ETV Bharat / state

ಸೂಸೈಡ್ ನೋಟ್ ಬರೆದಿಟ್ಟು ನಾಪತ್ತೆಯಾದ ಕುಟುಂಬ : ಕುಟುಂಬಸ್ಥರಿಗಾಗಿ ಹುಡುಕಾಟ ನಡೆಸಿದ ಮಗ - bengalore family wrote death note

ವಿಷಯ ತಿಳಿದು ಗಾಬರಿಗೊಂದ ಚಿರಂಜೀವಿ ನೇರವಾಗಿ ಬೆಂಗಳೂರಿಗೆ ಬಂದಿದ್ದಾನೆ. ನಂತರ ತನ್ನ ಬಳಿ ಇದ್ದ ಡೂಪ್ಲಿಕೇಟ್ ಕೀ ತೆರೆದು ನೋಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಮನೆಯ ಕಿಟಿಕಿ ಬಳಿ ಸೂಸೈಡ್ ನೋಟ್ ಬರೆದಿಟ್ಟಿರುವ ಕುಟುಂಬ ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ..

family-members-wrote-death-note-and-escaped-in-bengalore
ಸೂಸೈಡ್ ನೋಟ್ ಬರೆದಿಟ್ಟು ನಾಪತ್ತೆಯಾದ ಕುಟುಂಬ
author img

By

Published : Aug 18, 2021, 7:32 PM IST

ಬೆಂಗಳೂರು : ಮನುಷ್ಯನಿಗೆ ಜೀವನದಲ್ಲಿ‌ ಬೇಸರವಾದಾಗ, ಜೀವದ ಮೇಲೆಯೇ ಜಿಗುಪ್ಸೆ ಬಂದರೆ ಅದೆಷ್ಟೋ ಮಂದಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಾರೆ.‌ ಅದ್ರಲ್ಲೂ ಹೆಚ್ಚಾಗಿ ಸಾಲ ಮಾಡಿ ತೀರಿಸಲಾಗದೆ ಅನೇಕರು ಹೆದರಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಇಂತಹವರ ಸಾಲಿಗೆ ಸೇರುವ ಕುಟುಂಬವೊಂದು ಸೂಸೈಡ್ ನೋಟ್ ಬರೆದಿಟ್ಟು ಕಾಣೆಯಾಗಿದೆ.

ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಡೀ ಕುಟುಂಬಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಗಾಂಧಿ, ಶಾಲಿನಿ, ಭಾನುಶ್ರೀ ಹಾಗೂ ಹೇಮಶ್ರೀ ನಾಪತ್ತೆಯಾದವರು. ದಂಪತಿಗೆ ಮತ್ತೋರ್ವ ಮಗ ಚಿರಂಜೀವಿ ಎಂಬಾತನಿದ್ದಾನೆ. ಆತ ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.‌

ಪ್ರತಿನಿತ್ಯ ಸಹೋದರಿ ಮತ್ತು ಪೋಷಕರ ಜೊತೆ ಮಗ ಚಿರಂಜೀವಿ ಮಾತನಾಡುತ್ತಿದ್ದ. ಆದ್ರೆ, ಆ.12ರಂದು ಮನೆಗೆ ಕರೆ‌ ಮಾಡಿದಾಗ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಭಯಗೊಂಡ ಚಿರಂಜೀವಿ ಪೋಷಕರ ಮನೆ ಬಳಿ ಇದ್ದ ತನ್ನ ಸ್ನೇಹಿತನಿಗೆ ಮಾಹಿತಿ ತಿಳಿಸಿ ಮನೆಗೆ ಹೋಗಿ ಚೆಕ್ ಮಾಡಲು ಹೇಳಿದ್ದ.

ಈ ವೇಳೆ ಮನೆ ಸಂಪೂರ್ಣ ಲಾಕ್ ಆಗಿತ್ತು. ಮನೆ‌‌ ಮಾಲೀಕರನ್ನ ಕೇಳಿದಾಗ, ಅವರು ಫ್ಯಾಮಿಲಿ ಸಮೇತ ವಸ್ತುಗಳೆಲ್ಲವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ಕೂಡಲೇ ಈ ಮಾಹಿತಿಯನ್ನ ಸ್ನೇಹಿತ ಚಿರಂಜೀವಿಗೆ ತಿಳಿಸಿದ್ದಾನೆ.

ಕುಟುಂಬ ಕಣ್ಮರೆ : ವಿಷಯ ತಿಳಿದು ಗಾಬರಿಗೊಂದ ಚಿರಂಜೀವಿ ನೇರವಾಗಿ ಬೆಂಗಳೂರಿಗೆ ಬಂದಿದ್ದಾನೆ. ನಂತರ ತನ್ನ ಬಳಿ ಇದ್ದ ಡೂಪ್ಲಿಕೇಟ್ ಕೀ ತೆರೆದು ನೋಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಮನೆಯ ಕಿಟಿಕಿ ಬಳಿ ಸೂಸೈಡ್ ನೋಟ್ ಬರೆದಿಟ್ಟಿರುವ ಕುಟುಂಬ ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ.

ಮಿಸ್ಸಿಂಗ್ ಕಂಪ್ಲೇಂಟ್ : 'ನಮಗೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ. ಈ ಜೀವನ ಬೇಡವೇ ಬೇಡ. ದಯಮಾಡಿ ನಮ್ಮನ್ನ ಸಾಯಲು ಬಿಡಿ."ಹೀಗಂತಾ, ಸೂಸೈಡ್ ನೋಟ್ ಬರೆದಿಟ್ಟು ಕಾಣೆಯಾಗಿದ್ದಾರೆ. ಕೂಡಲೇ ಬಗಲಗುಂಟೆ ಪೊಲೀಸರಿಗೆ ಮಾಹಿತಿ ತಿಳಿಸಿದ ಚಿರಂಜೀವಿ, ಮಿಸ್ಸಿಂಗ್ ಕಂಪ್ಲೇಂಟ್​ ದಾಖಲಿಸಿಕೊಂಡು ಹುಡುಕಾಟ ನಡೆಸಿದ್ದಾರೆ.

ಓದಿ: corona precautions.. ಮಾರ್ಷಲ್​ಗಳ 54 ಟೀಂ ನೇಮಕ ಮಾಡಲಾಗಿದೆ.. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.