ETV Bharat / state

ಧವನ್​ ಬರ್ತ್​ ಡೇಗೆ ಅನ್ನದಾನ ಮಾಡಿದ ಅಭಿಮಾನಿ... ಅವರಿಂದಲೇ 'ಗಬ್ಬರ್​ ಸೂರ್ಯ' ಎಂದು ಕರೆಸಿಕೊಂಡ ಕನ್ನಡಿಗ!

author img

By

Published : Dec 5, 2020, 10:47 PM IST

2020 ಐಪಿಎಲ್​ನಲ್ಲಿ ಒಳ್ಳೆಯ ಪ್ರದರ್ಶನ ತೋರಿದ್ದಾರೆ, 5000 ರನ್ ಪೂರೈಸಿದ್ದಾರೆ. ಇವತ್ತು ಅವರ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಮಾಡುತ್ತಿದ್ದು ತುಂಬಾ ಖುಷಿಯಾಗುತ್ತಿದೆ. ಪ್ರತೀ ಹುಟ್ಟುಹಬ್ಬವನ್ನು ಅವರ ಜೊತೆ ವಿಶೇಷವಾಗಿ ಆಚರಿಸುತ್ತಿದ್ದು, ಈ ಬಾರಿ ಈಟಿವಿ ಭಾರತದ ಮುಖಾಂತರ ಅವರಿಗೆ ಹುಟ್ಟುಹಬ್ಬದ ವಿಶೇಷ ಶುಭಾಶಯ ಕೋರುತ್ತೇನೆ ಎಂದು ಅಭಿಮಾನಿ ಹೇಳಿಕೊಂಡಿದ್ದಾನೆ.

ಶಿಖರ್ ಧವಶಿಖರ್ ಧವನ್​ ಹುಟ್ಟುಹಬ್ಬ ಆಚರಣೆನ್ ಜೊತೆ ಸೂರ್ಯ
ಶಿಖರ್ ಧವನ್​ ಹುಟ್ಟುಹಬ್ಬ ಆಚರಣೆ

ಬೆಂಗಳೂರು: ಭಾರತೀಯ ಕ್ರಿಕೆಟರ್, ಸ್ಫೋಟಕ ಆರಂಭಿಕ ಬ್ಯಾಟ್ಸ್​ಮನ್ ಶಿಖರ್ ಧವನ್ 35ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಯೊಬ್ಬರು ಇಂದು ನಗರದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ.

ಶಿಖರ್ ಧವನ್ ಜೊತೆ ಸೂರ್ಯ
ಶಿಖರ್ ಧವನ್ ಜೊತೆ ಸೂರ್ಯ

ಧವನ್​ ದೆಹಲಿಯ ಆಟಗಾರನಾಗಿದ್ದರೂ ದೇಶದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಬೆಂಗಳೂರಿನ ಅವರ ಕಟ್ಟಾ ಅಭಿಮಾನಿ ಸೂರ್ಯ ಎಂಬುವರ ಅಭಿಮಾನಕ್ಕೆ ಧವನ್​ ಸೋತಿದ್ದು, ಆತ್ಮೀಯ ಗೆಳಯನನ್ನಾಗಿಸಿಕೊಂಡಿದ್ದಾರೆ. ಇಂದು ಧವನ್​ ಜನ್ಮದಿನವಾಗಿರುವುದರಿಂದ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಸುಮಾರು 300 ಜನರಿಗೆ ಉಚಿತವಾಗಿ ಸೂರ್ಯ ಊಟ ಹಂಚುವ ಮೂಲಕ ತಮ್ಮ ಆದರ್ಶ ಕ್ರಿಕೆಟರ್ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಮುಂದೆಯೂ ಹಲವಾರು ಸಾಮಾಜಿಕ ಕಾರ್ಯಗಳನ್ನು ಶಿಖರ್ ಧವನ್ ಹೆಸರಲ್ಲಿ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಶಿಖರ್ ಧವನ್​ ಹುಟ್ಟುಹಬ್ಬ ಆಚರಣೆ

ಈಟಿವಿ ಭಾರತದೊಂದಿಗೆ ತಮ್ಮ ನೆಚ್ಚಿನ ಆಟಗಾರನ ಹುಟ್ಟುಹಬ್ಬ ಹಾಗೂ ಅವರ ಜೊತೆ ಇರುವ ವಿಶಿಷ್ಟ ಸಂಬಂಧವನ್ನು ಹಂಚಿಕೊಂಡಿದ್ದಾರೆ. ಹತ್ತು ವರ್ಷದಿಂದ ಅವರ ಆಟವನ್ನು ನೋಡುತ್ತಾ ಬರುತ್ತಿದ್ದೇನೆ. 2010ರಲ್ಲಿ ವಿಶಾಖಪಟ್ಟಣದಲ್ಲಿ ಚೊಚ್ಚಲ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ಆಡಿದರು. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಟೆಸ್ಟ್ ಕ್ರಿಕೆಟ್​ಗೂ ಪದಾರ್ಪಣೆ ಮಾಡಿ, ತಮ್ಮ ಮೊದಲ ಇನ್ನಿಂಗ್ಸ್​ನಲ್ಲೆ 187 ರನ್ ಗಳಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದಾರೆ. ಅವರು ಗೆಲುವನ್ನು ಆಚರಿಸುವ, ಮೀಸೆ ಬಿಟ್ಟುರುವ ರೀತಿ ನನಗೆ ತುಂಬಾ ಇಷ್ಟವಾಯಿತು. ಅವರನ್ನು ಭೇಟಿ ಮಾಡಲು ಮೊದಲ 4 ವರ್ಷ ಕಷ್ಟ ಪಟ್ಟೆ. ಹೋಟೆಲ್, ಕ್ರಿಕೆಟ್ ಮೈದಾನಗಳಲ್ಲಿ ಭೇಟಿ ಮಾಡಲು ಪ್ರಯತ್ನಿಸಿದೆ ಎಂದು ತಮ್ಮ ಹಾಗೂ ಧವನ್​ ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ.

ಶಿಖರ್ ಧವನ್ ಜೊತೆ ಸೂರ್ಯ
ಶಿಖರ್ ಧವನ್ ಜೊತೆ ಸೂರ್ಯ

ಸುರಕ್ಷತಾ ದೃಷ್ಟಿಯಿಂದ ಮೊದ ಮೊದಲು ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ವರ್ಷಗಳ ನಂತರ ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿತು. ಆಗ ನನ್ನನ್ನು ನೋಡಿ ತುಂಬಾ ಖುಷಿ ಪಟ್ಟರು. ಅವರ ಥರಾನೇ ಮೀಸೆ ಬಿಟ್ಟಿದ್ದೆ. ನನ್ನನ್ನು ಶಿಖರ್ 2 ಹಾಗೂ ಗಬ್ಬರ್ ಅಂತ ನೋಡಿದ ತಕ್ಷಣ ಕರೆದರು. ಆ ಕ್ಷಣದಿಂದ ನಮ್ಮ ಮಧ್ಯೆ ಒಳ್ಳೆಯ ಸ್ನೇಹ ಬೆಳೆಯಿತು. ಐಪಿಎಲ್ ಪಂದ್ಯಾವಳಿಗಳಿಗೆ 5ರಿಂದ 6 ವರ್ಷದಿಂದ ಟಿಕೆಟ್​ ಕೊಡುತ್ತಿದ್ದಾರೆ. ನಾನು ಒಂದು ಸಂದೇಶ ಕಳಿಸಿದರೂ ತಕ್ಷಣ ಪ್ರತಿಕ್ರಿಯಿಸುತ್ತಾರೆ. ತುಂಬಾ ಒಳ್ಳೆಯ ವ್ಯಕ್ತಿ ಎಂದು ಬಣ್ಣಿಸಿದರು ಸೂರ್ಯ.

ಶಿಖರ್ ಧವನ್ ಜೊತೆ ಸೂರ್ಯ
ಶಿಖರ್ ಧವನ್ ಜೊತೆ ಸೂರ್ಯ

2020ರ ಐಪಿಎಲ್​ನಲ್ಲಿ ಒಳ್ಳೆಯ ಪ್ರದರ್ಶನ ತೋರಿದ್ದಾರೆ, 5000 ರನ್ ಪೂರೈಸಿದ್ದಾರೆ. ಇವತ್ತು ಅವರ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಮಾಡುತ್ತಿದ್ದು ತುಂಬಾ ಖುಷಿಯಾಗುತ್ತಿದೆ. ಪ್ರತೀ ಹುಟ್ಟುಹಬ್ಬವನ್ನು ಅವರ ಜೊತೆ ವಿಶೇಷವಾಗಿ ಆಚರಿಸುತ್ತಿದ್ದು, ಈ ಬಾರಿ ಈಟಿವಿ ಭಾರತದ ಮುಖಾಂತರ ಅವರಿಗೆ ಹುಟ್ಟುಹಬ್ಬದ ವಿಶೇಷ ಶುಭಾಶಯ ಕೋರುತ್ತೇನೆ ಎಂದರು.

ಶಿಖರ್ ಧವನ್ ಜೊತೆ ಸೂರ್ಯ
ಶಿಖರ್ ಧವನ್ ಜೊತೆ ಸೂರ್ಯ

ಇದೇ ವೇಳೆ ಒಂದು ವಿಶೇಷ ಸಂದರ್ಭದ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯದ ನಂತರ ತುಂಬಾ ಜನ ಅವರನ್ನು ಸುತ್ತುವರೆದಿದ್ದರು. ನಾನು ಹಿಂದೆ ನಿಂತು ಗಮನಿಸುತ್ತಿದ್ದೆ. ಆದರೆ ಅವರೇ ನನ್ನ ಬಳಿ ಬಂದು ನನ್ನ ಕುಶಲೋಪರಿ ವಿಚಾರಿಸಿದರು. ಈ ಘಟನೆಯನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅವರು ಅಷ್ಟು ಒಳ್ಳೆಯ, ಹೃದಯವಂತ ಮನುಷ್ಯ ಎಂದು ವರ್ಣಿಸಿದರು.

ಶಿಖರ್ ಧವನ್ ಜೊತೆ ಸೂರ್ಯ
ಶಿಖರ್ ಧವನ್ ಜೊತೆ ಸೂರ್ಯ

ಅವರಿಗೆ ನಮ್ಮ ಬೆಂಗಳೂರು ತುಂಬಾ ಇಷ್ಟ. ಇಲ್ಲಿನ ಹವಾಮಾನ, ಪರಿಸರ ಅವರು ತುಂಬಾ ಇಷ್ಟಪಡುತ್ತಾರೆ. ಇಲ್ಲಿನ ಫಿಲ್ಟರ್ ಕಾಫಿ ಅವರಿಗೆ ಪಂಚಪ್ರಾಣ ಎಂದು ಶಿಖರ್​​ಗೆ ಬೆಂಗಳೂರು ಬಗ್ಗೆ ಇರುವ ಪ್ರೀತಿ ಕುರಿತು ಹೇಳಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.