ETV Bharat / state

ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ, ಬಿಜೆಪಿಯಲ್ಲಿ ಹೊಸ ಚರ್ಚೆ ಆರಂಭ: ಯಾರಾಗ್ತಾರೆ ರಾಜ್ಯ ಬಿಜೆಪಿ ಸಾರಥಿ? - ಬಿಜೆಪಿ ಎಸ್​​ಸಿ ಮೋರ್ಚಾ ಛಲವಾದಿ ನಾರಾಯಣಸ್ವಾಮಿ

ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಸಿಗಬಹುದು ಎಂಬ ವಿಶ್ಲೇಷಣೆ ಇಲ್ಲಿದೆ.

analysis-on-who-will-get-state-bjp-president-post
ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ, ಬಿಜೆಪಿಯಲ್ಲಿ ಹೊಸ ಚರ್ಚೆ ಆರಂಭ: ಯಾರಾಗ್ತಾರೆ ರಾಜ್ಯ ಬಿಜೆಪಿ ಸಾರಥಿ?
author img

By

Published : Aug 2, 2023, 9:24 PM IST

Updated : Aug 2, 2023, 10:53 PM IST

ಬಿಜೆಪಿ ಎಸ್​​ಸಿ ಮೋರ್ಚಾ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬಂದಿದ್ದ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೆಸರು ನಿಧಾನಕ್ಕೆ ಮರೆಯಾಗುತ್ತಿದ್ದು, ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೆಸರು ಈಗ ಮುನ್ನಲೆಗೆ ಬಂದಿದೆ. ಬಿಎಸ್​ವೈ ಜೊತೆ ಉತ್ತಮ ಒಡನಾಟ ಹಾಗೂ ದಲಿತರಿಗೆ ಅವಕಾಶ ಎನ್ನುವ ಕಾರಣದಿಂದಾಗಿ ಲಿಂಬಾವಳಿ ಹೆಸರು ಕೇಳಿಬಂದಿದೆ. ಒಂದು ಪಕ್ಷ ನಡೆಸುವ ತಾಕತ್ತು ದಲಿತರಿಗೆ ಇದ್ದರೆ ಯಾಕೆ ಅವಕಾಶ ಕೊಡಬಾರದು? ದಲಿತರೂ ರಾಜ್ಯಾಧ್ಯಕ್ಷ ಆಗಬಹುದು ಎಂದು ಬಿಜೆಪಿ ಎಸ್​​ಸಿ ಮೋರ್ಚಾ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿರುವುದು ಲಿಂಬಾವಳಿಗೆ ಅವಕಾಶ ಸಾಧ್ಯತೆಗೆ ಪುಷ್ಟಿ ನೀಡಿದೆ.

ಒಕ್ಕಲಿಗ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ, ಲಿಂಗಾಯತ ಸಮುದಾಯಕ್ಕೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಬೇಕು ಎನ್ನುವ ಚರ್ಚೆಗಳು ಬಿಜೆಪಿಯಲ್ಲಿ ನಡೆದಿದ್ದು ಸಿ ಟಿ ರವಿ, ಅಶ್ವತ್ಥನಾರಾಯಣ, ಶೋಭಾ ಕರಂದ್ಲಾಜೆ ಹೆಸರುಗಳು ಕೇಳಿಬಂದಿದ್ದವು. ಅದರಲ್ಲಿ ಸಿ ಟಿ ರವಿ ಹೆಸರು ಬಹುತೇಕ ಅಂತಿಮ ಎನ್ನಲಾಗಿತ್ತು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆ ಮಾಡಿದ್ದ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗಿತ್ತು.

ಅದಕ್ಕೆ ಪೂರಕವಾಗಿ ಯಡಿಯೂರಪ್ಪ ನಿವಾಸಕ್ಕೆ ಸಿ ಟಿ ರವಿ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡು ಬಂದರು. ಆರ್​ಎಸ್​ಎಸ್​ ಕಚೇರಿ ಕೇಶವಕೃಪಾಗೆ ಭೇಟಿ ನೀಡಿ ಸಂಘ ಪರಿವಾರದ ಹಿರಿಯರ ಜೊತೆ ಮಾತುಕತೆ ನಡೆಸಿದ್ದರು. ಇದರ ನಡುವೆ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿತ್ತು. ಆದರೆ ಸಿ ಟಿ ರವಿ ದೆಹಲಿಗೆ ತೆರಳುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ ನಡೆದಿದ್ದು, ಮಾಜಿ ಸಚಿವ ಹಾಗೂ ಭೋವಿ ಸಮುದಾಯಕ್ಕೆ ಸೇರಿರುವ ಅರವಿಂದ ಲಿಂಬಾವಳಿ ಹೆಸರು ಇದೀಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದೆ.

ಸಿ ಟಿ ರವಿ ಹೆಸರಿಗೆ ಪಕ್ಷದ ಹಿರಿಯ ನಾಯಕ ಬಿ ಎಸ್​ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಚುನಾವಣೆಗೂ ಮುನ್ನ ಬಿಎಸ್​ವೈ ಕುಟುಂಬದ ವಿಚಾರದಲ್ಲಿ ಸಿ ಟಿ ರವಿ ಆಡಿದ್ದರೆನ್ನಲಾದ ಮಾತುಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಆಗಿರುವ ಬಿ ಎಲ್ ಸಂತೋಷ್ ಬೆಂಬಲ ಇದ್ದರೂ ಯಡಿಯೂರಪ್ಪ ವಿರೋಧ ಕಟ್ಟಿಕೊಂಡು ಆಯ್ಕೆ ಮಾಡುವುದು ಹೈಕಮಾಂಡ್​ಗೆ ಕಷ್ಟ ಸಾಧ್ಯ​ ಎನ್ನಲಾಗುತ್ತಿದೆ.

ಯಡಿಯೂರಪ್ಪ ಸಂಪುಟದಲ್ಲಿ ಕೆಲಸ ಮಾಡಿದ ಅನುಭವ, ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿ ಕೆಲಸ, ಸಂಘಟನಾ ಚತುರತೆ ಕಾರಣಕ್ಕೆ ಲಿಂಬಾವಳಿ ಹೆಸರು ಮುನ್ನಲೆಗೆ ಬಂದಿದೆ. ಯಡಿಯೂರಪ್ಪ ಜೊತೆ ಉತ್ತಮ ಒಡನಾಟ ಇರಿಸಿಕೊಂಡಿರುವ ಕಾರಣಕ್ಕೆ ಲಿಂಬಾವಳಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಯಡಿಯೂರಪ್ಪ ವಿರೋಧ ವ್ಯಕ್ತವಾಗುವುದಿಲ್ಲ, ಸಂಘ ಪರಿವಾರದ ಜೊತೆಗೂ ಉತ್ತಮ ಒಡನಾಟ ಇದೆ. ಅಲ್ಲದೆ ಭೋವಿ ಸಮುದಾಯಕ್ಕೆ ಸೇರಿದ ಲಿಂಬಾವಳಿಗೆ ಅವಕಾಶ ನೀಡಿದರೆ ದಲಿತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದಂತಾಗಲಿದೆ. ಇದರಿಂದ ಕಾಂಗ್ರೆಸ್​ನ ದಲಿತ ಸಿಎಂ ವಿಚಾರದಲ್ಲಿ ಮತ್ತಷ್ಟು ವಾಗ್ದಾಳಿ ನಡೆಸಲು ಅನುಕೂಲವಾಗಲಿದೆ ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ದಲಿತರು ಯಾಕೆ ರಾಜ್ಯಾಧ್ಯಕ್ಷ ಆಗಬಾರದು ಎಂದು ಬಿಜೆಪಿ ಎಸ್​ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ. ಅಧ್ಯಕ್ಷಗಿರಿ ಕಾಡಿಬೇಡಿ ತೆಗೆದುಕೊಳ್ಳುವುದಲ್ಲ ಯೋಗ್ಯತೆಯ ಮೇಲೆ ಕೊಡುವುದು, ಪಕ್ಷವನ್ನು ನಡೆಸುವ ಶಕ್ತಿ ಯಾರಿಗೆ ಇದೆಯೋ ಅವರಿಗೆ ಖಂಡಿತ ಕೊಡಲಿದ್ದಾರೆ. ಇಂದು ಕೆಲ ಹೆಸರು ಕೂಡ ಪ್ರಸ್ತಾಪವಾಗಿವೆ ಎಂದು ಲಿಂಬಾವಳಿ ಹೆಸರೇಳದೆ ಪರೋಕ್ಷವಾಗಿ ಪ್ರಸ್ತಾಪ ಮಾಡಿದರು.

ಆರಂಭದಲ್ಲಿ ಲಿಂಗಾಯತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಸಿದಿಗಲಿದೆ ಎನ್ನುವ ಮಾತು ಕೇಳಿಬಂದವು. ಆಗ ಒಕ್ಕಲಿಗ ಟ್ರಂಪ್ ಕಾರ್ಡ್ ಪ್ರಯೋಗ ಆಯಿತು, ಸೋಮಣ್ಣ ಖುದ್ದು ಮಾಧ್ಯಮಗೋಷ್ಟಿ ನಡೆಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟರು. ಹೈಕಮಾಂಡ್ ಭೇಟಿ ಮಾಡಿದರು, ಆದರೆ ಸೋಮಣ್ಣ ಹೆಸರು ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆಗೆ ಬರಲಿಲ್ಲ, ಬದಲಾಗಿ ಅಶ್ವತ್ಥನಾರಾಯಣ, ಅಶೋಕ್, ಶೋಭಾ ಕರಂದ್ಲಾಜೆ ಹೆಸರುಗಳು ಕೇಳಿ ಬಂದವು.

ಅಶೋಕ್ ಹಿಂದೆ ಸರಿದರೆ, ಅಶ್ವತ್ಥನಾರಾಯಣ ಹೆಸರು ಪರಿಗಣಿಸಲು ಹೈಕಮಾಂಡ್ ನಿರಾಕರಿಸಿದೆ, ಶೋಭಾ ಕರಂದ್ಲಾಜೆ ಪರ ಒಲವಿದ್ದರೂ ರಾಜ್ಯದ ಕೆಲ ನಾಯಕರ ಅಸಮಧಾನ ವ್ಯಕ್ತವಾಗಲಿರುವ ಕಾರಣಕ್ಕೆ ಯಾರಿಗೆ ಮಣೆ ಹಾಕಬೇಕು ಎನ್ನುವ ಚರ್ಚೆ ನಡೆಯುವಾಗ ಸಿ ಟಿ ರವಿ ಹೆಸರು ಚರ್ಚೆಗೆ ಬಂತು. ಆದರೆ ಈಗ ಅವರ ಹೆಸರೂ ಹಿಂದೆ ಸರಿದಿದ್ದು, ದಲಿತ ಸಮುದಾಯದ ಅರವಿಂದ ಲಿಂಬಾವಳಿ ಹೆಸರು ಮುನ್ನಲೆಗೆ ಬಂದಿದೆ.

ದಲಿತ ಸಮುದಾಯದ ರಮೇಶ್ ಜಿಗಜಿಣಗಿ ರಾಜ್ಯಾಧ್ಯಕ್ಷ ಸ್ಥಾನವನ್ನು ಬಹಿರಂಗವಾಗಿಯೇ ಕೇಳಿದ್ದಾರೆ. ಇನ್ನು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಕೂಡ ಆಕಾಂಕ್ಷಿಯಾಗಿದ್ದಾರೆ. ಇವರೊಂದಿಗೆ ಅರವಿಂದ್ ಲಿಂಬಾಲಿ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಲಿಂಗಾಯತ, ಒಕ್ಕಲಿಗ ನಂತರ ದಲಿತರ ಹೆಸರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದ್ದು ಹೈಕಮಾಂಡ್ ನಾಯಕರು ಯಾರಿಗೆ ಅವಕಾಶ ನೀಡಲಿದ್ದಾರೆ. ಈ ಬಾರಿ ಅಚ್ಚರಿ ಆಯ್ಕೆ ಮಾಡಿ ರಾಜ್ಯ ನಾಯಕರಿಗೆ ಶಾಕ್ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟಿದ್ದಾರೆ, ಸರ್ಕಾರ ಆಡಿದ್ದೇ ಆಟವಾಗಿದೆ : ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ವಾಗ್ದಾಳಿ

Last Updated : Aug 2, 2023, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.