ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಕಮಲ ಪಕ್ಷ ಸೇರಲಿದ್ದಾರೆ. ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿ ಎಂದೇ ಹೆಸರುವಾಸಿಯಾಗಿರುವ ಅಣ್ಣಾಮಲೈಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಅಣ್ಣಾಮಲೈ ಬಿಜೆಪಿ ಸೇರಲಿದ್ದಾರೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಹುಟ್ಟೂರಾದ ತಮಿಳುನಾಡಿನಲ್ಲಿ ವಾಸವಿದ್ದರು. ಅಲ್ಲದೆ ಫೇಸ್ಬುಕ್ನಲ್ಲಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ಸು ಗಳಿಸುವ ಕುರಿತಂತೆ ಉಪನ್ಯಾಸ ನೀಡುತ್ತಾ ಬಂದಿದ್ದರು.
ಇದೀಗ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದು, ರಾಜಕೀಯ ರಂಗದಲ್ಲೂ ಒಂದೊಳ್ಳೆ ಹೆಸರು ಮಾಡಲಿ ಎಂದು ಜನರು ಅಭಿನಂದನೆ ಸಲ್ಲಿಸುತ್ತಿದ್ದು, ಬಿಜೆಪಿ ಸೇರ್ಪಡೆಗೆ ಸಂತಸಗೊಂಡಿದ್ದಾರೆ. ತಮ್ಮ ಕಾರ್ಯ ವೈಖರಿಯಿಂದಲೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಅಣ್ಣಾಮಲೈ, ಬಿಜೆಪಿ ಸೇರ್ಪಡೆಗೊಳ್ಳುತ್ತಿರುವ ವಿಚಾರ ತಿಳಿದು ಆಭಿಮಾನಿ ಬಳಗ ಶುಭ ಕೋರುತ್ತಿದೆ.
ಅಲ್ಲದೆ ರಾಜ್ಯ ಬಿಜೆಪಿ ನಾಯಕರು ಸಹ ಅವರ ಬಿಜೆಪಿ ಸೇರ್ಪಡೆಗೆ ಸಂತಸಗೊಂಡಿದ್ದು, ಶುಭ ಹಾರೈಸಿದ್ದಾರೆ. ಇನ್ನು ಬಿಜೆಪಿ ಪರವಾಗಿ ಒಲವು ತೋರಿದ್ದ ಅಣ್ಣಾಮಲೈ ಬಿಜೆಪಿ ರಾಷ್ಟ್ರೀಯವಾದಿ ಪಕ್ಷ. ಹೀಗಾಗಿ ಬಿಜೆಪಿ ಸೇರಲು ನಿರ್ಧರಿಸಿದ್ದೇನೆ ಎಂದಿದ್ದರು.