ಬೆಂಗಳೂರು : ನಕಲಿ ನಾಗಮಣಿ ಹಾಗೂ ರೆಡ್‌ಸ್ಯಾಂಡ್‌ಬೋ ಎಂಬ ಎರಡು ತಲೆಯ ಹಾವುಗಳನ್ನ ಮಾರಾಟ ಮಾಡುತ್ತಿದ್ದ ಆರೋಪದಡಿ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರನ್ನು ಮಹಾಲಕ್ಷೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ವೇಳೆ ಮಹಾಲಕ್ಷೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಇಸ್ಕಾನ್ ಬಳಿ ಕ್ರೆಟಾ ಕಾರಿನಲ್ಲಿ ನಕಲಿ ನಾಗಮಣಿಯನ್ನು 1ರಿಂದ 2 ಕೋಟಿ ರೂಪಾಯಿವರೆಗೊ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ಯಾರುಬಾಯಿ ಬಿನ್ ಸೈಯದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹಾಗೆಯೇ ಮತ್ತೊಂದು ತಂಡ ಎಪಿಎಂಸಿ ಯಾರ್ಡ್ ತರಕಾರಿ ಮಾರ್ಕೆಟ್ ರಸ್ತೆ ಬಳಿ ರೆಡ್ ಸ್ಯಾಂಡ್‌ಬೋ ಎಂಬ ಎರಡು ತಲೆಯ ಹಾವುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಶಿವಣ್ಣ, ಕೃಷ್ಷಪ್ಪ ಎಂಬುವರೇ ಬಂಧಿತ ಆರೋಪಿಗಳು.
ಆರೋಪಿಗಳು ಈ ಕೃತ್ಯಕ್ಕಾಗಿ ಬಳಸಿದ ಹುಂಡೈ ಕ್ರೆಟಾ ಕಾರು, ನಕಲಿ ನಾಗಮಣಿ, ಎರಡು ತಲೆಯ ಹಾವನ್ನು ವಶಪಡಿಸಿಕೊಂಡಮಹಾಲಕ್ಷೀ ಲೇಔಟ್ ಠಾಣೆಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.