ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನ ಕೆಪಿಸಿ.ಸಿ ಅಧ್ಯಕ್ಷರನ್ನಾಗಿ ನಿನ್ನೆ ಆಯ್ಕೆ ಮಾಡಲಾಗಿದ್ದು, ಇಂದು ಮುಂಜಾನೆಯಿಂದ ಅವರ ಮನೆಯ ಸುತ್ತ ಅಭಿಮಾನಿಗಳ ಬಳಗ ಕೈಯಲ್ಲಿ ಹೂವಿನ ಹಾರ ಹಿಡಿದು ಅಭಿನಂದನೆ ಸಲ್ಲಿಸಲು ದೌಡಾಯಿಸಿದ್ದಾರೆ.
ಹಾಗೆ ಡಿಕೆಶಿ ಮನೆಗೆ ಕುಂದಗೋಳ ಕ್ಷೇತ್ರದ ಶಾಸಕ ಕುಸುಮಾ ಶಿವಳ್ಳಿ ಆಗಮಿಸಿ ಅಭಿನಂದನೆ ತಿಳಿಸಿದ್ದಾರೆ. ಮನೆಯಿಂದ ಹೊರಬಂದ ಡಿಕೆಶಿ ಅಭಿಮಾನಿಗಳ ಹೂ ಗುಚ್ವ ಸ್ವೀಕರಿಸಿ, ಬಳಿಕ ಮಾಧ್ಯಮ ಸಹಾಯಕರಾಗಿ ಕೆಲಸ ನಿರ್ವಹಿಸಿದ ವಿಜೇಯೆಂದ್ರ ವಿಧಿವಶರಾದ ಸುದ್ದಿ ತಿಳಿದು ಅವರ ಪಾರ್ಥಿವ ಶರೀರ ವೀಕ್ಷಿಸಲು ತೆರಳಿದರು.