ETV Bharat / state

300 ಮೂಟೆ ಗಡ್ಡೆಕೋಸು ಮಾರಾಟ ಮಾಡಿದ ರೈತನಿಗೆ ಸಿಕ್ಕಿದ್ದು 600 ರೂಪಾಯಿ!

316 ಚೀಲ ಗಡ್ಡೆಕೋಸಿಗೆ 70 ಸಾವಿರ ರೂ ಕೊಡುವ ಬದಲಾಗಿ ಕೇವಲ 600 ರೂಪಾಯಿ ನೀಡಿ ವಂಚನೆ ಮಾಡಿರುವುದಾಗಿ ರೈತರೊಬ್ಬರು ಆರೋಪಿಸಿದ್ದಾರೆ.

author img

By

Published : Dec 13, 2022, 9:45 PM IST

Updated : Dec 13, 2022, 10:58 PM IST

Fraud by giving 600 rupees to the farmer
ರೈತನಿಗೆ 600 ರೂಪಾಯಿ ನೀಡಿ ವಂಚನೆ
ರೈತರ ಬವಣೆ!

ಬೆಂಗಳೂರು: ಇತ್ತೀಚೆಗೆ ಗದಗ ಮೂಲದ ರೈತನೋರ್ವನಿಗೆ ಬೆಂಗಳೂರಿನ ಎಪಿಎಂಸಿ ಮಾರ್ಕೆಟ್‌ನಲ್ಲಿ 205 ಕೆ.ಜಿ. ಈರುಳ್ಳಿಗೆ ಕೇವಲ 8 ರೂಪಾಯಿ ನೀಡಿರುವ ಬಗ್ಗೆ ವರದಿಯಾಗಿತ್ತು. ಈ ಮೂಲಕ ಎಪಿಎಂಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಬಯಲಾಗಿತ್ತು. ಈ ಪ್ರಕರಣದ ಬೆನ್ನಲ್ಲೇ ಮತ್ತದೇ ರೀತಿಯಲ್ಲಿ ರೈತನಿಗೆ ಮೋಸವಾಗಿರುವುದು ಬೆಳಕಿಗೆ ಬಂದಿದೆ.

ಕೋಲಾರದ ಶ್ರೀನಿವಾಸಪುರ ಮೂಲದ ಆನಂದ್ ಎಂಬ ರೈತ ತನ್ನ ಜಮೀನಿನಲ್ಲಿ ಬೆಳೆದಿದ್ದ ಗಡ್ಡೆಕೋಸಿಗೆ 1 ಚೀಲಕ್ಕೆ 50 ಕೆಜಿ ಎಂಬಂತೆ 316 ಚೀಲಕ್ಕೆ 70 ಸಾವಿರ ಕೊಡುವುದಕ್ಕೆ ಬದಲಾಗಿ ಕೇವಲ 600 ರೂಪಾಯಿ ನೀಡಿ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ.

ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ ಕಮಿಷನ್ ಏಜೆಂಟ್ ಅರುಣ್ ಎಂಬುವರ ವಿರುದ್ಧ ರೈತ ಆನಂದ್ ಕಲಾಸಿಪಾಳ್ಯ ಪೊಲೀಸ್ ಠಾಣೆ, ಬಿಬಿಎಂಪಿ ಹಾಗೂ ತೋಟಗಾರಿಕಾ ಇಲಾಖೆಗೆ ದೂರು ನೀಡಿದ್ದಾರೆ.
ಒಂದು ಕೆ.ಜಿ ಗಡ್ಡೆಕೋಸಿಗೆ 6 ರೂಪಾಯಿ ಕೊಡುವುದಾಗಿ ನಂಬಿಸಿ ಖರೀದಿ ಮಾಡಿ ಮೂಟೆಗೆ 2 ರೂಪಾಯಿ ಕೊಟ್ಟ ಕೈ ತೊಳೆದುಕೊಂಡಿದ್ದಾನೆ. ತಾನು ಬೆಳೆದ 316 ಮೂಟೆ ಕೋಸಿಗೆ 70 ಸಾವಿರ ಬರುತ್ತೆ ಅಂತ ಕನಸು ಕಂಡಿದ್ದ ಆನಂದ ಅವರ ಕೈಗೆ ಸಿಕ್ಕಿರುವುದು ಕೇವಲ 600 ರೂಪಾಯಿ.

316 ಮೂಟೆ ಎಲೆಕೋಸು ಲೋಡ್ ಮಾಡಿದ್ದ ರೈತ ಆನಂದ್, ಕಲಾಸಿಪಾಳ್ಯದ ಎಂಎಸ್ ಅರುಣ್ ಮಂಡಿಗೆ ಕೋಸು ಕಳುಹಿಸಿದ್ದರು. ಇದರಲ್ಲಿ ಮಂಡಿ ಮಾಲೀಕ 275 ಮೂಟೆಗೆ 31 ಸಾವಿರ ಬಿಲ್ ಹಾಕಿದ್ದು ಇದರಲ್ಲಿ ಬಾಡಿಗೆ, ಕೂಲಿ, ಊಟ ಅಂತ ಲೆಕ್ಕ ಮಾಡಿ ರೈತ ಪಡೆದ 1200 ಅಡ್ವಾನ್ಸ್ ಹಣ ಲೆಕ್ಕ ಮಾಡಿ ರೈತನೇ 585 ಹಣ ವಾಪಸ್ ಕೊಡ ಬೇಕು ಅಂತ ಲೆಕ್ಕ ತೋರಿಸಿದ್ದಾನೆ. ಅಲ್ಲಿಗೆ ರೈತನಿಗೆ 300 ಮೂಟೆಗೆ ಸಿಕ್ಕಿದ್ದು ಕೇವಲ 600 ರೂಪಾಯಿ ಅಷ್ಟೇ.

ರೈತ ಆನಂದ್ ಮಾತನಾಡಿ, ಇಂತಹ ದಳ್ಳಾಳಿಗಳಿಂದಲೇ ರೈತ ಆತ್ಮಹತ್ಯೆ ಮಾಡಿಕೊಳ್ತಿದ್ದಾನೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಈಟಿವಿ ಭಾರತ್‌ಗೆ ಪ್ರತಿಕ್ರಿಯಿಸಿರುವ ಅಂಗಡಿ ಮಾಲೀಕ ಅರುಣ್, ನಾನೇನು ಮೋಸ ಮಾಡಿಲ್ಲ. ಸರಿಯಾಗಿಯೇ ಲೆಕ್ಕ ಹಾಕಿ ಹಣ ಕೊಟ್ಟಿದ್ದೇನೆ ಎಂದರು.

ಇದನ್ನೂ ಓದಿ: ಹಸಿರು ಗೂಟದ ಕಾರು, ನ್ಯಾಯಾಧೀಶ ಎಂದು ನಾಮಫಲಕ: ಜನಸಾಮಾನ್ಯರಿಗೆ ವಂಚಿಸುತ್ತಿದ್ದ ವ್ಯಕ್ತಿ ಸೆರೆ

Last Updated : Dec 13, 2022, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.