ಬೆಂಗಳೂರು: ಚೆಫ್ ಟಾಕ್ ಹಾಗೂ ರಿವಾರ್ಡ್ಸ್ ಸಂಸ್ಥೆಗಳು ಈ ಬಾರಿಯು ಇಂದಿರಾ ಕ್ಯಾಂಟೀನ್ ಟೆಂಡರ್ ಪಡೆಯಲು ಮುಂದಾಗಿದ್ದು, ಕಾರಣಾಂತರಗಳಿಂದ ಟೆಂಡರ್ನ ತಡೆಹಿಡಿದು ಸಂಸ್ಥೆಗಳ ಪರಿಶೀಲನೆಗೆ ಪಾಲಿಕೆ ಮುಂದಾಗಿದೆ.
ಈ ಎರಡು ಸಂಸ್ಥೆಗಳ ವಿರುದ್ಧ ಆಹಾರ ಗುಣಮಟ್ಟದ ಬಗ್ಗೆ ದೂರುಗಳು ಕೇಳಿಬಂದಿರುವ ಹಿನ್ನೆಲೆ, ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದು ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಆಡಳಿತ ಸಮರ್ಥಿಸಿದ ಪಾಲಿಕೆ ವಿಪಕ್ಷ ನಾಯಕ :
ಪಾಲಿಕೆ ವಿಪಕ್ಷ ನಾಯಕ ವಾಜಿದ್ ಮಾತನಾಡಿ, ಇಂದಿರಾ ಕ್ಯಾಂಟೀನ್ ಗುತ್ತಿಗೆಯನ್ನು ಬಿಜೆಪಿ ಆಡಳಿತ ಮತ್ತೆ ಹಳೇ ಗುತ್ತಿಗೆ ಸಂಸ್ಥೆಗಳಿಗೇ ನೀಡಲು ಮುಂದಾಗಿದೆ. ಚೆಫ್ ಟಾಕ್ ಹಾಗೂ ರಿವಾರ್ಡ್ಸ್ ಸಂಸ್ಥೆಗೆ ನಮ್ಮ ಆಡಳಿತದಲ್ಲಿ ಗುತ್ತಿಗೆ ನೀಡಲಾಗಿತ್ತು. ಪಾಲಿಕೆಯ ಬಿಜೆಪಿ ಪಕ್ಷ ಎಷ್ಟೇ ಸುಳ್ಳು ಆರೋಪ ಮಾಡಿದ್ರೂ, ಈಗ ಅದೇ ಸಂಸ್ಥೆಯನ್ನು ನೆಚ್ಚಿಕೊಂಡಿದ್ದಾರೆ ಎಂದು ತಮ್ಮ ಆಡಳಿತವನ್ನು ಸಮರ್ಥಿಸಿಕೊಂಡರು.