ETV Bharat / state

ಪ್ರತಿಯೊಬ್ಬ ಪ್ರಜೆಯೂ ತನ್ನನ್ನು ತಾನು ದೇಶಕ್ಕೆ ಅರ್ಪಿಸಲು ಸಿದ್ಧವಿರಬೇಕು: ವಿಧಾನಪರಿಷತ್ ಸಭಾಪತಿ - 23 ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ

ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ದೇಶಕ್ಕೆ ಯಾವ ಕೊಡುಗೆ ಕೊಟ್ಟಿದ್ದೇನೆ ಎಂಬುದನ್ನು ಮೊದಲು ಯೋಚಿಸಬೇಕು ಎಂದು ವಿಧಾನಪರಿಷತ್​​ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅವರು 23 ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು.

Legislative Council Chairman Raghunath Rao Malkapure
ವಿಧಾನಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ
author img

By

Published : Jul 21, 2022, 8:22 PM IST

ಬೆಂಗಳೂರು: ’ದೇಶ ಮೊದಲು' ಎಂಬ ಘೋಷ ವಾಕ್ಯದೊಂದಿಗೆ ರಾಷ್ಟದ ಪ್ರತಿಯೊಬ್ಬ ಪ್ರಜೆಯೂ, ತನ್ನನ್ನು ತಾನು ದೇಶಕ್ಕೆ ಅರ್ಪಿಸಲು ಸಿದ್ಧವಿರಬೇಕು. ಈ ಮೂಲಕ ದೇಶಭಕ್ತರಾಗಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಕೈಜೋಡಿಸಲು ಕಟಿಬದ್ಧರಾಗಬೇಕೆಂದು ವಿಧಾನಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಹೇಳಿದ್ದಾರೆ.

23 ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ

ಸಿಟಿಜನ್ ಸೊಸೈಟಿ ಆಫ್ ಇಂಡಿಯಾದಿಂದ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಂಜೆ 23 ನೇ ಕಾರ್ಗಿಲ್ ವಿಜಯೋತ್ಸವ ಹಾಗೂ 'ಶ್ರದ್ಧಾಂಜಲಿ ಕಳಶ' ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿ ಮಾತನಾಡಿದ ಅವರು, 1999 ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಯುದ್ಧದಲ್ಲಿ ಭಾರತ ದೇಶವು ಜಯಗಳಿಸಿತ್ತು.

ಸುಮಾರು ಎರಡೂವರೆ ತಿಂಗಳುಗಳ ಕಾಲ ನಡೆದ ಈ ಯುದ್ದದಲ್ಲಿ 400 ಕ್ಕೂ ಹೆಚ್ಚು ಜನ ಸೈನಿಕರು ಮತ್ತು ಇತರ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ಮೂರು ಸಾವಿರಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಗಾಯಗೊಂಡಿದ್ದರು ಎಂದರು.

ಈ ಯುದ್ದದಲ್ಲಿನ ವಿಜಯದ ಸಂಕೇತವಾಗಿ ಶ್ರದ್ಧಾಂಜಲಿ ಕಳಸ ಭಾಗವಾಗಿ ಸುಮಾರು 21 ನದಿಗಳಿಂದ ಜಲ ಶೇಖರಿಸಲಾಗಿದೆ. ಅಲ್ಲದೇ 21 ತರಹದ ವಿವಿಧ ಹೂಗಳ ದಳಗಳೊಂದಿಗೆ ಕಾರ್ಗಿಲ್‌ನ ಯೋಧರಿಗೆ ಗೌರವ ಸಮರ್ಪಣೆಗಾಗಿ ಸದರಿ ಕಾರ್ಯಕ್ರಮ ರೂಪಿಸಲಾಗಿದೆ. 23 ನೇ ಕಾರ್ಗಿಲ್ ವಿಜಯೋತ್ಸವದ ಸಂಭ್ರಮಾಚರಣೆಯ ಈ ಸಮಯದಲ್ಲಿ, ನಮ್ಮ ದೇಶದ ಕೆಚ್ಚೆದೆಯ ಸೈನಿಕರ ಗೆಲುವನ್ನು ನಾವು ಇಲ್ಲಿ ಸ್ಮರಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ಕಚೇರಿಗೆ ಆಗಮಿಸಿದ ನೂತನ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್...!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.