ETV Bharat / state

Horoscope 2022: ಈ ರಾಶಿಯವರಿಗೆ ಹೊಸ ವರ್ಷ ತಂದುಕೊಡಲಿದೆ ಬಹುದೊಡ್ಡ ಬದಲಾವಣೆ - ವರ್ಷದ ಅದೃಷ್ಟದ ರಾಶಿ ಭವಿಷ್ಯ

ಹೊಸ ವರ್ಷದ ನಿಮ್ಮ ರಾಶಿ ಭವಿಷ್ಯ: ಕೈ ಹಿಡಿಯಲಿರುವ ನಿಮ್ಮ ವ್ಯವಹಾರ, ಕೂಡಿಬರುವ ಕಂಕಣ ಭಾಗ್ಯ, ಹಣಕಾಸಿನ ಸ್ಥಿತಿ-ಗತಿ, ವಿದೇಶ ಪ್ರಯಾಣ.. ಇಲ್ಲಿವೆ ಉಪಯುಕ್ತ ಸಲಹೆ-ಸೂಚನೆಗಳು..

ETV BHARAT YEARLY HOROSCOPE,Your 2022 horoscop,2022ರ ರಾಶಿ ಭವಿಷ್ಯ,ಹೊಸ ವರ್ಷದ ರಾಶಿ ಭವಿಷ್ಯ

author img

By

Published : Dec 30, 2021, 1:40 PM IST

2022ರ ನೂತನ ವರ್ಷ ನಿಮಗೆ ಯಾವ ರೀತಿಯಲ್ಲಿ ಖುಷಿ ತಂದುಕೊಡುತ್ತದೆ?, ಯಾವ ಯಾವ ರಾಶಿಯವರಿಗೆ ಯಾವ ಯಾವ ಫಲ ಸಿಗಲಿದೆ?, ನಿಮ್ಮ ಅದೃಷ್ಟದ ಬಾಗಿಲು ತೆರೆಯುವುದು ಯಾವಾಗ? ಎಂಬೆಲ್ಲಾ ಹತ್ತಾರು ಯಕ್ಷ ಪ್ರಶ್ನೆಗಳಿಗೆ ಇಲ್ಲಿ ನೀವು ಉತ್ತರ ಕಂಡುಕೊಳ್ಳಬಹುದು.

ETV BHARAT YEARLY HOROSCOPE,Your 2022 horoscop,2022ರ ರಾಶಿ ಭವಿಷ್ಯ,ಹೊಸ ವರ್ಷದ ರಾಶಿ ಭವಿಷ್ಯ
ಮೇಷ

ಮೇಷ ರಾಶಿಯವರಿಗೆ ಯಾವ ಕಾರಣಕ್ಕೂ ಶಕ್ತಿಯ ಕೊರತೆ ಉಂಟಾಗುವುದಿಲ್ಲ. ಆದರೆ, ಈ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುವುದು ತುಂಬಾ ಪ್ರಮುಖವಾದುದು. ಅನೇಕ ಸಂದರ್ಭದಲ್ಲಿ ವಿಷಯಗಳಿಗೆ ಸರಿಯಾದ ಆದ್ಯತೆ ನೀಡಲು ನಿಮಗೆ ಕಷ್ಟವಾಗಬಹುದು. ಇಂತಹ ಸಂದರ್ಭಗಳಲ್ಲಿ ಕುಟುಂಬದ ಸದಸ್ಯರ ಸಲಹೆ ಮತ್ತು ಅನುಭವವು ನಿಮ್ಮ ನೆರವಿಗೆ ಬರಲಿದೆ. ನೀವು ಪ್ರಯಾಣಿಸಲು ಅಥವಾ ವಿದೇಶದಲ್ಲಿ ಕೆಲಸ ಮಾಡಲು ಇಷ್ಟ ಪಟ್ಟರೆ ಈ ವರ್ಷ ನೀವು ಇದನ್ನು ಪ್ರಯತ್ನಿಸಬಹುದು.

ಈ ವರ್ಷದ 3ನೇ, 5ನೇ ಮತ್ತು 7ನೇ ತಿಂಗಳುಗಳು ಪ್ರಯಾಣಿಸಲು ಅನುಕೂಲಕರ. ಏಕೆಂದರೆ ಈ ತಿಂಗಳುಗಳಲ್ಲಿ ಮಾಡಿದ ಪ್ರಯಾಣವು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲಿದೆ ಮಾತ್ರವಲ್ಲದೆ, ನಿಮಗೆ ಮಾನಸಿಕ ಸಾಮರ್ಥ್ಯವನ್ನೂ ಒದಗಿಸಲಿದೆ. ನಿಮ್ಮ ಕುಟುಂಬದ ಸದಸ್ಯರ ಮೇಲೆ ನೀವು ಹೊಂದಿರುವ ಪ್ರೀತಿಯು ಹೆಚ್ಚಲಿದೆ. ಅವರ ಬಗ್ಗೆ ನೀವು ಹೊಂದಿರುವ ಭಾವನೆಯನ್ನು ನೀವು ವ್ಯಕ್ತಪಡಿಸಲಿದ್ದೀರಿ. ನೀವು ಹಣದ ಹಿಂದೆ ಹೋಗುವ ಅಭ್ಯಾಸವನ್ನು ಈ ವರ್ಷದಲ್ಲಿ ನೀವು ತ್ಯಜಿಸಿದರೆ ನಿಮಗೆ ಒಳ್ಳೆಯದು.

ಕುಟುಂಬಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡಿ ಮತ್ತು ಅವರು ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಿ. ಈ ವರ್ಷದಲ್ಲಿ ನೀವು ದೇವಸ್ಥಾನಗಳಿಗೆ ಭೇಟಿ ನೀಡುವುದಕ್ಕಾಗಿ ಹೆಚ್ಚಿನ ಸಮಯವನ್ನು ಕಳೆಯಲಿದ್ದೀರಿ. ಹೀಗೆ ಮಾಡುವುದರಿಂದ ನಿಮಗೆ ಆಂತರಿಕ ಶಾಂತಿ ದೊರೆಯಲಿದೆ. ವೃತ್ತಿಯ ವಿಚಾರದಲ್ಲಿ ಈ ವರ್ಷವು ನಿಮಗೆ ಶುಭಕರವಾಗಿರಲಿದೆ. ಏಪ್ರಿಲ್‌ ನಂತರದ ಸಮಯ ವೃತ್ತಿಯ ವಿಚಾರದಲ್ಲಿ ಶುಭ ಫಲ ತಂದು ಕೊಡಲಿದೆ. ಮಕ್ಕಳ ವಿಚಾರದಲ್ಲಿ ಈ ವರ್ಷ ನಿಮಗೆ ಚಿಂತೆ ಕಾಡಬಹುದು.

ಮೇ ಮತ್ತು ಅಕ್ಟೋಬರ್‌ ನಡುವೆ ನೀವು ಸಾಮಾಜಿಕ ಕೆಲಸದಲ್ಲಿ ಎಚ್ಚರಿಕೆಯಿಂದ ಪಾಲ್ಗೊಳ್ಳಬೇಕು. ಆದರೂ ಈ ವರ್ಷದಲ್ಲಿ ನಿಮ್ಮ ಮಾನಸಿಕ ಸಾಮರ್ಥ್ಯವು ವೃದ್ಧಿಯಾಗಲಿದೆ ಹಾಗೂ ನೀವು ಯಾವುದೇ ಪ್ರಮುಖ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಈ ವರ್ಷವು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಇದಕ್ಕಾಗಿ ನೀವು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಮತ್ತು ಕಠಿಣ ಶ್ರಮಕ್ಕಾಗಿ ಸಿದ್ಧರಿರಬೇಕು. ನಿಮ್ಮ ದಕ್ಷತೆಯು ನಿಮಗೆ ಅದ್ಭುತ ಫಲಿತಾಂಶಗಳನ್ನು ತಂದು ಕೊಡಲಿದೆ.

ವೃಷಭ

2022ರ ಈ ವರ್ಷವು ವೃಷಭ ರಾಶಿಯವರಿಗೆ ಶುಭ ಸುದ್ದಿಯನ್ನು ತಂದುಕೊಡಲಿದೆ. ಈ ವರ್ಷದಲ್ಲಿ ನಿಮ್ಮ ಅದೃಷ್ಟವು ಚೆನ್ನಾಗಿರಲಿದೆ ಹಾಗೂ ಕಳೆದ ವರ್ಷ ನಿಮ್ಮ ಬದುಕಿಗೆ ದೊರೆತಿರುವ ಆವೇಗವು ಈ ವರ್ಷದಲ್ಲೂ ಮುಂದುವರಿಯಲಿದೆ. ಹೀಗೆ ನೀವು ಬದುಕಿನಲ್ಲಿ ಪ್ರಗತಿ ಸಾಧಿಸಲಿದ್ದೀರಿ. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ವ್ಯವಹಾರವು ನಿಧಾನಗತಿಯಲ್ಲಿ ಮುಂದುವರಿಯಲಿದ್ದು ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಅನೇಕ ಇಚ್ಛೆಗಳು ಈ ವರ್ಷದಲ್ಲಿ ಕೈಗೂಡಲಿವೆ.

ಈ ವರ್ಷದಲ್ಲಿ ನೀವು ಬಹು ಕಾಲದಿಂದ ನಿರೀಕ್ಷಿಸುತ್ತಿದ್ದ ಪ್ರವಾಸಕ್ಕೆ ಹೋಗಲಿದ್ದೀರಿ. ವಿದೇಶಕ್ಕೆ ಹೋಗಲು ಇಚ್ಛಿಸುವವರು ವರ್ಷದ ಮಧ್ಯ ಭಾಗದಲ್ಲಿ ಶುಭ ಸುದ್ದಿ ಪಡೆಯಲಿದ್ದಾರೆ. ಹೀಗಾಗಿ ಪ್ರಯತ್ನವನ್ನು ಬಿಡಬೇಡಿ. ನಿಮ್ಮ ಕೌಟುಂಬಿಕ ಬದುಕು ಸಾಮಾನ್ಯ ರೀತಿಯಲ್ಲಿ ಮುಂದುವರಿಯಲಿದೆ. ವರ್ಷದ ಮಧ್ಯ ಭಾಗದಲ್ಲಿ, ಕುಟುಂಬದ ಸದಸ್ಯರೊಬ್ಬರ ಆರೋಗ್ಯವು ಕೆಡುವುದರಿಂದ ನಿಮ್ಮ ಚಿಂತೆಗಳು ಹೆಚ್ಚಲಿವೆ. ಆದರೆ ಮೆಲ್ಲನೆ ಪರಿಸ್ಥಿತಿಯು ಸುಧಾರಿಸಲಿದ್ದು, ಅವರ ಆರೋಗ್ಯ ಸಹಜ ಸ್ಥಿತಿಗೆ ಬರಲಿದೆ. ಆದರೂ ನೀವು ಕಾರ್ಯಸ್ಥಳದಲ್ಲಿ ಅತ್ಯಂತ ತಾಳ್ಮೆಯಿಂದ ವರ್ತಿಸಬೇಕು. ಏಪ್ರಿಲ್‌ ನಂತರ ಶನಿಯ ಸಂಕ್ರಮಣ ಆಗುವುದರಿಂದ ನೀವು ಹೆಚ್ಚಿನ ಪ್ರಯತ್ನ ಪಡಬೇಕಾಗುತ್ತದೆ.

ಆದರೂ, ನಿಮ್ಮ ಜವಾಬ್ದಾರಿಯನ್ನು ನೀವು ಅರಿತುಕೊಳ್ಳಲಿದ್ದೀರಿ ಹಾಗೂ ನಿಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆ ಉಂಟಾಗಲಿದೆ. ಈ ವರ್ಷದಲ್ಲಿ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಹೀಗಾಗ ನಿಮ್ಮ ಆಹಾರಕ್ರಮದ ಕುರಿತು ನೀವು ಎಚ್ಚರಿಕೆಯಿಂದ ಇರಬೇಕು. ನೀವು ಏನಾದರೂ ಹೊಸತನ್ನು ಕಲಿಯಲಿದ್ದೀರಿ ಹಾಗೂ ಈ ವರ್ಷದಲ್ಲಿ ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಲು ನಿಮಗೆ ಸಾಧ್ಯವಾಗಲಿದೆ. ನಿಮ್ಮ ವರ್ತನೆಯಲ್ಲಿ ಒಂದಷ್ಟು ಬದಲಾವಣೆಯಾಗಲಿದೆ ಎಂದು ನಿಮ್ಮ ರಾಶಿ ಚಕ್ರದಲ್ಲಿರುವ ನಿಮ್ಮ ಗ್ರಹಗಳ ಸ್ಥಾನವು ಸೂಚಿಸುತ್ತಿದೆ. ನಿಮ್ಮ ರಾಶಿ ಚಕ್ರದಿಂದ ರಾಹುವಿನ ನಿರ್ಗಮನವು ನಿಮಗೆ ಲಾಭವನ್ನು ತಂದು ಕೊಡಲಿದೆ.

ಕಳೆದ ವರ್ಷ ನಿಮಗೆ ಎದುರಾದ ಮಾನಸಿಕ ಸಮಸ್ಯೆಗಳು ಮೆಲ್ಲನೆ ದೂರವಾಗಲಿವೆ. ಆದರೂ ಅತಿಯಾದ ಆತ್ಮವಿಶ್ವಾಸ ತೋರಿಸಬೇಡಿ. ನಿಮ್ಮ ಸಂಬಂಧವು ಸುದೃಢವಾಗಿರಲಿದೆ ಹಾಗೂ ವೃತ್ತಿ ಜೀವನದಲ್ಲಿಯೂ ನೀವು ಯಶಸ್ಸು ಗಳಿಸಲಿದ್ದೀರಿ. ಮೇ ತಿಂಗಳ ನಂತರ ನಿಮ್ಮ ಕಚೇರಿಯಲ್ಲಿ ನಿಮಗೆ ಸಾಕಷ್ಟು ಗೌರವ ದೊರೆಯಲಿದೆ ಹಾಗೂ ನಿಮ್ಮ ಅನುಕೂಲತೆಯೂ ಹೆಚ್ಚಲಿದೆ. ಈ ವರ್ಷದಲ್ಲಿ ಕೈಗೊಳ್ಳುವ ಪ್ರಯಾಣವು ನಿಮ್ಮ ಆತ್ಮಸ್ಥೈರ್ಯವನ್ನು ವೃದ್ಧಿಸಲಿದೆ ಹಾಗೂ ನೀವು ಅನೇಕ ಹೊಸ ಜನರ ಸಂಪರ್ಕಕ್ಕೆ ಬರಲಿದ್ದೀರಿ.

ಮಿಥುನ

2022ರ ಈ ವರ್ಷವು ಮಿಥುನ ರಾಶಿಯವರಿಗೆ ಅತ್ಯಂತ ಶುಭ ಸುದ್ದಿಯನ್ನು ತಂದುಕೊಡಲಿದೆ. ಈ ವರ್ಷದಲ್ಲಿ ನೀವು ಕೆಲವು ಹೊಸ ದಾಖಲೆಗಳನ್ನು ಮಾಡಲಿದ್ದೀರಿ. ನೀವು ವಿದ್ಯಾರ್ಥಿಯಾಗಿದ್ದರೆ, ಈ ವರ್ಷವು ನಿಮ್ಮ ವರ್ಷವೆನಿಸಲಿದೆ. ನಿಮ್ಮ ಕಠಿಣ ಶ್ರಮ ಹಾಗೂ ಏಕಾಗ್ರತೆಯಿಂದ ಕಲಿಯುವ ಪ್ರವೃತ್ತಿಯು ನಿಮಗೆ ಯಶಸ್ಸನ್ನು ತಂದು ಕೊಡಲಿದೆ.

ಈ ಮೂಲಕ ಜನರ ಹೃದಯವನ್ನು ಗೆಲ್ಲುವಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ನೀವು ವ್ಯಾಪಾರಿಯಾಗಿದ್ದರೆ ಸಾಕಷ್ಟು ಲಾಭವನ್ನು ಗಳಿಸಲಿದ್ದೀರಿ. ನೀವು ಉದ್ಯೋಗಿಯಾಗಿದ್ದರೆ ನಿಮ್ಮ ಬಾಸ್‌ನ ನಂಬಿಕೆ ಗಳಿಸಿದ್ದೀರಿ ಹಾಗೂ ನಿಮ್ಮ ಕಠಿಣ ಶ್ರಮದ ಮೂಲಕ ನಿಮ್ಮ ಸ್ಥಾನವನ್ನು ವೃದ್ಧಿಸಲಿದ್ದೀರಿ. ಆರೋಗ್ಯದ ಕುರಿತ ಅಸಡ್ಡೆಯು ನಿಮಗೆ ಸಮಸ್ಯೆಯುಂಟು ಮಾಡಬಹುದು. ಹೀಗಾಗಿ ಆರೋಗ್ಯದ ಕುರಿತು ಈ ವರ್ಷದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ನೀವು ಸಮಸ್ಯೆಯನ್ನು ಎದುರಿಸಬೇಕಾದೀತು. ಏಪ್ರಿಲ್‌ನಿಂದ ಡಿಸೆಂಬರ್‌ ತನಕ ನಿಮ್ಮ ವೃತ್ತಿಯಲ್ಲಿ ನೀವು ಗುರು ಬಲವನ್ನು ಪಡೆಯಲಿದ್ದೀರಿ. ಆದರೂ ಖರ್ಚುವೆಚ್ಚಗಳ ನಿಯಂತ್ರಣವು ನಿಮ್ಮ ಪಾಲಿಗೆ ಅತ್ಯಂತ ದೊಡ್ಡ ಸವಾಲೆನಿಸಲಿದೆ.

ಹಣಕಾಸನ್ನು ಚೆನ್ನಾಗಿ ನಿಭಾಯಿಸದೆ ಹೋದರೆ ಈ ಸವಾಲುಗಳು ನಿಮಗೆ ಸಮಸ್ಯೆಯನ್ನುಂಟು ಮಾಡಬಹುದು. ನಿಮ್ಮ ಕುಟುಂಬದ ಸದಸ್ಯರ ಸಾಮರಸ್ಯವನ್ನು ಕಂಡು ಆಂತರಿಕ ಸಂತಸವನ್ನು ಪಡೆಯಲಿದ್ದೀರಿ. ವರ್ಷದ ಮಧ್ಯ ಭಾಗವು ಚೆನ್ನಾಗಿರಲಿದ್ದು, ನೀವು ಸಾಕಷ್ಟು ವಿರಾಮವನ್ನು ಪಡೆಯಲಿದ್ದೀರಿ. ಏಪ್ರಿಲ್‌ ನಂತರ ಶನಿಯ ಸಂಕ್ರಮಣವು ನಿಮಗೆ ಒಂದಷ್ಟು ಸಮಸ್ಯೆ ತಂದು ಕೊಡಲಿದೆ. ಎಷ್ಟು ಕಠಿಣವಾಗಿ ದುಡಿದರೂ ನಿರೀಕ್ಷಿತ ಯಶಸ್ಸನ್ನು ನೀವು ಪಡೆಯುತ್ತಿಲ್ಲ ಎಂದು ನೀವು ಭಾವಿಸಬಹುದು.

ಆದರೆ, ನೀವು ಭೀತಿಗೆ ಒಳಗಾಗುವ ಅಗತ್ಯವಿಲ್ಲ. ಸ್ವಲ್ಪ ಸಮಯದ ನಂತರ ನೀವು ಯಶಸ್ಸನ್ನು ಗಳಿಸಲಿದ್ದೀರಿ. ನಿಮ್ಮ ಜೊತೆ ಕೆಲಸ ಮಾಡುವ ಜನರ ಮೇಲೆ ನೀವು ನಂಬಿಕೆ ಇಡಬೇಕು. ಈ ವರ್ಷವು ನಿಮಗೆ ಪ್ರಯಾಣದ ಅನೇಕ ಅವಕಾಶಗಳನ್ನು ತಂದು ಕೊಡಲಿದೆ. ಅಲ್ಲದೆ ನೀವು ಈ ವರ್ಷದಲ್ಲಿ ಅನೇಕ ಪುಣ್ಯಸ್ಥಳಗಳಿಗೂ ಭೇಟಿ ನೀಡಬಹುದು. ಧಾರ್ಮಿಕ ಭೇಟಿಗಳನ್ನು ಮಾಡುವ ಸಾಧ್ಯತೆ ಅಧಿಕವಾಗಿದೆ. ವರ್ಷದ ಆರಂಭದಲ್ಲಿ ನಿಮ್ಮ ವಿರೋಧಿಗಳು ನಿಮ್ಮ ವಿರುದ್ಧ ಷಡ್ಯಂತ್ರ ರೂಪಿಸುವ ಸಾಧ್ಯತೆ ಇರುವುದರಿಂದ ಈ ಕುರಿತು ವಿಶೇಷ ಕಾಳಜಿ ವಹಿಸಬೇಕು. ನೀವು ಅವರ ಕುರಿತು ಎಚ್ಚರ ವಹಿಸಿದರೆ ಬಚಾವ್‌ ಆಗುತ್ತೀರಿ. ವರ್ಷದ ಮಧ್ಯ ಭಾಗದಲ್ಲಿ ನೀವು ಅವರ ಮೇಲೆ ಪ್ರಾಬಲ್ಯ ಸಾಧಿಸಲಿದ್ದೀರಿ.

ವರ್ಷದ ಕೊನೆಗೆ ಪರಿಸ್ಥಿತಿಯಲ್ಲಿ ಇನ್ನಷ್ಟು ಸುಧಾರಣೆ ಉಂಟಾಗಲಿದೆ. ನಿಮ್ಮ ಅನೇಕ ವಿರೋಧಿಗಳು ನಿಮ್ಮ ಗೆಳೆಯರಾಗಲೂಬಹುದು. ಇದು ನಿಮ್ಮಲ್ಲಿ ಸಂತಸ ಉಂಟು ಮಾಡಲಿದೆ. ಹೀಗಾದರೆ ಅವರ ಬಗ್ಗೆ ನೀವು ಚಿಂತಿಸಬೇಕಾದ ಅವಶ್ಯಕತೆ ಉಂಟಾಗುವುದಿಲ್ಲ. ಸಂಪೂರ್ಣ ಆತ್ಮವಿಶ್ವಾಸದ ಮೂಲಕ ಈ ವರ್ಷದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ ಹಾಗೂ ನಿಮ್ಮ ಬದುಕಿನಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ವಹಿಸಬೇಕು.

ಕರ್ಕಾಟಕ

2022ರ ಈ ವರ್ಷವು ಕರ್ಕಾಟಕ ರಾಶಿಯವರಿಗೆ ಅನೇಕ ಕ್ಷೇತ್ರಗಳಲ್ಲಿ ಅತ್ಯಂತ ಶುಭ ಸುದ್ದಿಯನ್ನು ತಂದುಕೊಡಲಿದೆ. ವ್ಯವಹಾರದಲ್ಲಿ ನೀವು ಸಾಕಷ್ಟು ಪ್ರಗತಿ ಸಾಧಿಸಲಿದ್ದೀರಿ. ನೀವು ಭಾವಿಸದೆ ಇದ್ದ ಕ್ಷೇತ್ರದಲ್ಲಿಯೂ ಉತ್ತಮ ಲಾಭ ಗಳಿಸಲಿದ್ದೀರಿ. ನೀವು ಉದ್ಯೋಗಿ ಆಗಿದ್ದರೆ, ಮೆಲ್ಲನೆ ಆದರೂ ಖಂಡಿತವಾಗಿಯೂ ಯಶಸ್ಸು ಸಾಧಿಸಲಿದ್ದು, ಪ್ರೋತ್ಸಾಹಕವನ್ನೂ ಪಡೆಯಲಿದ್ದೀರಿ. ನೀವು ಸಾಕಷ್ಟು ಪ್ರಯಾಣವನ್ನು ಮಾಡಬಹುದು. ನಿಮ್ಮ ಕೆಲಸದ ಕುರಿತು ಪ್ರಶಂಸೆ ವ್ಯಕ್ತವಾಗಲಿದೆ.

ಜನರ ಕಣ್ಣಿನಲ್ಲಿ ನಿಮ್ಮ ಕೆಲಸದ ಮೌಲ್ಯವು ವೃದ್ಧಿಸಲಿದೆ. ಕುಟುಂಬದ ವಾತಾವರಣವು, ಇಡೀ ವರ್ಷದಲ್ಲಿ ನೀವು ಮುಂದೆ ಹೆಜ್ಜೆ ಇಡಲು ಸಹಾಯ ಮಾಡಲಿದೆ. ವರ್ಷದ ಮಧ್ಯಭಾಗದಲ್ಲಿ ನಿಮ್ಮ ಕುಟುಂಬದ ಹಿರಿಯರ ಆರೋಗ್ಯದಲ್ಲಿ ಕುಸಿತ ಉಂಟಾಗುವ ಕಾರಣ ನೀವು ಚಿಂತೆಗೆ ಒಳಗಾಗಬಹುದು. ಆದರೆ, ಕೊನೆಯ ಮೂರು ತಿಂಗಳುಗಳ ಶುಭಕರವೆನಿಸಲಿವೆ. ಕುಟುಂಬದಲ್ಲಿ ಪರಸ್ಪರ ಸಾಮರಸ್ಯ ಇರಲಿದೆ. ಜನರು ಪರಸ್ಪರ ಕಾಳಜಿ ತೋರಲಿದ್ದಾರೆ. ಈ ವರ್ಷದಲ್ಲಿ ಏನಾದರೂ ಹೊಸತನ್ನು ಸಾಧಿಸಲು ನೀವು ಅವಕಾಶ ಪಡೆಯಲಿದ್ದೀರಿ. ಕೆಲವು ಹೊಸ ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ.

ಇದು ನಿಮ್ಮ ಚಿಂತನಾ ಶೈಲಿಯನ್ನು ಬದಲಾಯಿಸಲಿದೆ. ನಿಮ್ಮ ವಿಚಾರಗಳು ಬದಲಾಗಲಿವೆ. ನೀವು ಬದುಕನ್ನು ವಿಶಾಲ ದೃಷ್ಟಿಕೋನದಿಂದ ನೋಡಲಿದ್ದೀರಿ. ನೀವು ಆತ್ಮಾವಲೋಕನ ಮಾಡಲಿದ್ದು, ಬದುಕಿನಲ್ಲಿ ಯಾವ ಸರಿ ತಪ್ಪುಗಳನ್ನು ಮಾಡಿದ್ದೀರಿ ಎಂದು ಯೋಚಿಸಲಿದ್ದೀರಿ. ಏಪ್ರಿಲ್‌ ತಿಂಗಳಿನಲ್ಲಿ ನಾಲ್ಕು ಪ್ರಮುಖ ಗ್ರಹಗಳ ರಾಶಿಯಲ್ಲಿ ಬದಲಾವಣೆ ಉಂಟಾಗಲಿದ್ದು ಇದು ನಿಮಗೆ ಸರಾಸರಿಗಿಂತಲೂ ಉತ್ತಮ ಫಲಿತಾಂಶ ತಂದು ಕೊಡಲಿದೆ. ಆದರೂ 8ನೇ ಮನೆಯಲ್ಲಿ ಶನಿಯ ಸಂಕ್ರಮಣ ಉಂಟಾಗುವ ಕಾರಣ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬಹುದು. ಏಪ್ರಿಲ್‌ ನಂತರ ರಾಹು ಮತ್ತು ಕೇತುಗಳು ನಿಮ್ಮ 4ಕನೇ ಮತ್ತು 10ನೇ ಮನೆಯನ್ನು ಹಾದು ಹೋಗುತ್ತವೆ. ವರ್ಷದ ಮಧ್ಯ ಭಾಗದ ನಂತರ ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ನೀವು ಸಾಕಷ್ಟು ಜಾಗರೂಕತೆಯನ್ನು ವಹಿಸಬೇಕು.

ಆದರೂ, ಏಪ್ರಿಲ್‌ ನಂತರ ಉಂಟಾಗುವ ಗುರುವಿನ ಸಂಕ್ರಮಣವು ಉದ್ಯೋಗದಲ್ಲಿರುವವರಿಗೆ ಶುಭ ಸಮಯವನ್ನು ತಂದು ಕೊಡಲಿದೆ. ಈ ವರ್ಷದಲ್ಲಿ ನೀವು ಜ್ಯೋತಿಷ್ಯ ಶಾಸ್ತ್ರ ಅಥವಾ ಪುರಾತತ್ವಕ್ಕೆ ಸಂಬಂಧಿಸಿದ ವಿಷಯದಲ್ಲಿ ಆಸಕ್ತಿ ತೋರಲಿದ್ದೀರಿ. ಅಧ್ಯಾತ್ಮಿಕ ವಿಚಾರಗಳಲ್ಲಿ ನೀವು ಸಕ್ರಿಯವಾಗಿ ಭಾಗವಹಿಸಲಿದ್ದೀರಿ ಹಾಗೂ ಅವುಗಳನ್ನು ಆನಂದಿಸಲಿದ್ದೀರಿ. ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿಯಾಗಲಿದ್ದು, ನಿಮ್ಮ ಶುಭ ಕಾರ್ಯಗಳೊಂದಿಗೆ ಹೆಸರು ಗಳಿಸಲಿದ್ದೀರಿ. ಯಾರಾದರೂ ಗುರುಗಳು ಅಥವಾ ಅಧ್ಯಾತ್ಮಿಕ ವ್ಯಕ್ತಿಯ ಮಾರ್ಗದರ್ಶನವನ್ನು ನೀವು ಪಡೆಯಲಿದ್ದು ಇದು ನಿಮ್ಮ ಬದುಕಿನ ದಿಕ್ಕನ್ನು ಬದಲಾಯಿಸಲಿದೆ. ವ್ಯಾವಹಾರಿಕ ಉದ್ದೇಶದಿಂದ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ.

ಸಿಂಹ

ಸಿಂಹ ರಾಶಿಯವರಿಗೆ 2022ರಲ್ಲಿ ಜವಾಬ್ದಾರಿಯು ಹೆಚ್ಚಲಿದೆ. ನಿಮ್ಮ ಆತ್ಮವಿಶ್ವಾಸವು ಮರಳಿ ಬರಲಿದೆ. ವ್ಯಾಪಾರೋದ್ಯಮಿಗಳಿಗೆ ಈ ವರ್ಷವೂ ಅತ್ಯುತ್ತಮ ಫಲಿತಾಂಶ ದೊರೆಯಲಿದ್ದು, ನಿಮ್ಮ ವೃತ್ತಿಯಲ್ಲಿ ಎಲ್ಲಾ ರೀತಿಯಲ್ಲಿಯೂ ಅತ್ಯುನ್ನತ ಫಲಿತಾಂಶ ದೊರೆಯಲಿದೆ. ಆದರೆ, ಈ ವರ್ಷದಲ್ಲಿ ಶನಿಯು ನಿಮ್ಮ ಜಾತಕದಲ್ಲಿ ಏಳನೇ ಮನೆಗೆ ಬರುವುದರಿಂದ ಈ ವರ್ಷದಲ್ಲಿ ನಿಮ್ಮ ವ್ಯವಹಾರ ಪಾಲುದಾರ ಮತ್ತು ನಿಮ್ಮ ನಡುವೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಇದೇ ವೇಳೆ ಜೀವನ ಸಂಗಾತಿಯ ಜೊತೆಗೂ ಒಂದಷ್ಟು ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಹಣಕಾಸಿನ ವಿಚಾರದಲ್ಲಿ ನೀವು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದರೂ, ನೀವು ಹಣಕಾಸಿನ ದಕ್ಷ ನಿರ್ವಹಣೆಗೆ ಒತ್ತು ನೀಡಬೇಕು.

ಇಲ್ಲದಿದ್ದರೆ ನೀವು ದುಡಿದ ಎಲ್ಲಾ ಹಣವನ್ನು ಬೇರೆ ಬೇರೆ ಖರ್ಚುಗಳಿಗಾಗಿ ವೆಚ್ಚ ಮಾಡಬೇಕಾದೀತು. ನೀವು ಈ ವರ್ಷದಲ್ಲಿ ಪ್ರಯತ್ನಿಸಿದರೆ, ನಿಮ್ಮ ಕೈಗೆ ದೊಡ್ಡ ಪ್ರಮಾಣದ ಭೂಮಿ ಅಥವಾ ರಿಯಲ್‌ ಎಸ್ಟೇಟ್‌ ಸಿಗಲಿದೆ. ಈ ಮೂಲಕ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವರ್ಷದ ಮಧ್ಯ ಭಾಗದಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಕುಸಿತ ಉಂಟಾಗುವ ಕಾರಣ ಸಮಸ್ಯೆಗಳು ಉಂಟಾಗಬಹುದು. ಆದರೆ ಇದನ್ನು ನೀವು ಯಶಸ್ವಿಯಾಗಿ ನಿಭಾಯಿಸಲಿದ್ದು ಎಲ್ಲವೂ ಸುಗಮಗೊಳ್ಳಲಿದೆ.

ನೀವು ವಿದೇಶಕ್ಕೆ ಹೋಗಲು ಇಚ್ಛಿಸುವುದಾದರೆ, ಫೆಬ್ರುವರಿಯಲ್ಲಿ ಮತ್ತು ಮೇ ಮತ್ತು ಜೂನ್‌ ನಡುವೆ ಇಂತಹ ಅವಕಾಶ ನಿಮ್ಮ ಪಾಲಿಗೆ ಒದಗಿ ಬರಬಹುದು. ಮುಖ್ಯವಾಗಿ ಫೆಬ್ರುವರಿ ತಿಂಗಳಿನಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ಇದರ ನಂತರ ಜುಲೈ ಮತ್ತು ಆಗಸ್ಟ್‌ ನಡುವೆ ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ನಿಮ್ಮ ಕೌಟುಂಬಿಕ ಜೀವನದ ಕುರಿತು ನೀವು ಕಾಳಜಿ ವಹಿಸಲಿದ್ದೀರಿ. ಏಕೆಂದರೆ ಕುಟುಂಬದ ಹಿರಿಯರ ಆರೋಗ್ಯದಲ್ಲಿ ಕುಸಿತ ಉಂಟಾಗುವ ಕಾರಣ ಮನೆಯ ಪರಿಸ್ಥಿತಿ ಹದಗೆಡಲಿದೆ. ಯಾವುದಾದರೂ ವಿಷಯದ ಕುರಿತು ಮನೆಯಲ್ಲಿ ಘರ್ಷಣೆ ಉಂಟಾಗಬಹುದು.

ಈ ಕಾರಣದಿಂದಾಗಿ ನೀವು ಒಂದಷ್ಟು ಮಟ್ಟಿಗೆ ಮಾನಸಿಕ ಕ್ಷೋಭೆಗೆ ಒಳಗಾಗಬಹುದು. ಆದರೆ ನೀವು ಜಾಣ್ಮೆಯಿಂದ ಕೆಲಸ ಮಾಡಿದರೆ ಈ ಪರಿಸ್ಥಿತಿಯಿಂದ ನೀವು ಹೊರ ಬರಬಹುದು. ನಿಮ್ಮ ಅತ್ತೆ ಮಾವಂದಿರಿಂದ ನೀವು ಸಾಕಷ್ಟು ಪ್ರಯೋಜನವನ್ನು ಪಡೆಯಲಿದ್ದೀರಿ. ಅವರ ಮಾರ್ಗದರ್ಶನದಿಂದಾಗಿ, ನಿಮ್ಮ ಕಾರ್ಯಸ್ಥಳದಲ್ಲಿ ನೀವು ಪ್ರಗತಿ ಸಾಧಿಸಲಿದ್ದೀರಿ. ನೀವು ಯಾವುದೇ ವ್ಯವಹಾರವನ್ನು ಮಾಡುವುದಾದರೆ ನಿಮ್ಮ ಅತ್ತೆ-ಮಾವಂದಿರ ಕೊಡುಗೆಯಲ್ಲಿ ಹೆಚ್ಚಳ ಉಂಟಾಗಲಿದೆ. ಹೀಗೆ ಈ ವರ್ಷವು ನಿಮಗೆ ಅನೇಕ ಸವಾಲುಗಳನ್ನು ಒಡ್ಡಲಿದೆ ಮಾತ್ರವಲ್ಲದೆ ಹೊಸ ಅವಕಾಶಗಳನ್ನೂ ಸೃಷ್ಠಿಸಲಿದೆ. ಧೈರ್ಯದಿಂದ ಸವಾಲುಗಳನ್ನು ಎದುರಿಸಿ ಹಾಗೂ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಿ!

ಕನ್ಯಾ

ಕನ್ಯಾ ರಾಶಿಯವರು ಸಾಕಷ್ಟು ಜಾಣ್ಮೆಯನ್ನು ಹೊಂದಿದ್ದು ತಮ್ಮ ಕೆಲಸವನ್ನು ಮಾಡಿಸಿಕೊಳ್ಳುವುದರಲ್ಲಿ ನಿಪುಣರು. ಗ್ರಹಗಳ ಸ್ಥಾನಗಳ ಪ್ರಕಾರ 2022ರಲ್ಲಿ ಹೆಚ್ಚಿನ ಸಮಯದಲ್ಲಿ ಅದೃಷ್ಟವು ನಿಮ್ಮ ಪರವಾಗಿ ಇರಲಿದೆ. ಹೀಗಾಗಿ ನೀವು ಅನೇಕ ಕೆಲಸಗಳನ್ನು ಸುಲಭವಾಗಿ ಮಾಡಲಿದ್ದೀರಿ. ನೀವು ದೂರದ ಊರುಗಳಿಗೆ ಪ್ರಯಾಣಿಸುವ ಸಾಧ್ಯತೆ ಇದ್ದು ನಿಮ್ಮ ಪಾಲಿಗೆ ಇದು ಹೊಸ ವೃದ್ಧಿಯನ್ನು ತಂದು ಕೊಡಲಿದೆ. ಏಪ್ರಿಲ್‌ ನಂತರ ಗುರುವು ಮೀನ ರಾಶಿಗೆ ಪ್ರವೇಶಿಸುವ ಕಾರಣ ನಿಮಗೆ ಶುಭ ಸುದ್ದಿ ದೊರೆಯಲಿದೆ.

ಈ ಸಂದರ್ಭದಲ್ಲಿ ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಾಂಧವ್ಯವು ತುಂಬಾ ಚೆನ್ನಾಗಿರಲಿದೆ. ಸಾಮಾನ್ಯ ಕೌಟುಂಬಿಕ ಜೀವನದತ್ತ ನಾವು ಗಮನ ಹರಿಸುವುದಾದರೆ, ಇಲ್ಲೂ ಪ್ರೀತಿ ಮತ್ತು ಆತ್ಮೀಯತೆ ನೆಲೆಸಲಿದೆ. ನೀವು ಇನ್ನೂ ಅವಿವಾಹಿತರಾಗಿದ್ದರೆ ಈ ವರ್ಷದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೀರಿ. ವಿದೇಶಕ್ಕೆ ಹೋಗಲು ಇಚ್ಛಿಸುವವರು 2022ರ ಮಾರ್ಚ್‌ - ಏಪ್ರಿಲ್‌ ತಿಂಗಳುಗಳಲ್ಲಿ ಹಾಗೂ ನಂತರ ಆಗಸ್ಟ್‌-ಸೆಪ್ಟೆಂಬರ್‌ ತಿಂಗಳುಗಳಲ್ಲಿ ಈ ಅವಕಾಶ ಪಡೆಯಬಹುದು. ನಿಮ್ಮ ಕೆಲವು ಮಿತ್ತರ ಬೆಂಬಲವನ್ನು ನೀವು ಪಡೆಯಬಹುದು. ಆದರೆ, ಕೆಲವು ಮಿತ್ರರ ಕುರಿತು ನೀವು ಸಮಸ್ಯೆಯನ್ನು ಎದುರಿಸಬಹುದು. ಅವರ ಜೊತೆಗಿನ ನಿಮ್ಮ ಸಂಬಂಧದಲ್ಲಿ ಕುಸಿತ ಉಂಟಾಗಲಿದೆ. ಏಪ್ರಿಲ್‌ ನಂತರದ ಕೆಲವು ತಿಂಗಳುಗಳಲ್ಲಿ ನಿಮ್ಮ ಕೆಲಸದ ಕುರಿತು ಒಂದಷ್ಟು ಕಾಳಜಿ ವಹಿಸಿ. ಏಕೆಂದರೆ ನೀವು ಮಾಡುವ ಸಣ್ಣ ತಪ್ಪು ಕೂಡಾ ನೀವು ಕೆಲಸ ಕಳೆದುಕೊಳ್ಳುವಂತೆ ಮಾಡಬಹುದು.

ನಿಮ್ಮ ಹಿರಿಯರ ಮಾತನ್ನು ನೀವು ಪಾಲಿಸಬೇಕು. ಜೂನ್‌ ಮತ್ತು ಜುಲೈಯಲ್ಲಿ ನಿಮ್ಮ ಬುದ್ಧಿಮತ್ತೆಯು ವೇಗವಾಗಿ ಕೆಲಸ ಮಾಡಲಿದೆ. ಇದರಿಂದಾಗಿ ಅತ್ಯಂತ ಕಷ್ಟದ ಕೆಲಸವನ್ನು ಸುಲಭವಾಗಿ ನೀವು ಬಗೆಹರಿಯಲಿದ್ದೀರಿ. ಇದು ಕಾರ್ಯಸ್ಥಳದಲ್ಲಿ ನಿಮಗೆ ಮೇಲುಗೈ ಒದಗಿಸಲಿದೆ. ನಿಮಗೆ ಪ್ರಶಂಸೆ ಸಿಗುವ ಸಾಧ್ಯತೆಯೂ ಇದೆ. ಆದರೂ, ಮೇ ನಂತರ ನಿಮ್ಮ ವಿರೋಧಿಗಳ ಕುರಿತು ನೀವು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಅವರು ಆಗಾಗ ನಿಮಗೆ ಕಿರುಕುಳ ನೀಡಬಹುದು. ನಿಮ್ಮ ಮನಸ್ಸು ಪುರಾತತ್ವಕ್ಕೆ ಸಂಬಂಧಿಸಿದ ವಿಷಯವನ್ನು ಅರಿತುಕೊಳ್ಳಲು ಮತ್ತು ಅರ್ಥೈಸಿಕೊಳ್ಳಲು ಆಸಕ್ತಿ ತೋರಲಿದೆ. ಇದರಿಂದಾಗಿ ಏನಾದರೂ ಹೊಸತನ್ನು ಕಲಿಯಲು ನಿಮಗೆ ಅವಕಾಶ ದೊರೆಯಲಿದೆ. ನಿಮ್ಮ ಮಕ್ಕಳ ಕುರಿತು ಒಂದಷ್ಟು ಕಳವಳವು ನಿಮ್ಮನ್ನು ಕಾಡಬಹುದು. ಈ ವರ್ಷ ಒಟ್ಟಾರೆ ನಿಮಗೆ ಸಾಮಾನ್ಯ ಫಲ ದೊರೆಯಲಿದೆ.

ತುಲಾ

2022ರ ಈ ವರ್ಷವು ತುಲಾ ರಾಶಿಯವರಿಗೆ ಮಿಶ್ರ ಫಲವನ್ನು ನೀಡಲಿದೆ. ಈ ವರ್ಷದಲ್ಲಿ ನಿಮಗೆ ಹೊರ ಹೋಗಲು ಸಾಕಷ್ಟು ಅವಕಾಶಗಳು ಒದಗಿ ಬರಲಿವೆ. ಅಲ್ಲದೆ ನೀವು ನೆಲೆಗೊಳ್ಳಲು ಇಚ್ಛಿಸುವುದಾದರೆ ಈ ವರ್ಷವು ನಿಮಗೆ ಅತ್ಯುತ್ತಮ. ನಿಮ್ಮ ಪ್ರಯತ್ನಗಳಿಗೆ ಇನ್ನಷ್ಟು ವೇಗ ನೀಡಿ. ಇದು ನಿಮಗೆ ಆದಷ್ಟು ಬೇಗನೆ ಫಲಿತಾಂಶವನ್ನು ತಂದು ಕೊಡಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಕುಟುಂಬದಿಂದ ದೂರಕ್ಕೆ ಹೋಗಬೇಕಾದೀತು. ಏಕೆಂದರೆ ಈ ವರ್ಷದಲ್ಲಿ ಕಾರ್ಯಸ್ಥಳದಲ್ಲಿ ಬದಲಾವಣೆಯುಂಟಾಗುವ ಬಲವಾದ ಸಾಧ್ಯತೆ ಇದೆ. ನೀವು ಉದ್ಯೋಗಿ ಆಗಿದ್ದರೆ ನಿಮ್ಮ ಕೆಲಸದಲ್ಲಿ ಬದಲಾವಣೆ ಉಂಟಾಗಬಹುದು. ಈ ವರ್ಷದಲ್ಲಿ ನೀವು ಮಕ್ಕಳನ್ನು ಪಡೆಯುವ ಸಾಧ್ಯತೆ ಇದೆ.

ಬದುಕಿನ ಪರಿಸ್ಥಿತಿಯನ್ನು ನೋಡಿಕೊಂಡು ನೀವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಈ ಸ್ವಭಾವವು ನಿಮಗೆ ಈ ವರ್ಷದಲ್ಲಿ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ನಿಮ್ಮ ವಿವೇಕವು ಈ ವರ್ಷದಲ್ಲಿ ನಿಮ್ಮ ಅತಿ ದೊಡ್ಡ ಸಂಗಾತಿ ಎನಿಸಲಿದೆ. ಈ ಎಲ್ಲದರ ನಡುವೆ ಒಂದು ವಿಷಯವನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ ಕೆಲವು ಶತ್ರುಗಳು ಗೌಪ್ಯವಾಗಿ ನಿಮಗೆ ಹಾನಿಯನ್ನುಂಟು ಮಾಡಲು ಯತ್ನಿಸಬಹುದು. ನಿಮ್ಮ ಹಣಕಾಸಿನ ಸ್ಥಿತಿಯ ಕುರಿತು ನೀವು ಕಾಳಜಿ ವಹಿಸಬೇಕು ಎಂದು ಗ್ರಹಗಳ ಸ್ಥಾನವು ಸೂಚಿಸುತ್ತದೆ. ಅನಗತ್ಯ ವೆಚ್ಚಗಳ ಕಾರಣ ನಿಮ್ಮ ಒತ್ತಡವು ಹೆಚ್ಚಲಿದೆ.

ನಿಮ್ಮ ಹಣಕಾಸಿನ ಸ್ಥಿತಿಯು ನಿಮ್ಮ ಪಾಲಿಗೆ ಒಂದು ಹೊರೆಯಾಗಿ ಪರಿಣಮಿಸಲಿದೆ. ನೀವು ಮೊದಲೇ ಪೂರ್ವಸಿದ್ಧತೆ ಮಾಡಿಕೊಂಡರೆ ಯಾವುದೇ ದೊಡ್ಡ ಸಮಸ್ಯೆ ಉಂಟಾಗದು. ನಿಮ್ಮ ಕುಟುಂಬದಲ್ಲಿ ಒತ್ತಡವು ಹೆಚ್ಚುತ್ತಿದ್ದರೆ ನೀವು ಮಧ್ಯಪ್ರವೇಶ ಮಾಡಬೇಕಾದೀತು. ಏಕೆಂದರೆ ರಾಹುವು ಏಳನೇ ಮನೆಗೆ ಪ್ರವೇಶಿಸುವುದರಿಂದ ಕೌಟುಂಬಿಕ ಜೀವನದಲ್ಲಿ ಒತ್ತಡ ಉಂಟಾಗಬಹುದು. ಈ ವರ್ಷವು ಪ್ರಯಾಣಿಸುವುದಕ್ಕೆ ಅನುಕೂಲಕರ. ವರ್ಷದ ಆರಂಭದಲ್ಲಿ ಮತ್ತು ವರ್ಷದ ನಡುವೆ ಮೇ ಮತ್ತು ಜುಲೈ ನಡುವೆ ಪ್ರಯಾಣಿಸಿದರೆ ನಿಮ್ಮ ಪಾಲಿಗೆ ಹೆಚ್ಚು ಪ್ರಯೋಜನಕಾರಿ ಎನಿಸಲಿದೆ. ಈ ರೀತಿಯಲ್ಲಿ ನಿಮ್ಮ ವ್ಯವಹಾರದಲ್ಲಿಯೂ ಪ್ರಗತಿ ಉಂಟಾಗಲಿದೆ.

ನಿಮ್ಮ ಮಕ್ಕಳ ಶಿಕ್ಷಣದ ಕುರಿತು ನಿಮಗೆ ಚಿಂತೆ ಉಂಟಾಗಬಹುದು. ನಿಮ್ಮ ಅತ್ತೆ ಮಾವಂದಿರ ಜೊತೆಗೆ ನೀವು ಹೊಂದಿರುವ ಉತ್ತಮ ಸಂಬಂಧವು ನಿಮಗೆ ಲಾಭ ತಂದು ಕೊಡಲಿದೆ. ಅವರು ಬದುಕಿನ ಅನೇಕ ವಿಷಯಗಳಲ್ಲಿ ಉತ್ತಮ ಸಲಹೆ ಮತ್ತು ಬೆಂಬಲವನ್ನು ನೀಡಲಿದ್ದಾರೆ. ಇದು ನಿಮ್ಮ ಪಾಲಿಗೆ ಸಾಕಷ್ಟು ನೆರವು ನೀಡಲಿದೆ. ಮಿತ್ರರು ಮತ್ತು ಸಂಬಂಧಿಗಳ ಜೊತೆಗಿನ ಸಂಬಂಧವು ಚೆನ್ನಾಗಿರಲಿದ್ದು ನಿಮ್ಮ ಮಿತ್ರರು ನಿಮ್ಮ ಕೆಲಸದಲ್ಲಿ ನಿಮಗೆ ಸಹಕರಿಸಲಿದ್ದಾರೆ.

ವೃಶ್ಚಿಕ

ವೃಶ್ಚಿಕ ರಾಶಿಯವರು 2022ರ ಆರಂಭದಲ್ಲಿ ಸಾಕಷ್ಟು ಆತ್ಮವಿಶ್ವಾಸದಿಂದ ಹೆಜ್ಜೆ ಇಡಲಿದ್ದಾರೆ. ಎಲ್ಲವನ್ನೂ ನೀವಾಗಿಯೇ ಮಾಡಲು ಇಷ್ಟಪಡುವಿರಿ. ಈ ಕಾರಣದಿಂದಾಗಿ ನಿಮ್ಮ ದಕ್ಷತೆ ಮತ್ತು ನಾಯಕತ್ವ ಗುಣವು ಇತರರ ಗಮನಕ್ಕೆ ಬರಲಿದೆ. ಜನರೆದುರು ನೀವು ಸಾಕಷ್ಟು ಪ್ರಖ್ಯಾತಿ ಗಳಿಸಲಿದ್ದೀರಿ. ನಿಮ್ಮ ಕೆಲಸದ ಮೇಲೆ ನೀವು ಹಿಡಿತ ಸಾಧಿಸಲಿದ್ದೀರಿ.

ಅಲ್ಲದೆ ದಿನ ಕಳೆದಂತೆ ನಿಮ್ಮ ದಕ್ಷತೆಯು ವೃದ್ಧಿಸಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವರ್ಷವು ಅನುಕೂಲಕರ. ಏಪ್ರಿಲ್‌ ನಂತರ ಉಂಟಾಗುವ ಗುರುವಿನ ಸಂಕ್ರಮಣವು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ವಿದ್ಯಾರ್ಥಿಗಳು ಉತ್ತಮ ಕಾಲೇಜಿಗೆ ಪ್ರವೇಶ ಪಡೆಯಲಿದ್ದಾರೆ. ಈ ವರ್ಷದಲ್ಲಿ ನೀವು ಹಣಕಾಸಿನ ಕುರಿತು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಈ ವರ್ಷದಲ್ಲಿ ಸಾಕಷ್ಟು ಹಣ ನಿಮಗೆ ಹರಿದು ಬರಲಿದೆ. ವರ್ಷದ ಕೊನೆಯ ತಿಂಗಳುಗಳಲ್ಲಿ ನಿಮ್ಮ ಖರ್ಚುವೆಚ್ಚಗಳ ಕುರಿತು ನೀವು ಗಮನ ಹರಿಸಬೇಕಾಗುತ್ತದೆ. ಈ ವರ್ಷ ನೀವು ನಿಮ್ಮ ಮಿತ್ರರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಬೇಕು. ಅವರು ದೊಡ್ಡ ಮಟ್ಟದಲ್ಲಿ ನಿಮ್ಮ ಸಹಾಯಕ್ಕೆ ಬರಲಿದ್ದಾರೆ.

ವರ್ಷದ ಮಧ್ಯ ಭಾಗದಲ್ಲಿ ಈ ರಾಶಿಯವರು ವಿದೇಶಕ್ಕೆ ಹೋಗಲು ಅವಕಾಶ ಪಡೆಯಲಿದ್ದಾರೆ. ಈ ದಿಸೆಯಲ್ಲಿ ಈಗಾಗಲೇ ಪ್ರಯತ್ನಿಸುವವರು ಬೇಗನೇ ಯಶಸ್ಸು ಗಳಿಸಲಿದ್ದಾರೆ. ಈ ವರ್ಷದಲ್ಲಿ ಸ್ವಲ್ಪ ನಿಧಾನ ಗತಿಯಲ್ಲಿ ನೀವು ಆಸ್ತಿಯನ್ನು ಖರೀದಿಸಲು ಯತ್ನಿಸಲಿದ್ದೀರಿ. ಮೇ ಮತ್ತು ಅಕ್ಟೋಬರ್‌ ನಡುವೆ ನಿಮ್ಮ ತಾಯಿ ಮತ್ತು ತಂದೆಯ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಲಿದೆ. ಕೇತುವು ಈ ವರ್ಷದಲ್ಲಿ ನಿಮ್ಮ ರಾಶಿಚಕ್ರದಿಂದ ಹೊರಹೋಗಲಿದ್ದಾನೆ. ನಿಮ್ಮನ್ನು ಕೆಲ ಕಾಲದಿಂದ ಕಾಡುತ್ತಿದ್ದ ಮಾನಸಿಕ ಸಮಸ್ಯೆಗಳು ಈಗ ದೂರವಾಗಲಿವೆ. ಜುಲೈ ನಂತರ ನೀವು ಬದುಕನ್ನು ಹೊಸ ಹುರುಪಿನೊಂದಿಗೆ ಸಾಗಿಸಲಿದ್ದೀರಿ. ಈ ವರ್ಷದಲ್ಲಿ ನೀವು ನಿಮ್ಮ ಯೋಜನೆಗಳನ್ನು ಗೌಪ್ಯವಾಗಿಡಬೇಕು.

ಮೇ ನಂತರ ವಿದೇಶಕ್ಕೆ ಹೋಗುವವರಿಗೆ ಸಕಾಲ. ಅಲ್ಲದೆ ಕೆಲಸದ ವರ್ಗಾವಣೆ ಮತ್ತು ಕೆಲಸದ ಬದಲಾವಣೆಯ ವಿಚಾರದಲ್ಲಿ ನೀವು ಈ ವರ್ಷದಲ್ಲಿ ಅವಕಾಶ ಪಡೆಯಲಿದ್ದೀರಿ. ಸರಿಯಾದ ಅವಕಾಶವನ್ನು ಸರಿಯಾದ ಸಮಯದಲ್ಲಿ ಬಳಸಿಕೊಳ್ಳಲು ಮರೆಯಬೇಡಿ. ಈ ಮೂಲಕ ನೀವು ಪ್ರಗತಿ ಸಾಧಿಸಬಹುದು. ಯಾವುದಾದರೂ ಒಳ್ಳೆಯ ಸ್ಥಳದಲ್ಲಿ ನಿಮ್ಮ ಹಣವನ್ನು ನೀವು ಹೂಡಿಕೆ ಮಾಡುವುದು ಒಳ್ಳೆಯದು. ಇದು ಮುಂದಿನ ವರ್ಷದಲ್ಲಿ ನಿಮ್ಮ ನೆರವಿಗೆ ಬರಲಿದೆ.

ಧನು

ಧನು ರಾಶಿಯವರಿಗೆ ತಮ್ಮನ್ನು ತಾವು ಅರಿತುಕೊಳ್ಳಲು 2022ರಲ್ಲಿ ಅವಕಾಶ ಒದಗಿ ಬರಲಿದೆ. ಏಕೆಂದರೆ ಈ ವರ್ಷದಲ್ಲಿ ನೀವು ಸಾಕಷ್ಟು ಪ್ರಯಾಣ ಮಾಡಲಿದ್ದೀರಿ. ಈ ವರ್ಷದ ಅತ್ಯುತ್ತಮ ಬದಲಾವಣೆ ಎಂದರೆ ನಿಮ್ಮ ಏಳೂವರೆ ಶನಿಯು ಈ ಬಾರಿ ಮುಕ್ತಾಯಗೊಳ್ಳಲಿದೆ. ಕಳೆದ ಅನೇಕ ವರ್ಷಗಳಲ್ಲಿ ಮಾಡಲಾಗದ ಕೆಲಸವು ಈ ಬಾರಿ ಪೂರ್ಣಗೊಳ್ಳಲಿದೆ.

ನೀವು ಹೊಸ ಸ್ಥಳಗಳಿಗೆ ಪ್ರಯಾಣಿಸಲಿದ್ದೀರಿ. ತುಂಬಾ ಆಸಕ್ತಿಕರ ಎನಿಸುವ ಯಾವುದಾದರೂ ಸ್ಥಳಕ್ಕೆ ನೀವು ಹೋಗಲಿದ್ದೀರಿ. ನೀವು ಸಾಹಸವನ್ನು ಇಷ್ಟಪಡಲಿದ್ದೀರಿ. ವರ್ಷದ ಪ್ರಾರಂಭದಿಂದಲೇ ಹಣಕಾಸಿನ ವಿಚಾರದಲ್ಲಿ ನಿಮಗೆ ಕೆಲವು ಒಳ್ಳೆಯ ಅವಕಾಶಗಳು ಕೂಡಿ ಬರಲಿವೆ. ಇದನ್ನು ನೀವು ಕಳೆದು ಕೊಳ್ಳುವುದು ತರವಲ್ಲ. ಹೀಗಾಗಿ ಇವುಗಳಿಗೆ ಅಗತ್ಯ ಗಮನ ನೀಡಿರಿ. ನೀವು ನಿಮ್ಮ ತಾಯಿಯ ಬೆಂಬಲವನ್ನು ಪಡೆಯಲಿದ್ದೀರಿ. ಗುರುವು ಏಪ್ರಿಲ್‌ ತಿಂಗಳಿನಲ್ಲಿ ತಮ್ಮ ಮನೆಯನ್ನು ಬದಲಾಯಿಸಲಿದ್ದು ನಿಮ್ಮ ಸಂತೃಪ್ತಿಯ ಸ್ಥಾನಕ್ಕೆ ತಲುಪಲಿದ್ದಾನೆ. ಹೊಸ ಭೂಮಿ, ಮನೆ ಅಥವಾ ವಾಹನವನ್ನು ಖರೀದಿಸಲು ನೀವು ಯೋಜಿಸಲಿದ್ದೀರಿ. ವೃತ್ತಿಯ ವಿಚಾರದಲ್ಲಿ ಈ ವರ್ಷವು ನಿಮಗೆ ಶುಭಕರವಾಗಿರಲಿದೆ.

ನಿಮ್ಮ ಒಡಹುಟ್ಟಿದವರ ಜೊತೆಗಿನ ಸಂಬಂಧವು ಚೆನ್ನಾಗಿರಲಿದೆ. ಮೆಲ್ಲನೆ ಭಿನ್ನಾಭಿಪ್ರಾಯಗಳು ದೂರಗೊಳ್ಳಲಿವೆ. ಈ ರಾಶಿಯ ಜನರು ಈ ವರ್ಷದಲ್ಲಿ ವಿದೇಶ ಪ್ರಯಾಣದ ಕುರಿತು ಅದ್ಭುತ ಯಶಸ್ಸನ್ನು ಪಡೆಯಲಿದ್ದಾರೆ. ಇದಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದವರು ಹಾಗೂ ಈ ವಿಚಾರದಲ್ಲಿ ಮುಂದುವರಿಯಲು ಇಚ್ಛಿಸುವವರು ವರ್ಷದ ಮಧ್ಯಭಾಗಕ್ಕೆ ಮೊದಲೇ ಹೊರಗೆ ಹೋಗಲು ಅವಕಾಶ ಪಡೆಯಲಿದ್ದಾರೆ. ಅಧ್ಯಯನದ ವಿಚಾರದಲ್ಲಿ ವಿದ್ಯಾರ್ಥಿಗಳು ಒಂದಷ್ಟು ಹೆಚ್ಚಿನ ಪ್ರಯತ್ನ ಮಾಡಬೇಕಾದೀತು. ಏಪ್ರಿಲ್‌ ತಿಂಗಳಿನಲ್ಲಿ ಉಂಟಾಗುವ ರಾಹು ಮತ್ತು ಕೇತುವಿನ ಸ್ಥಾನ ಬದಲಾವಣೆಯು ನಿಮ್ಮ ಪಾಲಿಗೆ ಹೊಸ ಬದಲಾವಣೆಯನ್ನು ತರಲಿದೆ.

ವಿದ್ಯಾರ್ಥಿಗಳು ಯಶಸ್ಸು ಪಡೆಯಬೇಕಾದರೆ ಕಠಿಣ ಶ್ರಮ ಪಡುವ ಅಗತ್ಯವಿದೆ. ಈ ವರ್ಷದಲ್ಲಿ ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ನಿಮ್ಮ ವರ್ತನೆಯ ಮೇಲೆ ಒಂದಷ್ಟು ನಿಗಾ ವಹಿಸುವ ಅಗತ್ಯವಿದೆ. ನಿಮಗೆ ಮಕ್ಕಳ ಕುರಿತ ಕಳವಳ ಕಾಡಬಹುದು. ಆದಾಯವು ಕಡಿಮೆ ಇದ್ದು ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ಇದನ್ನು ನಿಭಾಯಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಈ ವರ್ಷದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಾಕಷ್ಟು ಸಂಪರ್ಕವನ್ನು ಸಾಧಿಸಲಿದ್ದೀರಿ. ಹೀಗೆ ಈ ವರ್ಷವು ನಿಮಗೆ ಅನೇಕ ಹೊಸ ಅನುಭವಗಳನ್ನು ನೀಡಲಿದೆ.

ಮಕರ

2022ರ ಈ ವರ್ಷವು ಮಕರ ರಾಶಿಯವರಿಗೆ ಸಾಧಾರಣಕ್ಕಿಂತ ಚೆನ್ನಾಗಿರಲಿದೆ. ಅನೇಕ ಸ್ಥಳಗಳಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ಏಪ್ರಿಲ್‌ನಿಂದ ಅಕ್ಟೋಬರ್‌ ತನಕದ ಈ ಅವಧಿಯು ನಿಮ್ಮಲ್ಲಿ ಕೆಲವು ಹೊಸ ಬದಲಾವಣೆಗಳನ್ನು ತರಲಿದೆ. ಉದ್ಯೋಗದಲ್ಲಿರುವ ಜನರ ಕೆಲಸದಲ್ಲಿ ಹೆಚ್ಚಳ ಉಂಟಾಗಲಿದೆ. ಆದರೂ, ಸ್ಥಳದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಹೊಸ ಉದ್ಯೋಗ ಅಥವಾ ವ್ಯವಹಾರದಲ್ಲಿರುವವರು ಕೆಲವು ಹೊಸ ಅವಕಾಶಗಳನ್ನು ಪಡೆಯಲಿದ್ದಾರೆ. ನಿಮ್ಮ ಏಳೂವರೆಯ ಇನ್ನೊಂದು ಹಂತ ಕಾಣಿಸಿಕೊಳ್ಳಬಹುದು. ಈ ಹಂತದಲ್ಲಿ ನಿಮ್ಮ ಅನೇಕ ಕೆಲಸಗಳು ಪೂರ್ಣಗೊಳ್ಳಲಿವೆ. ಆದರೂ, ನಿಮ್ಮ ಕಠಿಣ ಶ್ರಮಕ್ಕೆ ಫಲ ದೊರೆಯಲಿದೆ.

ಆದರೆ, ಅದೃಷ್ಟ ಬೆಂಬಲ ಸಿಗುವುದು ಕಷ್ಟಕರ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮ ಆದಾಯವನ್ನು ಹೇಗೆ ಹೆಚ್ಚಿಸಬಹುದು ಎನ್ನುವ ಕುರಿತು ನೀವು ಗಮನ ಹರಿಸಲಿದ್ದೀರಿ. ನೀವು ಇದೇ ರೀತಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ವಿದೇಶಕ್ಕೆ ಹೋಗಲು ಇಚ್ಛಿಸುವವರು ತಮ್ಮ ಪ್ರಯತ್ನಕ್ಕೆ ಉತ್ತಮ ಯಶಸ್ಸು ಪಡೆಯಲಿದ್ದಾರೆ.

ಕುಟುಂಬದ ಎಳೆಯ ಸದಸ್ಯರು ನಿಮ್ಮನ್ನು ಸಾಕಷ್ಟು ಪ್ರೀತಿಸಲಿದ್ದಾರೆ ಹಾಗೂ ನಿಮ್ಮ ಜೊತೆಗೆ ಸಾಮರಸ್ಯದಿಂದ ಬದುಕಲಿದ್ದಾರೆ. ಜುಲೈ ಮತ್ತು ಅಕ್ಟೋಬರ್‌ ನಡುವೆ ಅತಿಯಾದ ಆತ್ಮವಿಶ್ವಾಸ ತೋರಿಸಬೇಡಿ. ಇಲ್ಲದಿದ್ದರೆ ನೀವು ಕೆಲವು ಪ್ರಮುಖ ಅವಕಾಶಗಳನ್ನು ಕಳೆದುಕೊಳ್ಳಬಹುದು. ಈ ವರ್ಷದಲ್ಲಿ ನಿಮ್ಮ ತಾಯಿ ಮತ್ತು ತಂದೆಯ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಲಿದೆ. ವರ್ಷದ ಮಧ್ಯ ಭಾಗದಲ್ಲಿ, ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಕಂಡು ಬರುವ ಸಾಧ್ಯತೆ ಇರುವುದರಿಂದ ನೀವು ಈ ಕುರಿತು ಒಂದಷ್ಟು ಗಮನ ನೀಡಬೇಕಾದೀತು. ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಆದರೆ ಈ ವರ್ಷದ ಕೊನೆಯ ನಾಲ್ಕು ತಿಂಗಳುಗಳು ನಿಮ್ಮ ಪಾಲಿಗೆ ಫಲಪ್ರದ ಎನಿಸಲಿವೆ.

ದೀರ್ಘ ಕಾಲದಿಂದ ನೀವು ಪೂರ್ಣಗೊಳಿಸಲು ಇಚ್ಛಿಸುತ್ತಿದ್ದ ಹಾಗೂ ಬಾಕಿ ಇರುವ ಕೆಲಸವು ಪೂರ್ಣಗೊಳ್ಳಲಿದೆ. ಹಣಕಾಸಿನ ವಿಚಾರದಲ್ಲಿಯೂ ಈ ವರ್ಷವು ನಿಮಗೆ ಲಾಭದಾಯಕ ಎನಿಸಲಿದೆ. ಹೀಗಾಗಿ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ನೀವು ಯತ್ನಿಸಬೇಕು. ಕಾನೂನಿನ ವಿಚಾರಗಳಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ.

ಕುಂಭ

ಕುಂಭ ರಾಶಿಯವರು ತಮ್ಮ ಅನುರಾಗದ ವಿಚಾರದಲ್ಲಿ ದೃಢತೆಯನ್ನು ಹೊಂದಿರುತ್ತಾರೆ. ಮನಸ್ಸನ್ನು ಗಟ್ಟಿಗೊಳಿಸಿದರೆ ಅವುಗಳನ್ನು ಪೂರ್ಣಗೊಳಿಸಿ ನಿಟ್ಟುಸಿರು ಬಿಡಬಹುದು. ನೀವು ನಿಮ್ಮದೇ ಆದ ನಿಯಮಗಳನ್ನು ರೂಪಿಸಿ ಅದನ್ನು ಪಾಲಿಸಲಿದ್ದೀರಿ. ಹೀಗಾಗಿ ಬೇಗನೆ ನಿಮ್ಮ ಮನಸ್ಸನ್ನು ಬದಲಾಯಿಸಬೇಡಿ. ಈ ವರ್ಷದಲ್ಲಿ ಕುಂಭ ರಾಶಿಯವರು ಎರಡು ವಿಚಾರಗಳ ಮೇಲೆ ಆದಷ್ಟು ಗಮನ ನೀಡಬೇಕು. ಮೊದಲನೆಯದು ಆರೋಗ್ಯ ಮತ್ತು ಎರಡನೆಯದಾಗಿ ನಿಮ್ಮ ಖರ್ಚುವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸಬೇಕು.

ಆದರೂ, ಈ ವರ್ಷದ ಮೊದಲ 4 ತಿಂಗಳುಗಳು ನಿಮಗೆ ಕಷ್ಟಕರವೆನಿಸಲಿವೆ. ಅದೃಷ್ಟ ನಿಮ್ಮ ಜೊತೆಗಿಲ್ಲ ಎಂದು ನಿಮಗೆ ಭಾಸವಾಗಬಹುದು. ಆದರೆ ಏಪ್ರಿಲ್‌ ನಂತರ ಗುರುವಿನ ಸ್ಥಾನ ಬದಲಾವಣೆಯು ನಿಮ್ಮ ಪಾಲಿಗೆ ಶುಭ ಸುದ್ದಿಯನ್ನು ತರಬಹುದು. ಶನಿಯು ಸಹ ಏಪ್ರಿಲ್​ನಲ್ಲಿ ಕುಂಭದಲ್ಲಿ ಸ್ಥಾನ ಬದಲಾವಣೆ ಮಾಡಲಿದೆ. ಇದು ನಿಮ್ಮ ಪಾಲಿಗೆ ಒಂದಷ್ಟು ಆಲಸ್ಯವನ್ನು ಹೊತ್ತು ತರಲಿದೆ. ಆದರೆ ನಿಮ್ಮ ಶಕ್ತಿಯು ವೃದ್ಧಿಸಲಿದೆ. ಈ ವರ್ಷದಲ್ಲಿ ಮೇ ತಿಂಗಳ ನಂತರ ನೀವು ಧಾರ್ಮಿಕ ಅಥವಾ ದೀರ್ಘ ಪ್ರವಾಸವನ್ನು ಕೈಗೊಳ್ಳಬಹುದು.

ಅಲ್ಲದೆ ನೀವು ಸರ್ಕಾರಿ ಕೆಲಸದಿಂದ ಲಾಭವನ್ನು ಪಡೆಯಲಿದ್ದೀರಿ. ಕಾರ್ಯಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ನಯವಿನಯದಿಂದ ವರ್ತಿಸಲಿದ್ದೀರಿ. ಅವರೊಂದಿಗಿನ ನಿಮ್ಮ ಸಂಬಂಧ ಹದಗೆಟ್ಟರೆ ಇದು ನಿಮ್ಮ ಕೆಲಸವನ್ನು ಬಾಧಿಸಲಿದೆ. ಈ ವರ್ಷದ ಮಧ್ಯ ಭಾಗದಲ್ಲಿ ನಿಮ್ಮ ಗೆಳೆಯರಿಂದ ಸಾಕಷ್ಟು ಬೆಂಬಲವನ್ನು ಪಡೆಯಲಿದ್ದೀರಿ. ಈ ಕಾರಣದಿಂದಾಗಿ ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನದ ವಿಚಾರದಲ್ಲಿ ಸಾಕಷ್ಟು ಗಂಭೀರವಾಗಿ ಕೆಲಸ ಮಾಡಬೇಕು. ಕೌಟುಂಬಿಕ ಜೀವನದಲ್ಲಿ ಒಂದಷ್ಟು ಒತ್ತಡ ಎದುರಾಗಬಹುದು. ಆದರೆ ಕಾಲ ಕಳೆದಂತೆ ಇದು ಬಗೆಹರಿಯುತ್ತದೆ. ಈ ವರ್ಷದಲ್ಲಿ ನೀವು ಮುಂದೆ ಸಾಗಿ ಹಳೆದ ಯೋಜಿತ ಕೆಲಸಗಳನ್ನು ಪೂರ್ಣಗೊಳಿಸಿ ಇದರಲ್ಲಿ ಯಶಸ್ಸನ್ನು ಗಳಿಸಲಿದ್ದೀರಿ.

ಮೀನ

2022ರ ಈ ವರ್ಷವು ಮೀನ ರಾಶಿಯವರಿಗೆ ಅತ್ಯುತ್ತಮ ಫಲಿತಾಂಶವನ್ನು ತರಲಿದೆ. ಈ ವರ್ಷದಲ್ಲಿ ನೀವು ಸಾಕಷ್ಟು ಸಾಧನೆ ಮಾಡಲಿದ್ದೀರಿ. ಹೊಸ ವಿಷಯಗಳಲ್ಲಿ ನೀವು ನಿಮ್ಮ ಅದೃಷ್ಟವನ್ನು ಪರೀಕ್ಷಿಸಬಹುದು. ನೀವು ವ್ಯಾಪಾರಿ ಆಗಿದ್ದರೆ ವ್ಯವಹಾರದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಬಹುದು. ಉದ್ಯೋಗದಲ್ಲಿರುವವರು ತಮ್ಮ ಕೌಶಲ್ಯವನ್ನು ವೃದ್ಧಿಸುವುದಕ್ಕಾಗಿ ಯಾವುದೇ ರೀತಿಯ ಆನ್‌ಲೈನ್‌ ತರಬೇತಿಯನ್ನು ತೆಗೆದುಕೊಳ್ಳಬಹುದು.

ನಿಮ್ಮನ್ನು ನೀವು ಉತ್ತುಂಗಕ್ಕೆ ಕೊಂಡೊಯ್ಯುವುದಕ್ಕಾಗಿ ಈ ವರ್ಷದಲ್ಲಿ ನೀವು ಸಾಕಷ್ಟು ಶ್ರಮ ಪಡಲಿದ್ದೀರಿ. ಮೀನ ರಾಶಿಯವರು ಗುರುವಿನ ಜ್ಞಾನದಿಂದ ಕೂಡಿದ್ದು, ಈ ಕಾರಣದಿಂದಾಗಿ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅದೇ ಪ್ರಕಾರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಈ ವರ್ಷದಲ್ಲಿ ಗುರುವು ನಿಮ್ಮ ರಾಶಿಗೆ ಪ್ರವೇಶಿಸಲಿದ್ದಾನೆ. ಇದು ನಿಮಗೆ ಜಾಣ್ಮೆಯನ್ನು ತಂದು ಕೊಡಲಿದೆ. ಎಲ್ಲಾ ಕಡೆಯಲ್ಲಿಯೂ ನಿಮ್ಮ ಪಾಂಡಿತ್ಯಕ್ಕೆ ಪ್ರಶಂಸೆಯ ಸುರಿಮಳೆ ದೊರೆಯಲಿದೆ. ಆದರೆ 2022ರಲ್ಲಿ ಅರ್ಧ ಶನಿಯು ನಿಮ್ಮ ರಾಶಿಯಲ್ಲಿ ಪ್ರಾರಂಭಗೊಳ್ಳಲಿದೆ. ಈ ಕುರಿತು ನೀವು ಚಿಂತಿಸಬೇಕಾದ ಅಗತ್ಯವಿಲ್ಲ.

ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಅವಸರ ಮಾಡಬೇಡಿ. ಆದರೆ ಒಂದಷ್ಟು ಧ್ಯಾನದಲ್ಲಿ ಪಾಲ್ಗೊಳ್ಳುವುದು ನಿಮ್ಮ ಪಾಲಿಗೆ ಅವಶ್ಯಕ. ಏಕೆಂದರೆ ಧ್ಯಾನವು ನಿಮ್ಮ ಸ್ವಯಂ ನಿಯಂತ್ರಣವನ್ನು ಹೆಚ್ಚಿಸುತ್ತದೆ ಹಾಗೂ ಭಾವಾತಿರೇಕವನ್ನು ತಗ್ಗಿಸುತ್ತದೆ. ನೀವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೀರಿ. ನೀವು ಇತರರ ಸ್ವಭಾವವನ್ನು ಬೇಗನೇ ಗುರುತಿಸಿ ಅವರ ಸ್ವಭಾವವನ್ನು ಪ್ರಶಂಸಿಸಲಿದ್ದೀರಿ.

ನಿಮ್ಮ ಈ ಸ್ವಭಾವವು ನಿಮ್ಮನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲಿದೆ. ಈ ವರ್ಷದಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ಎಚ್ಚರಿಕೆ ವಹಿಸಬೇಕು. ಏಕೆಂದರೆ ರೂಪುಗೊಳ್ಳುವ ಅನೇಕ ಯೋಗಗಳ ಕಾರಣ ನೀವು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾದೀತು. ನಿಮ್ಮ ಮಹತ್ವಾಕಾಂಕ್ಷೆಗಳು ಪೂರ್ಣಗೊಳ್ಳಲಿವೆ. ನಿಮಗೆ ಹಣ ಕೊಡಲು ಬಾಕಿ ಇಟ್ಟವರು ಏಪ್ರಿಲ್‌ ನಂತರ ಅದನ್ನು ಮರಳಿಸಲಿದ್ದಾರೆ. ಈ ವರ್ಷದಲ್ಲಿ ನಿಮ್ಮ ಮಾತನ್ನು ನೀವು ಸಾಕಷ್ಟು ಮಟ್ಟಿಗೆ ನಿಯಂತ್ರಿಸಬೇಕು. ಯಾರಾದರೂ ವ್ಯಕ್ತಿಯ ಕುರಿತು ನೀವು ಮತ್ತೆ ಮತ್ತೆ ಬೈಗುಳವನ್ನು ಬಳಸಬಹುದು. ನಿಮ್ಮ ಮನಸ್ಸು ತಿಳಿಯಾಗಿದ್ದರೂ, ಆಡುವ ಮಾತಿನ ಪ್ರಭಾವವು ನಿಮಗೆ ದೊಡ್ಡ ಮಟ್ಟದಲ್ಲಿ ಹಾನಿಯನ್ನುಂಟು ಮಾಡಬಹುದು. ಜೂನ್‌ ಮತ್ತು ಅಕ್ಟೋಬರ್‌ ನಡುವೆ ವಾಹನ ಚಲಾಯಿಸುವಾಗ ನೀವು ಜಾಗರೂಕರಾಗಿರಬೇಕು.

ಹೊಸ ವರ್ಷದ ರಾಶಿ ಭವಿಷ್ಯ

ಹೊಸ ವರ್ಷ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನು ತಂದುಕೊಡಲಿ - ಈಟಿವಿ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.