ETV Bharat / state

ಕ್ರಿಮಿನಲ್ ಪ್ರಕರಣಗಳಲ್ಲಿ ಅಭಿಯೋಜನೆಗೆ ಸೋಲು: ಖುಲಾಸೆ ಪರಿಶೀಲನಾ ಸಮಿತಿ ಮಾಡುತ್ತಿರುವುದೇನು? - ಆರೋಪಿಗಳು ಶಿಕ್ಷೆಯಿಂದ ಪಾರು

ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ಬೇಜವಾಬ್ದಾರಿಯಿಂದ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗುವುದನ್ನು ತಪ್ಪಿಸಲು ಸುಪ್ರೀಂ ಕೋರ್ಟ್ 2014ರ ಜನವರಿ 7ರಂದು ಖುಲಾಸೆಗೊಂಡ ಕ್ರಿಮಿನಲ್ ಪ್ರಕರಣಗಳನ್ನು ಪರಿಶೀಲನೆ ನಡೆಸಲು ಸಮಿತಿಯನ್ನು ರಚಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ.

Failure to prosecute criminal cases
ಕ್ರಿಮಿನಲ್ ಪ್ರಕರಣಗಳಲ್ಲಿ ಅಭಿಯೋಜನೆಗೆ ಸೋಲು
author img

By

Published : Nov 21, 2020, 9:56 PM IST

Updated : Nov 23, 2020, 7:47 PM IST

ಬೆಂಗಳೂರು: ಕಳ್ಳತನ, ಗಲಾಟೆ, ಹಲ್ಲೆಯಂತಹ ಸಣ್ಣ ಪ್ರಮಾಣದ ಅಪರಾಧಗಳಿಂದ ಹಿಡಿದು ಕೊಲೆ, ಸುಲಿಗೆ, ಅತ್ಯಾಚಾರದಂತಹ ಗಂಭೀರ ಸ್ವರೂಪದ ಪ್ರಕರಣಗಳವರೆಗೂ ಆರೋಪಿಗಳು ಶಿಕ್ಷೆಯಿಂದ ಪಾರಾಗುತ್ತಿರುವುದು ಸಾಕಷ್ಟು ಕಾಲದಿಂದಲೂ ಚರ್ಚೆಯಾಗುತ್ತಲೇ ಬರುತ್ತಿದೆ. ಇದಕ್ಕೆ ಕಾರಣ ಹಲವಿದ್ದರೂ ತನಿಖೆ ಹಾಗೂ ವಿಚಾರಣೆ ಸಂದರ್ಭದಲ್ಲಿನ ಲೋಪಗಳು ಅತ್ಯಂತ ಮುಖ್ಯವಾದವು ಎಂಬುದು ಗಮನಾರ್ಹ.

ಆರೋಪಿಗಳು ಶಿಕ್ಷೆಯಿಂದ ಪಾರಾಗಲು ಮೊದಲ ಕಾರಣ ತನಿಖೆಯಲ್ಲಿನ ಲೋಪವಾದರೆ, ಎರಡನೇ ಕಾರಣ ಸರಿಯಾಗಿ ಅಭಿಯೋಜನೆ ನಡೆಸದಿರುವುದು. ಯಾವುದೇ ಅಪರಾಧ ಘಟಿಸಿದ ಸಂದರ್ಭದಲ್ಲಿ ಪೊಲೀಸರು ಅಥವಾ ತನಿಖಾಧಿಕಾರಿಗಳು ಪಂಚನಾಮೆಯಿಂದ ಆರಂಭಿಸಿ, ಸಾಕ್ಷ್ಯ ಸಂಗ್ರಹಿಸುವುದು, ಹೇಳಿಕೆ ದಾಖಲಿಸುವುದು, ದೋಷಾರೋಪ ಪಟ್ಟಿ ಸಿದ್ಧಪಡಿಸುವುದು ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಅತ್ಯಂತ ಕರಾರುವಕ್ಕಾಗಿ ಹಾಗೂ ಸೂಕ್ಷ್ಮತೆಯಿಂದ ಮಾಡಬೇಕಿರುತ್ತದೆ.

ಆದರೆ ಅಧಿಕಾರಿಗಳು ಇವುಗಳನ್ನು ಸರಿಯಾಗಿ ಮಾಡದಿದ್ದಾಗ ಈ ಲೋಪಗಳನ್ನೇ ಆರೋಪಿ ತನ್ನ ರಕ್ಷಣೆಗೆ ಬಳಸಿಕೊಂಡು ಖಲಾಸೆಯಾಗುತ್ತಾನೆ. ಅಂತೆಯೇ ದೋಷಾರೋಪ ಸಲ್ಲಿಕೆಯಾದ ಬಳಿಕ ನ್ಯಾಯಾಲಯದಲ್ಲಿ ಅಭಿಯೋಜಕರು ಕಾರ್ಯಾರಂಭ ಮಾಡುತ್ತಾರೆ. ಆದರೆ ರಾಜ್ಯದಲ್ಲಿ ಹಿಂದಿನಿಂದಲೂ ಪಬ್ಲಿಕ್ ಪ್ರಾಸಿಕ್ಯೂಟರ್​ಗಳ ಸಂಖ್ಯೆ ಅಗತ್ಯಕ್ಕಿಂತ ಕಡಿಮೆ ಇದೆ. ಹೆಚ್ಚುವರಿ ಕೆಲಸದ ಒತ್ತಡದಿಂದಾಗಿ ಸರ್ಕಾರಿ ಅಭಿಯೋಜಕರು ದಕ್ಷವಾಗಿ ಕೆಲಸ ಮಾಡಲು ತೊಂದರೆಯಾಗುತ್ತಿದೆ. ಇದು ಪರಿಣಾಮಕಾರಿ ವಿಚಾರಣೆಯನ್ನು ಕುಗ್ಗಿಸುತ್ತಿದ್ದು, ಆರೋಪಿಗಳು ಖುಲಾಸೆಯಾಗಲು ಕಾರಣವಾಗುತ್ತಿದೆ.

ಪೊಲೀಸರ ಪಂಚನಾಮೆ ಸಂದರ್ಭದಲ್ಲಿ ಮಾಹಿತಿ, ಹೇಳಿಕೆ, ಸಾಕ್ಷ್ಯ ದಾಖಲಿಸದಿರುವುದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸದಿರುವುದು ಪ್ರಕರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇನ್ನು ಅಭಿಯೋಜಕರು ಸೂಕ್ತ ಆಕ್ಷೇಪಣೆ, ದಾಖಲೆಗಳನ್ನು ಸಲ್ಲಿಸದಿರುವುದು, ಸಾಕ್ಷ್ಯಗಳನ್ನು ಸರಿಯಾಗಿ ಪರೀಕ್ಷೆಗೆ ಒಳಪಡಿಸದಿರುವುದು, ಪ್ರಕರಣದಲ್ಲಿ ವಾದಿಸಲು ಸಿದ್ಧತೆ ಮಾಡಿಕೊಳ್ಳದೆ ಹಾಜರಾಗುವುದು ಸೇರಿದಂತೆ ಹಲವು ಲೋಪಗಳು ಆರೋಪಿಗಳು ಶಿಕ್ಷೆಯಿಂದ ಪಾರಾಗಲು ಕಾರಣವಾಗುತ್ತಿವೆ. ತನಿಖಾಧಿಕಾರಿಗಳ ವೈಯಕ್ತಿಕ ಹಿತಾಸಕ್ತಿ ಅಥವಾ ಭ್ರಷ್ಟಾಚಾರ ಇದಕ್ಕೆ ಮೂಲ ಕಾರಣ ಎಂಬುದು ಕೂಡ ಇಲ್ಲಿ ಗಮನಾರ್ಹವಾಗಿದೆ.

ಪರಿಶೀಲನಾ ಸಮಿತಿ ರಚಿಸಲು ಸುಪ್ರೀಂ ಕೋರ್ಟ್ ಆದೇಶ:

ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ಬೇಜವಾಬ್ದಾರಿಯಿಂದ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗುವುದನ್ನು ತಪ್ಪಿಸಲು ಸುಪ್ರೀಂ ಕೋರ್ಟ್ 2014ರ ಜನವರಿ 7ರಂದು ಖುಲಾಸೆಗೊಂಡ ಕ್ರಿಮಿನಲ್ ಪ್ರಕರಣಗಳನ್ನು ಪರಿಶೀಲನೆ ನಡೆಸಲು ಸಮಿತಿ ರಚಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ. ಗುಜರಾತ್ ವರ್ಸಸ್ ಕೃಷ್ಣಭಾಯ್ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಆರೋಪಿಗಳು ತಪ್ಪಿಸಿಕೊಳ್ಳಬಾರದು ಎಂಬ ಹಿನ್ನೆಲೆಯಲ್ಲಿ ಈ ಆದೇಶ ಮಾಡಿದೆ. ಹಾಗೆಯೇ 6 ತಿಂಗಳಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಪರಿಶೀಲನಾ ಸಮಿತಿ ರಚಿಸುವಂತೆ ಸೂಚಿಸಿದೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಅಭಿಯೋಜನೆಗೆ ಸೋಲು

ರಾಜ್ಯ ಸರ್ಕಾರದ ವಿಳಂಬ ನೀತಿ:

ಸುಪ್ರೀಂ ಆದೇಶದಂತೆ 6 ತಿಂಗಳೊಳಗೆ 2014ರ ಜುಲೈ 7ರ ಹೊತ್ತಿಗೆ ರಾಜ್ಯ ಸರ್ಕಾರ ಸಮಿತಿ ರಚಿಸಬೇಕಿತ್ತು. ಆದರೆ ರಾಜ್ಯ ಸರ್ಕಾರ ಸಮಿತಿ ರಚಿಸಲು ಉತ್ಸಾಹ ತೋರಿಸಿರಲಿಲ್ಲ. ಕೊನೆಗೆ ನ್ಯಾಯಾಂಗ ನಿಂದನೆಯಾಗುವ ಭಯದಲ್ಲಿ ಗಡುವು ಮುಗಿದ ಮೂರು ತಿಂಗಳ ಬಳಿಕ ಅಕ್ಟೋಬರ್ ತಿಂಗಳಲ್ಲಿ ಸಮಿತಿ ರಚಿಸುವುದಾಗಿ ಅಧಿಸೂಚನೆ ಹೊರಡಿಸಿತ್ತು. ನಂತರ 2015ರ ಜನವರಿ 22ರಂದು ಮತ್ತೊಂದು ರಾಜ್ಯ ಪತ್ರ ಹೊರಡಿಸಿ ಮೂರು ಪರಿಶೀಲನಾ ಸಮಿತಿಗಳನ್ನು ರಚಿಸಲು ಆದೇಶ ಹೊರಡಿಸಿತ್ತು.

ಹೀಗೆ ಸಾಕಷ್ಟು ವಿಳಂಬ ಮಾಡಿ "ಖುಲಾಸೆಗೊಂಡ ಕ್ರಿಮಿನಲ್ ಪ್ರಕರಣಗಳ ಪರಿಶೀಲನಾ ಸಮಿತಿ" ರಚಿಸಲು ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನೇ ಕೈಬಿಟ್ಟಿತ್ತು. 2018ರಲ್ಲಿ ರಾಜ್ಯ ಸರ್ಕಾರದ ಈ ನಿರ್ಲಕ್ಷ್ಯವನ್ನು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ವಕೀಲ ಎಸ್.ಉಮಾಪತಿ ಅರ್ಜಿ ಸಲ್ಲಿಸಿದ ಬಳಿಕ ತಪ್ಪು ತಿದ್ದಿಕೊಂಡ ಸರ್ಕಾರ, 2019ರ ಡಿಸೆಂಬರ್ 23ರಂದು ಮತ್ತೊಂದು ಆದೇಶ ಹೊರಡಿಸಿ ವಿಶೇಷ ಕಾಯ್ದೆಗಳ ಅಡಿಯಲ್ಲಿ ಬರುವ ಪ್ರಕರಣಗಳನ್ನೂ ಪರಿಶೀಲಿಸುವುದಾಗಿ ಹೇಳಿದೆ. ಇದನ್ನು ಗಮನಿಸಿದರೆ ರಾಜ್ಯ ಸರ್ಕಾರಕ್ಕೆ ಕ್ರಿಮಿನಲ್​​ಗಳನ್ನು ಹತ್ತಿಕ್ಕುವ ಆಸಕ್ತಿ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ.

ಮೂರು ಹಂತದಲ್ಲಿ ಪರಿಶೀಲನಾ ಸಮಿತಿಗಳು:

ರಾಜ್ಯಮಟ್ಟದ ಖುಲಾಸೆ ಪರಿಶೀಲನಾ ಸಮಿತಿಯಲ್ಲಿ ಅಪರಾಧ ವಿಭಾಗದ ಹೆಚ್ಚುವರಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು (ಎಡಿಜಿಪಿ) ಅಧ್ಯಕ್ಷರು ಹಾಗೂ ರಾಜ್ಯ ಪೊಲೀಸ್ ಅಕಾಡೆಮಿ ನಿರ್ದೇಶಕ ಮತ್ತು ಪ್ರಾಸಿಕ್ಯೂಷನ್ ಇಲಾಖೆ ನಿರ್ದೇಶಕರು ಸದಸ್ಯರಾಗಿರುತ್ತಾರೆ. ಈ ಸಮಿತಿ ಸುಪ್ರೀಂ ಕೋರ್ಟ್​ನಿಂದ ಹಿಡಿದು ವಿಚಾರಣಾ ನ್ಯಾಯಾಲಯಗಳವರೆಗೆ ಕ್ರಿಮಿನಲ್ ಪ್ರಕರಣಗಳಲ್ಲಿನ ಆರೋಪಿಗಳು ಯಾವ ಕಾರಣಗಳಿಗಾಗಿ ಖುಲಾಸೆಯಾದರು, ಎಲ್ಲಿ ಲೋಪವಾಗಿದೆ ಎಂಬುದನ್ನು ಪತ್ತೆ ಹಚ್ಚಬೇಕು ಮತ್ತು ವಿಶ್ಲೇಷಿಸಿ ದಾಖಲಿಸಬೇಕು.

ಖುಲಾಸೆಯಾಗಲು ತನಿಖಾಧಿಕಾರಿ ಅಥವಾ ಅಭಿಯೋಜಕ ಕಾರಣರಾಗಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಪ್ರತಿ 3 ತಿಂಗಳಿಗೆ ಒಮ್ಮೆ ಸಭೆ ನಡೆಸಿ ವಲಯ ಮತ್ತು ಜಿಲ್ಲಾ ಸಮಿತಿಗಳ ಕಾರ್ಯವೈಖರಿಯನ್ನೂ ಪರಿಶೀಲಿಸಬೇಕು. ರಾಜ್ಯಮಟ್ಟದ ಸಮಿತಿಗೆ ಪೂರಕವಾಗಿ ಐಜಿಪಿ ಅಧ್ಯಕ್ಷತೆಯ ವಲಯಮಟ್ಟದ ಖುಲಾಸೆ ಪರಿಶೀಲನಾ ಸಮಿತಿ ಹಾಗೂ ಎಸ್ಪಿ ಅಧ್ಯಕ್ಷತೆಯ ಜಿಲ್ಲಾಮಟ್ಟದ ಖುಲಾಸೆ ಪರಿಶೀಲನಾ ಸಮಿತಿಗಳು ಕಾರ್ಯನಿರ್ವಹಿಸಬೇಕು. ತಮ್ಮ ಕಾರ್ಯದ ಎಲ್ಲಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.

2018ರವರೆಗೆ ಕಾರ್ಯಾರಂಭ ಮಾಡದ ಸಮಿತಿಗಳು:

ಯಾವುದೇ ಸಮಿತಿಗಳು ಖುಲಾಸೆಯಾದ ಕ್ರಿಮಿನಲ್ ಪ್ರಕರಣಗಳ ಪರಿಶೀಲನೆಯನ್ನು 2018ರವರೆಗೂ ನಡೆಸಿರಲಿಲ್ಲ. ಈ ನಿರ್ಲಕ್ಷ್ಯವನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ ಬಳಿಕ, 2018ರ ಜನವರಿ 25ರಂದು ರಾಜ್ಯಮಟ್ಟದ ಸಮಿತಿ ತನ್ನ ಮೊದಲ ಸಭೆ ನಡೆಸಿದೆ. ಆ ಬಳಿಕ ವಲಯ ಹಾಗೂ ಜಿಲ್ಲಾಮಟ್ಟದ ಸಮಿತಿಗಳು ಸಭೆ ನಡೆಸುತ್ತಿರುವುದಾಗಿ ಹಾಗೂ ಖುಲಾಸೆಗೊಂಡ ಪ್ರಕರಣಗಳನ್ನು ಪರಿಶೀಲಿಸುತ್ತಿರುವುದಾಗಿ ಸರ್ಕಾರ ತಿಳಿಸಿದೆ.

2014ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿದ ನಂತರ ಹೈಕೋರ್ಟ್​ನಲ್ಲಿ ಪ್ರಶ್ನಿಸುವವರೆಗೂ ಸುಮಾರು 4 ವರ್ಷಗಳ ಕಾಲ ರಾಜ್ಯ ಸರ್ಕಾರ ರಚಿಸಿದ ಸಮಿತಿಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಇದನ್ನು ಗಮನಿಸಿದಾಗ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗುತ್ತಿರುವುದು ವಿಶೇಷ ಸಂಗತಿ ಎನ್ನಿಸದು. ಸದ್ಯ ಮೇಲ್ವಿಚಾರಣಾ ಸಮಿತಿಗಳು ಕಾರ್ಯನಿರ್ವಹಣೆ ಆರಂಭಿಸಿವೆಯಾದರೂ ಈ ಸಮಿತಿಗಳು ದಕ್ಷತೆಯಿಂದ ಮತ್ತು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸದಿದ್ದರೆ ಮತ್ತಷ್ಟು ಆರೋಪಿಗಳು ಖುಲಾಸೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Last Updated : Nov 23, 2020, 7:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.