ETV Bharat / state

ಸಹಕಾರ ಸಚಿವ ಎಸ್​.ಟಿ.ಸೋಮಶೇಖರ್ ಹೆಸರಲ್ಲಿ ನಕಲಿ ಫೇಸ್​ಬುಕ್ ಅಕೌಂಟ್ - Fake Facebook account in the name of Minister ST Somashekhar news

ಇಷ್ಟು ದಿನಗಳ ಕಾಲ ಹಣ ವಸೂಲಿ ಮಾಡಲು ಸಾಮಾನ್ಯ ಜನರನ್ನ ಟಾರ್ಗೆಟ್ ಮಾಡುತ್ತಿದ್ದ ಸೈಬರ್ ಖದೀಮರು, ಇದೀಗ ಸಹಕಾರ ಸಚಿವ ಎಸ್​.ಟಿ.ಸೋಮಶೇಖರ್ ಹೆಸರಲ್ಲಿ ನಕಲಿ ಫೇಸ್​ಬುಕ್ ಅಕೌಂಟ್ ಕ್ರಿಯೇಟ್ ಮಾಡಿ ಹಣ ಕೇಳುತ್ತಿದ್ದಾರೆ.

Fake Facebook account in the name of Minister ST Somashekhar news
ಸಹಕಾರ ಸಚಿವ ಎಸ್​.ಟಿ.ಸೋಮಶೇಖರ್ ಹೆಸರಲ್ಲಿ ನಕಲಿ ಫೇಸ್​ಬುಕ್ ಅಕೌಂಟ್
author img

By

Published : Jul 7, 2021, 5:01 PM IST

ಬೆಂಗಳೂರು: ಸೈಬರ್ ಕ್ರೈಂ ವಂಚಕರು ಇಷ್ಟು ದಿನಗಳ ಕಾಲ ಹಣ ವಸೂಲಿ ಮಾಡಲು ಸಾಮಾನ್ಯ ಜನರನ್ನ ಟಾರ್ಗೆಟ್ ಮಾಡುತ್ತಿದ್ದರು.‌ ಸಾಮಾಜಿಕ‌ ಜಾಲತಾಣದಲ್ಲಿ ನಕಲಿ‌ ಖಾತೆ ತೆರೆದು ಜನರ ಬಳಿ ಹಣ ವಸೂಲಿ ಮಾಡಿ‌ ಮೋಸ ಮಾಡುತ್ತಿದ್ದರು. ಆ ನಂತರ ಈ ಸೈಬರ್ ವಂಚಕರು IPS, IAS ಅಧಿಕಾರಿಗಳ ಹೆಸರಿನಲ್ಲಿ ದುಡ್ಡು ಕೀಳಲಾರಂಭಿಸಿದ್ದರು. ಆದರೆ ಇದೀಗ ಸಚಿವರ ಸೈಬರ್ ಕ್ರೈಂ ವಂಚಕರು ಟಾರ್ಗೆಟ್ ಮಾಡುತ್ತಿದ್ದಾರೆ.

ಸಹಕಾರ ಸಚಿವ ಎಸ್​.ಟಿ.ಸೋಮಶೇಖರ್ ಹೆಸರಲ್ಲಿ ನಕಲಿ ಫೇಸ್​ಬುಕ್ ಅಕೌಂಟ್ ಕ್ರಿಯೇಟ್ ಮಾಡಿ ವಂಚಕರು ಹಣ ಕೇಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಚಿವರ ಪಿಎ ಚೇತನ್‌ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.

ಮಿನಿಸ್ಟರ್ ಹೆಸರಲ್ಲಿ ಹಣ ಕೇಳುತ್ತಿರುವುದಲ್ಲದೇ, ವಂಚಕರು ಸಾಮಾಜಿಕ ಜಾಲತಾಣದಲ್ಲಿ ಪಕ್ಷ ಹಾಗೂ ನಾಯಕರ ವಿರುದ್ಧ ಅವಹೇಳನಾಕಾರಿ ಹೇಳಿಕೆಯ ಪೋಸ್ಟ್ ಕೂಡ ಮಾಡುತ್ತಿದ್ದಾರೆ.‌ ಈ ವಂಚಕರು‌ ಒಂದು ಮೊಬೈಲ್ ನಂಬರ್ ಹಾಕಿ ಹಣ ವರ್ಗಾವಣೆ ಮಾಡುವಂತೆ ಸೈಬರ್ ವಂಚನೆ ಮಾಡುತ್ತಿದ್ದಾರೆ.

ಈ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.