ ರೈತರು- ರಾಜಭವನಕ್ಕೆ ಮನವಿ ಸಲ್ಲಿಕೆ

ಬೆಂಗಳೂರು- ಮಹಾದಾಯಿ ನೀರಿಗಾಗಿ ಮೂರನೇ ದಿನ ಅಹೋರಾತ್ರಿ ಧರಣಿ ನಡೆಸುತ್ತಿರುವ ಉತ್ತರ ಕರ್ನಾಟಕ ಭಾಗದ ರೈತರನ್ನು ಡಿಸಿಎಂ ಗೋವಿಂದ ಕಾರಜೋಳ ಭೇಟಿಯಾದರು. ಹೋರಾಟ ಕೈಬಿಟ್ಟು ಊರಿಗೆ ತೆರಳುವಂತೆ ಮನವಿ ಮಾಡಿದರು. ಇದೇ ವೇಳೆ ರೈತರು ರಾಜ್ಯಪಾಲರ ಭೇಟಿಯಾಗದೆ ಸ್ಥಳದಿಂದ ಹೋಗುವುದಿಲ್ಲ ಎಂದಿದ್ದಕ್ಕೆ, ರಾಜ್ಯಪಾಲರ ಕಚೇರಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಡಿಸಿಎಂ ಪ್ರಯತ್ನಿಸಿದರು. ದೂರವಾಣಿ ಮೂಲಕ ರಾಜ್ಯಪಾಲರನ್ನು ಸಂಪರ್ಕಿಸಲು ಸುಮಾರು ಹತ್ತು ನಿಮಿಷ ಪ್ರಯತ್ನಿಸಿ ವಿಷಯ ತಲುಪಿಸಿದರು.
ಆದರೆ ರಾಜಕಾರಣಿಗಳ ಮೇಲೆ ಯಾವುದೇ ನಂಬಿಕೆ ಉಳಿದಿಲ್ಲ. ಸರ್ಕಾರ ಸ್ಥಳಕ್ಕೆ ಬಂದಿದ್ದರಿಂದ ರಾಜ್ಯಪಾಲರ ಭೇಟಿ ನಮಗೆ ಸಿಗುವುದಿಲ್ಲ ಎಂಬುದು ಖಚಿತವಾಗಿದೆ ಎಂದು ರೈತ ಮುಖಂಡ ವೀರೇಶ್ ತಿಳಿಸಿದರು.
ಬಳಿಕ ಮಾತನಾಡಿಸಿ ಡಿಸಿಎಂ ಕಾರಜೋಳ , ರಾಜ್ಯಪಾಲರ ಭೇಟಿ ಮಾಡಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ ಡಿಸಿಎಂ ಕಾರಜೋಳ ಧಿಮಾಕಿನಿಂದ ಉತ್ತರಿಸಿದರು. ನಿಮ್ಮ ಪ್ರಶ್ನೆಗಳಿಗೆಲ್ಲಾ ಉತ್ತರಿಸಲು ಆಗಲ್ಲ ಎಂದರು. ಬಳಿಕ ಉತ್ತರಿಸಿ ರಾಜಭನದ ಗಮನಕ್ಕೆ ತಂದಿದ್ದೇವೆ ಅಲ್ಲಿನ ಸಂದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ರೈತ ಮುಖಂಡ ವೀರೇಶ್ ಸೊರಬದ ಮಠ ಮಾತನಾಡಿ,
ಇವೆರೆಲ್ಲಾ ನಾಟಕ ಮಾಡೋಕೆ ಬಂದಿದ್ದಾ. ಇವರು ಬಂದು ಇಲ್ಲಿ ನಾಟಕ ಮಾಡಿರೋದೆ ರಾಜ್ಯಪಾಲರ ಭೇಟಿಗೆ ಅವಕಾಶ ಸಿಗಲ್ಲ ಅಂತ. ಸರ್ಕಾರದಿಂದ ರೈತರು ಹುಟ್ಟಿಲ್ಲ ನಮ್ಮಿಂದ ಸರ್ಕಾರ ಹುಟ್ಟಿದೆ..ರಾಜ್ಯಪಾಲರ ಮೇಲೆ ಈಗಲೂ ಗೌರವ ಇದೆ..ನಮ್ಮ ಮನವಿ ರಾಜ್ಯಪಾಲರ ಕಚೇರಿ ತಲುಪಬೇಕು.ರಾಜ್ಯಪಾಲರ ಭೇಟಿ ಸಾಧ್ಯ ಇಲ್ಲ ಅನ್ನೋದು ನಮಗೆ ಅರಿವಾಗಿದೆ.ನಾವು ಈಗಲೂ ರಾಜಭವನದ ಮೇಲೆ ಗೌರವ ಇದೆ.ರಾಜಭವನದ ಜಪ ಮಾಡ್ತಾ ಇಲ್ಲೇ ಕೂತಿರ್ತೇವೆ.ಉಪವಾಸ ನಿರತ ರೈತ ಮಹಿಳೆಯರ‌ನ್ನು ಪೊಲೀಸರು ರಾಜಭವನಕ್ಕೆ ಕರೆದುಕೊಂಡು ಹೋಗಲಿ.ರಾಜಭವನದ ಅಧಿಕಾರಿಗಳಾದ್ರೂ ಇಲ್ಲಿಗೆ ಬರಲಿ.ನಮ್ಮ ಮನವಿ ಪತ್ರ ತೆಗೆದುಕೊಂಡು ಸ್ವೀಕೃತಿ ಪತ್ರ ಕೊಡಲಿ‌ ನಂತರ ನಾವು ಪ್ರತಿಭಟನೆ ಕೈಬಿಡುತ್ತೇವೆ ಎಂದರು.

ಒಟ್ಟಿನಲ್ಲಿ ರಾಜ್ಯಪಾಲ ವಜುಬಾಯಿ ವಾಲಾರ ಭೇಟಿ ಸಾಧ್ಯವಾಗದ ಹಿನ್ನೆಲೆ , ಆರು ಜನ ರೈತ ಮಹಿಳೆಯರು ರಾಜ್ಯಪಾಲರ ಕಚೇರಿಗೆ ಮನವಿ ಸಲ್ಲಿಸಲು ತೆರಳಿದ್ದಾರೆ.
ಉಪವಾಸ ನಿರತ ರೈತ ಮಹಿಳೆಯರನ್ನ ಕರೆದೊಯ್ದ ಪೊಲೀಸರು ತಮ್ಮ ವಾಹನದ ಮೂಲಕ ರಾಜಭವನ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ರಾಜಭವನದ ಕಚೇರಿಗೆ ಹೋಗಿ ಮನವಿ ಸಲ್ಲಿಸಿ ಸ್ವೀಕೃತಿ ಪತ್ರ ಪಡೆದು ರೈತ ಮಹಿಳೆಯರು ವಾಪಾಸ್ಸಾಗಲಿದ್ದಾರೆ. ಬಳಿಕ ಧರಣಿ ಕೈಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ಸೌಮ್ಯಶ್ರೀ
Kn_bng_04_DCM_Veeresh_byte_7202707Body:.Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.