ಬೆಂಗಳೂರು: ಮಹಾಮಾರಿ ಕೊರೊನಾ ತಡೆಗಟ್ಟುವ ಸಲುವಾಗಿ ಘೋಷಣೆಯಾದ ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ರೈಲ್ವೆ ಸಂಚಾರ ಇಂದು ಮತ್ತೆ ಶುರುವಾಗಿದೆ. ಮೊದಲ ವಿಶೇಷ ರೈಲು ಬೆಂಗಳೂರಿನಿಂದ ಬೆಳಗಾವಿ ಹಾಗೂ ಬೆಂಗಳೂರಿನಿಂದ ಮೈಸೂರಿಗೆ ಈಗಾಗಲೇ ಪ್ರಯಾಣ ಬೆಳೆಸಿದೆ.
ಬೆಂಗಳೂರು-ಬೆಳಗಾವಿ ರೈಲಿನಲ್ಲಿ 338 ಮಂದಿ ಹಾಗೂ ಮೈಸೂರಿಗೆ 37 ಮಂದಿ ಪ್ರಯಾಣ ಬೆಳೆಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆನ್ಲೈನ್ ಟಿಕೆಟ್ ಕಾಯ್ದಿರಿಸಲಾಗಿದೆ. 59 ದಿನಗಳ ಬಳಿಕ ರಾಜ್ಯದಲ್ಲಿ ರೈಲು ಸೇವೆ ಆರಂಭವಾದ ಹಿನ್ನೆಲೆ ರೈಲ್ವೆ ಕ್ಲೀನಿಂಗ್ ಮಾಡುವ ಕಾರ್ಮಿಕರ ಕೈಯಲ್ಲಿ ಹಸಿರು ನಿಶಾನೆ ತೋರಿಸಲಾಯಿತು.
-
First intrastate train of the tri-weekly superfast special trains, carrying 338 passengers, embarked on its maiden journey today from Kanteerava Sangolli Rayanna Station in Bengaluru to Belgaum: PRO, South Western Railway. #Karnataka pic.twitter.com/JZKj620qlx
— ANI (@ANI) May 22, 2020 " class="align-text-top noRightClick twitterSection" data="
">First intrastate train of the tri-weekly superfast special trains, carrying 338 passengers, embarked on its maiden journey today from Kanteerava Sangolli Rayanna Station in Bengaluru to Belgaum: PRO, South Western Railway. #Karnataka pic.twitter.com/JZKj620qlx
— ANI (@ANI) May 22, 2020First intrastate train of the tri-weekly superfast special trains, carrying 338 passengers, embarked on its maiden journey today from Kanteerava Sangolli Rayanna Station in Bengaluru to Belgaum: PRO, South Western Railway. #Karnataka pic.twitter.com/JZKj620qlx
— ANI (@ANI) May 22, 2020
ರೈಲ್ವೆ ನಿಲ್ದಾಣದ ಕಾರ್ಮಿಕರಾದ ನೂರ್ ಅಹಮ್ಮದ್ ಮತ್ತು ಮುನಿಯಮ್ಮ ಎಂಬುವವರ ಕೈಯಿಂದ ಚಾಲನೆ ನೀಡಲಾಯಿತು. ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ರೈಲು ಹೊರಡಲಿದೆ. ಭಾನುವಾರ ಕರ್ನಾಟಕದಲ್ಲಿ ರೈಲು ಸಂಚಾರವಿರುವುದಿಲ್ಲ. ಈ ಕುರಿತು ಪ್ರತ್ಯಕ್ಷ ವರದಿ ಇಲ್ಲಿದೆ.