ETV Bharat / state

’’ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು; ಸಂಪತ್ ರಾಜ್​​ ಕೂಡಾ ಹೊರತಾಗಿಲ್ಲ ಎಂದ ಡಿಕೆಶಿ

ಕಾನೂನಿಗೆ ಪ್ರತಿಯೊಬ್ಬರೂ ಗೌರವ ಕೊಡಬೇಕು, ಇದಕ್ಕೆ ಸಂಪತ್ ರಾಜ್ ಕೂಡ ಹೊರತಾಗಿಲ್ಲ. ಈ ಕುರಿತು ತನಿಖೆ ನಡೆಯುತ್ತಿದ್ದು, ಎಲ್ಲವೂ ಮುಗಿಯಲಿ. ಮತ್ತೆ ಈ ಬಗ್ಗೆ ಮಾತನಾಡುತ್ತೇವೆ ಎಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

dk shivkumar
ಡಿಕೆ ಶಿವಕುಮಾರ್
author img

By

Published : Nov 17, 2020, 1:31 PM IST

ಬೆಂಗಳೂರು: ಕಾನೂನಿಗೆ ಪ್ರತಿಯೊಬ್ಬರೂ ಗೌರವ ಕೊಡಬೇಕು. ಇದರಿಂದ ಮಾಜಿ ಮೇಯರ್ ಸಂಪತ್ ರಾಜ್ ಕೂಡ ಹೊರತಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಸಂಪತ್ ರಾಜ್ ಬಂಧನ ಕುರಿತು ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಗೊತ್ತಿದೆ. ಅಖಂಡ ಶ್ರೀನಿವಾಸಮೂರ್ತಿ ಅವರು ನನ್ನ ಜೊತೆ ಏನೂ ಮಾತನಾಡಿಲ್ಲ. ತನಿಖೆ ನಡೆಯುತ್ತಿದ್ದು, ಎಲ್ಲವೂ ಮುಗಿಯಲಿ. ವೈಯಕ್ತಿಕವಾಗಿ ಯಾರ ಬಗ್ಗೆಯೂ ನಾನೀಗ ಮಾತನಾಡಲ್ಲ. ಬಿಜೆಪಿಯವರು ಕಾಂಗ್ರೆಸ್​​ನವರನ್ನು ಟಾರ್ಗೆಟ್ ಮಾಡಬೇಕು ಅಂತಾ ಇವೆಲ್ಲವನ್ನೂ ಮಾಡ್ತಿದ್ದಾರೆ. ಏನಾದರೂ ಮಾಡಿ ತೊಂದರೆ ಮಾಡೋಕೆ ಎಂದೇ ಈ ರೀತಿ ಮಾಡ್ತಿದ್ದಾರೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬಿಜೆಪಿಯವರು ಕಾಂಗ್ರೆಸ್​ಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿರುವುದು ತಿಳಿದಿರುವ ವಿಚಾರವೇ ಆಗಿದೆ. ಅವರು ಕೂಡ ಕಾಂಗ್ರೆಸ್, ನಾನೂ ಸಹ ಕಾಂಗ್ರೆಸ್. ನಾನು ಚಾರ್ಜ್ ಶೀಟ್ ನೋಡಿದ್ದೇನೆ. ಕೋರ್ಟ್ ವಿಚಾರ ಇರೋದ್ರಿಂದ ಸದ್ಯ ಏನೂ ಮಾತನಾಡಲ್ಲ ಎಂದರು. ಸಂಪತ್ ಪರಾರಿಯಾಗಿದ್ದಾರೆ ಅಂತಾ ಹೇಗೆ ಹೇಳ್ತೀರಾ? ಅಖಂಡರ ಪರವಾಗಿ ಇಲ್ಲ ಅಂತಾ ಹೇಗೆ ಹೇಳ್ತೀರಾ?ಎಂದು ಪ್ರಶ್ನಿಸಿದರು. ಘಟನೆ ನಡೆಯುತ್ತಲೇ ನಾವು ಅಲ್ಲಿಗೆ ಭೇಟಿ ಕೊಟ್ಟಿದ್ದೇವೆ, ಎಲ್ಲವನ್ನೂ ಪರಿಶೀಲಿಸಿದ್ದೇವೆ. ವ್ಯಕ್ತಿಯ ಬಗ್ಗೆ ವೈಯಕ್ತಿಕವಾಗಿ ನಾನು ಏನೂ ಹೇಳಲ್ಲ ಎಂದರು. ಅಲ್ಲದೇ, ಬಿಜೆಪಿಯವರು ಏನು ಬೇಕೋ ಅದನ್ನು ಮಾಡುತ್ತಿದ್ದಾರೆ. ಕಾಲ ಬರಲಿ ಎಲ್ಲದಕ್ಕೂ ಉತ್ತರ ಕೊಡುತ್ತೇವೆ. ಈ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ ಎಂದು ವಿವರಿಸಿದರು.

ರಕ್ಷಣೆ ಸಿಗಬೇಕು: ಇಂದಿನಿಂದ ಕಾಲೇಜುಗಳು ಪ್ರಾರಂಭ ವಿಚಾರವಾಗಿ ಮಾತನಾಡಿ, ಸರ್ಕಾರ ವಿಮರ್ಶಿಸಿ ಈ ನಿರ್ಧಾರ ಕೈಗೊಂಡಿದೆ. ಅವರು ಏನು ಮಾಡ್ತಾರೋ ಮಾಡಲಿ. ಒಟ್ಟಿನಲ್ಲಿ ಪಾಲಕರು - ವಿದ್ಯಾರ್ಥಿಗಳಿಗೆ ರಕ್ಷಣೆ ಸಿಗಬೇಕು. ಕೋವಿಡ್​ನಿಂದ ಎಲ್ಲರಿಗೂ ರಕ್ಷಣೆ ಸಿಗಬೇಕು. ಹಾಗಾಗಿ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದರು.

ಧರ್ಮ ರಾಜಕಾರಣ ಬೇಡ: ಮರಾಠ ಅಭಿವೃದ್ಧಿ ಪ್ರಾಧಿಕಾರ ವಿಷಯಕ್ಕೆ ಪ್ರತಿಕ್ರಿಯಿಸಿ, ಧರ್ಮವನ್ನು ಸ್ವಲ್ಪ ದೂರ ಇಡೋಣ. ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ, ಧರ್ಮದಲ್ಲಿ ರಾಜಕಾರಣ ಇರಬಾರದು. ಅವರು ಎಲ್ಲವನ್ನೂ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಈಗ ಮಾತನಾಡಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ನಂತರ ಇದರ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.

ಬೆಂಬಲ ಬೆಲೆ ಘೋಷಿಸಲಿ: ನ. 22 ರಂದು ಬಳ್ಳಾರಿಗೆ ಭೇಟಿ ನೀಡುತ್ತಿದ್ದೇವೆ. ಗ್ರಾಮ ಪಂಚಾಯತ್​​ ಚುನಾವಣೆಗಳ ಬಗ್ಗೆ ಗಮನ ಹರಿಸಿದ್ದೇವೆ. 23 ರಂದು ಮಸ್ಕಿಗೆ ಭೇಟಿ ನೀಡುತ್ತಿದ್ದೇವೆ. ಮಸ್ಕಿಯಲ್ಲಿ ರೈತರ ಬೆಳೆ ಬೆಲೆ ಕುಸಿದಿದ್ದು, ಸರ್ಕಾರ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಭತ್ತಕ್ಕೆ 950 ರೂಪಾಯಿ ಇದೆ. ಇದಕ್ಕೆ 500 ರೂಪಾಯಿ ಬೆಂಬಲ ಬೆಲೆ ಕೊಡಬೇಕು. ಕೇಂದ್ರ ಒಬ್ಬರಿಂದ 40 ಕ್ವಿಂಟಾಲ್ ಖರೀದಿಗೆ ಸೂಚಿಸಿದೆ. ಹೀಗಾಗಿ ಬೆಂಬಲ ಬೆಲೆಗೆ ನಾವು ಆಗ್ರಹಿಸುತ್ತೇವೆ. ಕೊಬ್ಬರಿ, ಭತ್ತಕ್ಕೆ ಬೇರೆ-ಬೇರೆ ಬೆಲೆ ಬೇಡ. ಎಲ್ಲರೂ ರೈತರೇ, ಬೆಂಬಲ ಬೆಲೆ ಎಲ್ಲರಿಗೂ ನೀಡಬೇಕು. ಇದರ ಬಗ್ಗೆ ನಾವು ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.