ETV Bharat / state

ದ್ವಿತೀಯ ಪಿಯು ಉತ್ತರ ಪತ್ರಿಕೆ ಸ್ಕ್ಯಾನ್‌ ಪ್ರತಿ ಪಡೆಯುವ ದಿನಾಂಕ ವಿಸ್ತರಣೆ - ದ್ವಿತೀಯ ಪಿಯು ಉತ್ತರ ಪ್ರತ್ರಿಕೆ ಪ್ರತಿ ಪಡೆಯುವ ದಿನಾಂಕ ವಿಸ್ತರಣೆ

ಏಪ್ರಿಲ್-ಮೇ 2022ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಜೂನ್ 18ರಂದು ಪ್ರಕಟಿಸಲಾಗಿತ್ತು. ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಡೌನ್‌ಲೋಡ್​ಗೆ ಅವಕಾಶ ನೀಡಲಾಗಿದೆ.

Extension of date to get  PUC answer paper scan copy
ದ್ವಿತೀಯ ಪಿಯು ಉತ್ತರ ಪ್ರತ್ರಿಕೆ ಪ್ರತಿ ಪಡೆಯುವ ದಿನಾಂಕ ವಿಸ್ತರಣೆ
author img

By

Published : Jul 9, 2022, 11:04 AM IST

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಯ ಸ್ಕ್ಯಾನ್​​ ಪ್ರತಿ ಪಡೆಯುವ ದಿನಾಂಕವನ್ನು ಪಿಯು ಬೋರ್ಡ್ ವಿಸ್ತರಿಸಿದೆ. ಸ್ಕ್ಯಾನ್‌ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಈ ಮೊದಲು ಜುಲೈ 10ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಕೊನೆಯ ದಿನಾಂಕವನ್ನು ಜುಲೈ 15ಕ್ಕೆ ವಿಸ್ತರಿಸಲಾಗಿದೆ.

ಏಪ್ರಿಲ್-ಮೇ 2022ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಜೂನ್ 18ರಂದು ಪ್ರಕಟಿಸಲಾಗಿತ್ತು. ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಡೌನ್‌ಲೋಡ್​ಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಈ ಮೊದಲು ಮರುಮೌಲ್ಯಮಾಪನ ಮತ್ತು ಮರುಎಣಿಕೆಗಾಗಿ ಸಲ್ಲಿಸಲು (ಸ್ಕ್ಯಾನ್ ಪ್ರತಿ ತೆಗೆದುಕೊಂಡವರಿಗೆ ಮಾತ್ರ) ಜುಲೈ 13 ಕೊನೆಯ ದಿನಾಂಕವಾಗಿತ್ತು. ಈಗ ಅದನ್ನು ಜುಲೈ 18ರವರೆಗೆ ವಿಸ್ತರಣೆ ಮಾಡಲಾಗಿದೆ.

ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆಯಲು ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರೋ, ಆ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಅಧಿಕೃತ ವೆಬ್‌ಸೈಟ್‌ pue.karnataka.govt.inನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಸ್ಕ್ಯಾನ್ ಪ್ರತಿ ಅಪ್‌ಲೋಡ್‌ ಮಾಡಿದ ಕುರಿತು ವಿದ್ಯಾರ್ಥಿಗಳಿಗೆ SMS ಮೂಲಕ ಸಂದೇಶ ರವಾನಿಸಲಾಗುವುದು. ಸಂದೇಶ ಸ್ವೀಕರಿಸಿದ ವಿದ್ಯಾರ್ಥಿಗಳು ಸಂಬಂಧಿಸಿದ ಸ್ಕ್ಯಾನ್ ಪ್ರತಿ ಪಡೆಯಬಹುದಾಗಿದೆ.

ಇದನ್ನೂ ಓದಿ: ಸಿಸಿಟಿವಿ ಅಳವಡಿಕೆ, ಸೆಕ್ಯೂರಿಟಿ ನೇಮಕಕ್ಕೆ ಹೋಟೆಲ್​, ಮಾಲ್​ಗಳಿಗೆ ಡೆಡ್​ಲೈನ್​ ನೀಡಿದ ಎಡಿಜಿಪಿ ಅಲೋಕ್ ಕುಮಾರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.