ETV Bharat / state

ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ಮಾಡಿದ ಕಾರು ಮಾಲೀಕರ ಕುಟುಂಬ: ವಿಡಿಯೋ ವೈರಲ್ - ಪೊಲೀಸರ ಮೇಲೆ ಹಲ್ಲೆ

ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಕಾರಿಗೆ ಕ್ಲಾಂಪ್ ಹಾಕಿದನ್ನು ಪ್ರಶ್ನಿಸಿ ಟ್ರಾಫಿಕ್ ಕಾನ್ಸ್​​ಟೇಬಲ್​​ ಮೇಲೆ ಕಾರು ಮಾಲೀಕರ ಕುಟುಂಬದ ಸದಸ್ಯರು ಹಲ್ಲೆ ಮಾಡಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಜರುಗಿದೆ.

Attack on traffic police
ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ಮಾಡಿದ ಕಾರು ಮಾಲೀಕರ ಕುಟುಂಬ: ವಿಡಿಯೋ ವೈರಲ್
author img

By

Published : Jul 20, 2023, 10:09 PM IST

ಬೆಂಗಳೂರು: ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಕಾರಿಗೆ ಕ್ಲಾಂಪ್ ಹಾಕಿದನ್ನು ಪ್ರಶ್ನಿಸಿ ಟ್ರಾಫಿಕ್ ಕಾನ್ಸ್​ಟೇಬಲ್​ ಮೇಲೆ ಕಾರು ಮಾಲೀಕರ ಕುಟುಂಬ ಹಲ್ಲೆ ನಡೆಸಿದ ಆರೋಪದಡಿ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉಮೇಶ್ ಹಲ್ಲೆಗೊಳಗಾದ ಟ್ರಾಫಿಕ್ ಕಾನ್ಸ್​​ಟೇಬಲ್​. ಬಾಣಸವಾಡಿಯ ಎಚ್ ಬಿಆರ್ ಲೇಔಟ್​ನಲ್ಲಿ ಜುಲೈ 19 ರಂದು ಸಂಜೆ ಈ ಘಟನೆ ನಡೆದಿದೆ‌. ಅಂದು ಸಂಜೆ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಾರಿನ ಚಕ್ರಕ್ಕೆ ಕಾನ್ಸ್​ಟೇಬಲ್​ ಉಮೇಶ್ ಕ್ಲಾಂಪ್ ಹಾಕಿ ಹೋಗಿದ್ದಾರೆ. ಕೆಲಹೊತ್ತಿನ ಬಳಿಕ ಬಂದ ಇಬ್ಬರು ಮಹಿಳೆಯರು ಸೇರಿ ನಾಲ್ವರು ಕಾರಿನ ಮಾಲೀಕರ ಕುಟುಂಬ ಸ್ಥಳಕ್ಕೆ ಬಂದು ನೋಡಿದಾಗ ಕಾರಿಗೆ ಕ್ಲಾಂಪ್ ಹಾಕಿರುವುದು ಗೊತ್ತಾಗಿದೆ.

ಕುಟುಂಬಸ್ಥರ‌ ಪೈಕಿ ಓರ್ವ ಮಹಿಳೆ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆ ಹೋಗಲು ಸಿದ್ಧವಾಗಿದ್ದರು. ಅಷ್ಟೊತ್ತಿಗಾಗಲೇ ಕಾನ್ಸ್​ಟೇಬಲ್​ ಕ್ಲಾಂಪ್ ಹಾಕಿರುವ ವಿಷ್ಯ ತಿಳಿದಿದೆ.‌ ಕೆಲ ಹೊತ್ತಿನ ಎಎಸ್ಐ ಸೂಚನೆ‌ ಮೇರೆಗೆ ಸ್ಥಳಕ್ಕೆ ಬಂದ‌ ಉಮೇಶ್, ಕ್ಲಾಂಪ್ ಬಿಚ್ಚಲು ಮುಂದಾಗಿದ್ದಾರೆ. ಈ ವೇಳೆ ಮಾತಿನ ಚಕಮಕಿ‌ ನಡೆದಿದೆ‌. ಕಾನ್ಸ್​ಟೇಬಲ್​​ ​ನೊಂದಿಗೆ ಅಸಭ್ಯವಾಗಿ ವರ್ತಿಸಿ, ನಿಂದಿಸಿ ಹಲ್ಲೆ ನಡೆಸಿದ್ದಾರೆ‌. ಹಲ್ಲೆ ಮಾಡಿರುವ ದೃಶ್ಯ ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.‌ ಸದ್ಯ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕಾನ್ಸ್​ಟೇಬಲ್​ ನೀಡಿದ ದೂರು ಮೇರೆಗೆ ಪ್ರಕರಣ ದಾಖಲಾಗಿದೆ.

ಈ ಹಿಂದೆ, ಪೊಲೀಸರ ಮೇಲೆ ಹಲ್ಲೆ: ಇಬ್ಬರು ಪೊಲೀಸ್ ಕಾನ್ಸ್​ಟೇಬಲ್​​​ಗಳನ್ನು ಅಪಹರಿಸಿ, ಅವರ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ ಪತ್ರಕರ್ತ ಸೇರಿದಂತೆ ಐವರನ್ನು ಬಂಧಿಸಲಾಗಿತ್ತು ಎಂದು ಹೈದರಾಬಾದ್​ ಪೊಲೀಸರು ಇತ್ತೀಚೆಗೆ ತಿಳಿಸಿದ್ದರು. ಯೂಟ್ಯೂಬ್ ಚಾನಲ್ 'ಕ್ಯೂ ನ್ಯೂಸ್'ನ ವಾರ್ತಾ ವಾಚಕ ಚಿಂತಪಂಡು ನವೀನ್ ಕುಮಾರ್ ಬಂಧಿತ ಪ್ರಮುಖ ಆರೋಪಿ ಆಗಿದ್ದ. ಇಲ್ಲಿನ ಪೀರ್ಜಾಡಿಗುಡಾದಲ್ಲಿ ಇತ್ತೀಚೆಗೆ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್​ ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಲಾಠಿಗಳ ಸಮೇತ ಮೂವರು ವ್ಯಕ್ತಿಗಳು ಬಂದು ದೊಣ್ಣೆಗಳನ್ನು ಹಿಡಿದುಕೊಂಡು ಬಂದಿದ್ದರು. ಆ ವೇಳೆ ಇಬ್ಬರೂ ಪೊಲೀಸರನ್ನು ಹಿಡಿದುಕೊಂಡು ಬಲವಂತವಾಗಿ ಕ್ಯೂ ನ್ಯೂಸ್ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಅಲ್ಲದೇ, ಕಚೇರಿಯಲ್ಲಿ ಕಾನ್ಸ್​ಟೇಬಲ್​ಗಳನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದರು. ಅವರ ಮೊಬೈಲ್​ ಫೋನ್‌ಗಳನ್ನೂ ಈ ಗ್ಯಾಂಗ್ ಕಸಿದುಕೊಂಡಿತ್ತು ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ: ಪ್ರತ್ಯೇಕ ಪ್ರಕರಣ: ಪ್ರಾಂಶುಪಾಲರ ವಿರುದ್ಧ ಕಿರುಕುಳ ದೂರು: ಮತ್ತೊಂದು ಪ್ರಕರಣದಲ್ಲಿ ಯುವಕನ ಲವ್ವಿಡವ್ವಿ, ಬಾಲಕಿ ಗರ್ಭಿಣಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.