ETV Bharat / state

ಅಂಗಡಿ ಮಾಲೀಕರೇ ಎಚ್ಚರ.. ಜೆರಾಕ್ಸ್ ನೋಟು ಕೊಟ್ಟು ಯಾಮಾರಿಸ್ತಾರೆ ಚಾಲಾಕಿಗಳು!

ಪಶ್ಚಿಮ ವಿಭಾಗದ ಕಾಟನ್​​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ಕಿಡಿಗೇಡಿಗಳು ಸಣ್ಣ ಅಂಗಡಿ ಮಾಲೀಕರನ್ನು ಟಾರ್ಗೆಟ್​ ಮಾಡಿ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

Fake note transaction cases found in Bangalore
ಬೆಂಗಳೂರಲ್ಲಿ ಚುರುಕಾದ ನಕಲಿ ನೋಟು ಚಲಾವಣೆ ಜಾಲ ಪತ್ತೆ
author img

By

Published : Dec 26, 2021, 5:59 PM IST

ಬೆಂಗಳೂರು: ನಕಲಿ ನೋಟು ಚಲಾವಣೆ ಜಾಲ ಮತ್ತೆ ನಗದಲ್ಲಿ ತಲೆ ಎತ್ತಿದೆ. ಜೆರಾಕ್ಸ್ ಮಾಡಿದ ₹100 ಮುಖಬೆಲೆಯ ನೋಟು ನೀಡಿ ಕಿಡಿಗೇಡಿಗಳು ವಂಚಿಸುತ್ತಿದ್ದಾರೆ.

ಬೆಂಗಳೂರಲ್ಲಿ ನಕಲಿ ನೋಟು ಚಲಾವಣೆ ಜಾಲ

ಪಶ್ಚಿಮ ವಿಭಾಗದ ಕಾಟನ್​​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಹೋಟೆಲ್​, ಬೀಡಾ ಅಂಗಡಿ, ಜನರಲ್​ ಸ್ಟೋರ್​ ಸೇರಿದಂತೆ ಸಣ್ಣಪುಟ್ಟ ಅಂಗಡಿಗಳನ್ನು ಟಾರ್ಗೆಟ್​ ಮಾಡಿರುವ ಖದೀಮರು, ಜೆರಾಕ್ಸ್ ಮಾಡಿದ ನೋಟುಗಳನ್ನು ಚಲಾವಣೆ ಮಾಡುತ್ತಿದ್ದಾರೆ.

ಹೊರಗಿನಿಂದ ಬಂದು ಲಾಡ್ಜ್​​​ನಲ್ಲಿ ಉಳಿದುಕೊಂಡವರಿಂದ ಈ ಕೃತ್ಯ ನಡೆಯುತ್ತಿರುವ ಶಂಕೆಯಿದ್ದು, ಹೆಚ್ಚು ಜನರಿರುವ ಸಮಯ ನೋಡಿ ಕೃತ್ಯ ಎಸಗುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಕುರಿತಂತೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಅಂಗಡಿ ಮಾಲೀಕರಿಂದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಯಲಹಂಕದಲ್ಲಿ BEO ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.