ಕೆಆರ್ ಪುರ: ಈ ಬಾರಿ ಎಲ್ಲಿಯೂ ನಕಲಿ ಮತದಾನ ಆಗಬಾರದೆಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಬೆಂಗಳೂರು ಪೂರ್ವ ತಾಲ್ಲೂಕಿನ ಕೆಆರ್ ಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ನಕಲಿ ಮತದಾನ ಆಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಎ.ಪಿ ರಂಗನಾಥ್ ಆರೋಪಿಸಿದ್ದಾರೆ.
ಈ ಕಾಲೇಜಿನಲ್ಲಿ ಕೇವಲ 18 ಶಿಕ್ಷಕ ಮತದಾರರು ಇರುವುದು ಆದರೆ 80 ಶಿಕ್ಷಕರು ಮತದಾನ ಮಾಡಿದ್ದಾರೆ, ಇವರೆಲ್ಲ ತುಮಕೂರು ಜಿಲ್ಲೆಯ ಶಿಕ್ಷಕರಾಗಿದ್ದು ಇದರ ಬಗ್ಗೆ ಚುನಾವಣಾ ಆಯೋಗಕ್ಕೆ ದೂರನ್ನು ನೀಡಲಾಗುವುದು ಮತ್ತು ನಕಲಿ ಸಹಿ ಹಾಕಿದವರ ವಿರುದ್ಧ ಕಾನೂನು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಕಾಲೇಜಿನ ಪ್ರಾಂಶುಪಾಲರು ಹೊಣೆನಾ ಅಥವಾ ಡಿಡಿಪಿ ಹೊಣೆನಾ ಇವರ ಮೇಲೆ ತಕ್ಷಣ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಅನರ್ಹ ಶಿಕ್ಷಕರು, ನಕಲಿ ಶಿಕ್ಷಕರ ವಿರುದ್ಧ ಎಫ್ಐಆರ್ ದಾಖಲು ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದರು.
ಇಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಯಶಸ್ವಿಯಾಗಿ ನಡೆದಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಜಿಲ್ಲೆಯಲ್ಲಿ ಸುಮಾರು ಶೇ 90 ರಷ್ಟು ಮತದಾನ ಆಗಿದೆ. ಬೆಂಗಳೂರಿನಲ್ಲಿ ಅರವತ್ತು ರಿಂದ ಎಂಭತ್ತು ಪ್ರತಿಶತದಷ್ಟು ಮತದಾನ ಆಗಿದೆ ಎಂದರು. ಜನರು ಹೊಸತನ್ನು ಬಯಸುತ್ತಿದ್ದಾರೆ ಆ ದೃಷ್ಟಿಯಿಂದ ಜನ ನನ್ನನ್ನು ನೂರಕ್ಕೆ ನೂರರಷ್ಟು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.