ETV Bharat / state

ಕೊರೊನಾ ಕನಿಷ್ಠ ಮಟ್ಟಕ್ಕೆ ಇಳಿಕೆ: ರಾಜ್ಯಕ್ಕೆ ಕೋವಿಡ್​​​ 3ನೇ ಅಲೆ ಭೀತಿ ಇಲ್ಲ ಎಂದ ತಜ್ಞರು

author img

By

Published : Oct 19, 2021, 3:54 PM IST

ರಾಜ್ಯದಲ್ಲಿ ಅಕ್ಟೋಬರ್ ವೇಳೆಗೆ ಕೊರೊನಾ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಜೊತೆಗೆ ಹೊಸ ರೂಪಾಂತರಿಗಳು ಸಹ ಪತ್ತೆಯಾಗ್ತಿಲ್ಲ. ಇರೋ ರೂಪಾಂತರಿಗಳು ಸಾಮರ್ಥ್ಯ ಕಳೆದುಕೊಂಡು ಕ್ಷೀಣಿಸುತ್ತಿವೆ. ಜೊತೆಗೆ ಜಿನೋಮ್ ಸೀಕ್ವೆನ್ಸ್ ಟೆಸ್ಟ್​​​ನಲ್ಲೂ ಹೊಸ ವೇರಿಯಂಟ್ ಪತ್ತೆಯಾಗಿಲ್ಲ.

third wave of covid
ಕೋವಿಡ್​​​ ಮೂರನೇ ಅಲೆ

ಬೆಂಗಳೂರು: ಕಳೆದ ಹಲವು ದಿನಗಳಿಂದ ನವೆಂಬರ್​​ ವೇಳೆಗೆ ರಾಜ್ಯದಲ್ಲಿ ಕೊರೊನಾ‌ ಮೂರನೇ ಅಲೆ ಬರುತ್ತೆ ಅಂತ ತಜ್ಞರು ನೀಡಿದ್ದ ಮಾಹಿತಿ ಎಲ್ಲರನ್ನ ಬೆಚ್ಚಿ ಬೀಳಿಸಿತ್ತು. ಆದ್ರೀಗ ಇದೇ ತಜ್ಞರು ರಾಜ್ಯಕ್ಕೆ ಕೋವಿಡ್​​ ಭಯ ಇಲ್ಲ ಎನ್ನುವ ಮಾಹಿತಿ ನೀಡಿದ್ದು, ಜನರು ನಿಟ್ಟುಸಿರುವ ಬಿಡುವಂತಾಗಿದೆ.

ಈ ಹಿಂದೆ ನವೆಂಬರ್‌ಗೆ ಮೂರನೇ ಅಲೆ ಬರುತ್ತೆ ಅಂತ ತಜ್ಞರು ಹೇಳಿದ್ದರು. ಆದರೆ, ಇದೀಗ ಎಂದಿನಂತೆ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ಇದೇ 25 ರಿಂದ 1 ರಿಂದ 5 ನೇ ತರಗತಿ ಶಾಲೆ ಪ್ರಾರಂಭಕ್ಕೆ ತಜ್ಞರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಕ್ಟೋಬರ್ ವೇಳೆಗೆ ಕೊರೊನಾ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಜೊತೆಗೆ ಹೊಸ ರೂಪಾಂತರಿಗಳು ಸಹ ಪತ್ತೆಯಾಗ್ತಿಲ್ಲ.

ಇರೋ ರೂಪಾಂತರಿಗಳು ಸಾಮರ್ಥ್ಯ ಕಳೆದುಕೊಂಡು ಕ್ಷೀಣಿಸುತ್ತಿವೆ. ಜೊತೆಗೆ ಜಿನೋಮ್ ಸೀಕ್ವೆನ್ಸ್ ಟೆಸ್ಟ್​​​​ನಲ್ಲೂ ಹೊಸ ವೇರಿಯಂಟ್ ಪತ್ತೆಯಾಗಿಲ್ಲ. ಜೊತೆಗೆ ವ್ಯಾಕ್ಸಿನೇಷನ್‌ ಸಹ ವೇಗವಾಗಿ ನಡೆಯುತ್ತಿದೆ. ಇನ್ನು ಮೂರನೇ ಅಲೆ ಭೀತಿ ಬಹುತೇಕ ದೂರವಿದೆ.

ಹೀಗಾಗಿ ರಾಜ್ಯದ ಜನರಿಗೆ ತಾಂತ್ರಿಕ ಸಲಹಾ ಸಮಿತಿ ಖುಷಿ ಸುದ್ದಿ ನೀಡಿದ್ದು, ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ಮೂರನೇ ಅಲೆ ಭೀತಿ ಇಲ್ಲ ಎಂದೇ ತಜ್ಞರ ಸಮಿತಿ‌ ತಿಳಿಸಿದ್ದಾರೆ. ಹೀಗಿದ್ದರೂ ವ್ಯಾಕ್ಸಿನೇಷನ್‌ ಡ್ರೈವ್, ಜೊತೆಗೆ ಕೋವಿಡ್ ನಿಯಮ ಪಾಲನೆ ಅಗತ್ಯ ಎಂದು ತಜ್ಞರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.