ETV Bharat / state

ಚೌಕಿದಾರ ಅಲ್ಲ ಚೋರ್​... ಮೋದಿ ಕೆಣಕಿದ ಹೆಚ್​​ ಕೆ ಪಾಟೀಲ್​

author img

By

Published : Mar 27, 2019, 7:08 PM IST

ಸ್ವಚ್ಛ ಭಾರತ ಆರಂಭಿಸಿದ್ದು ನಾವು. ಜನರಿಗೆ 15 ಲಕ್ಷ ಮನೆ ಕಟ್ಟಿಕೊಟ್ಟಿದ್ದೇವೆ. ಬಿಜೆಪಿ ಇನ್ನೂ ಒಂದು ಮನೆ ಕಟ್ಟಿಲ್ಲ. ರೈತರ ಪ್ರತಿನಿಧಿಗಳಂತೆ ವರ್ತಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಯಾವ ನೈತಿಕತೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಚೌಕಿದಾರ ಅಲ್ಲ, ಚೋರ್ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಚುನಾವಣಾ ಪ್ರಚಾರ ಸಿದ್ಧತಾ ಕಾರ್ಯಾಗಾರದಲ್ಲಿ ಮಾತನಾಡಿ, ಈ ದೇಶಕ್ಕೆ ದೇಶದ ಜನರಿಗೆ ಮೋದಿ ಕೇವಲ ಸುಳ್ಳು ಭರವಸೆಗಳನ್ನು ಕೊಟ್ಟಿದ್ದಾರೆ. ಯಾವುದೇ ಬೇಡಿಕೆಯನ್ನು ಈಡೇರಿಸಿಲ್ಲ. ಕಳೆದ ಐದು ವರ್ಷ ಕೇವಲ ಭರವಸೆಗಳನ್ನು ಕೊಡುತ್ತಲೇ ಬಂದಿದ್ದಾರೆ. ಇಂಥವರಿಗೆ ಇನ್ನೊಮ್ಮೆ ಅಧಿಕಾರ ಕೊಡುವಾಗ ಜನರು ಯೋಚಿಸಬೇಕು ಎಂದರು.

ಸಾಮಾಜಿಕ ಜಾಲತಾಣ ಬಳಸಿಕೊಳ್ಳಿ

ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್ ಮಾತನಾಡಿ, ಸಾಮಾಜಿಕ ಜಾಲತಾಣ ಇಂದು ಅತ್ಯಂತ ಶಕ್ತಿಯುತವಾಗುತ್ತಿದ್ದು, ಇದರ ಸದ್ಬಳಕೆ ಹಾಗೂ ಒತ್ತುಕೊಡುವ ಕಾರ್ಯ ಆಗಬೇಕು. ಇದನ್ನು ಸಂಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಕಾರ್ಯ ಆಗಬೇಕು. ಈಗಿರುವ ಪರಿಸ್ಥಿತಿಯಲ್ಲಿ ದೊಡ್ಡ ದೊಡ್ಡ ಕ್ಷೇತ್ರಗಳಲ್ಲಿ ಸಂಚರಿಸುವುದು ಕಷ್ಟವಾಗುತ್ತದೆ. ಇದರಿಂದ ಹೊಸ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರವನ್ನು ಬಳಸಿಕೊಳ್ಳಬೇಕು.

ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಳ್ಳಿ. ಮುಂದಿನ ದಿನಗಳಲ್ಲಿ ನಿಮಗೆ ಕೆಲ ಮಾಹಿತಿಗಳನ್ನು ಕಳಿಸಿಕೊಡುತ್ತೇವೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ. ಅದನ್ನು ನೀವು ಬಳಸಿಕೊಳ್ಳುವ ಜೊತೆ ನಿಮ್ಮ ಹಿಂಬಾಲಕರಿಗೆ ತಲುಪಿಸುವ ಕಾರ್ಯ ಮಾಡಿ. ಕಾಂಗ್ರೆಸ್ ಸಾಧನೆ ಹಾಗೂ ಬಿಜೆಪಿ ದುರಾಡಳಿತ ಎಲ್ಲರನ್ನೂ ತಲುಪುವಂತಾಗಬೇಕು. ಪಕ್ಷದ ಮಾರ್ಗದರ್ಶನಕ್ಕೆ ಕಾಯದೆ ಪೂರ್ಣ ಪ್ರಮಾಣದಲ್ಲಿ ನಿಮ್ಮನ್ನ ತೊಡಗಿಕೊಳ್ಳಿ ಇದರಿಂದ ಪಕ್ಷಕ್ಕೆ ಗೆಲುವು ಲಭಿಸಲು ಸಾಧ್ಯ ಎಂದರು.

ಸುಳ್ಳು ಹೇಳುವುದೇ ಕಾಯಕ

ಬಿಜೆಪಿ ಸುಳ್ಳು ಹೇಳುವುದನ್ನು ಕಾಯಕವಾಗಿಸಿಕೊಂಡಿದೆ. ಇದನ್ನು ಪರಿಣಾಮಕಾರಿಯಾಗಿ ತಡೆಯುವ ಕಾರ್ಯವನ್ನು ನೀವು ಮಾಡಬೇಕು. ನಾವು ವಿಶೇಷವಾಗಿ ರಚಿಸಿರುವ ತಂಡ ಕಾರ್ಯಪ್ರವೃತ್ತವಾಗಿದ್ದು, ಅದು ಎಲ್ಲಾ ಕಾರ್ಯಕರ್ತರಿಗೆ ಸಹಕಾರ ನೀಡಲಿದೆ. ಸಾಮಾಜಿಕ ಜಾಲತಾಣವನ್ನು ಬಳಸಿ ಆದರೆ ಮತದಾರರ ಮನೆ ಮನೆಗೆ ತಲುಪುವ ಕಾರ್ಯವನ್ನು ಜೊತೆಗೆ ಮಾಡಿಕೊಂಡು ಬನ್ನಿ ಇಲ್ಲವಾದರೆ ಅವರೊಂದಿಗಿನ ಸಂಪರ್ಕ ಕಡಿತಗೊಳ್ಳಲಿದೆ. ಬಿಜೆಪಿಯ ಸುಳ್ಳನ್ನು ಜನರಿಗೆ ತಲುಪಿಸಿ. ವಿದೇಶದಿಂದ ಕಪ್ಪು ಹಣ ತಂದು ಭಾರತೀಯರ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಮೋದಿ ಹುಸಿ ಭರವಸೆ ನೀಡಿದ್ದರು. ಅಮಾಯಕ ನಾಗರಿಕರು 5 ವರ್ಷ ಇದಕ್ಕಾಗಿ ಕಾದು ನಿರಾಶರಾಗಿದ್ದಾರೆ. ಈ ವಚನವನ್ನು ಪಾಲಿಸದ ಮೋದಿ ವಚನ ಭ್ರಷ್ಟರಾಗಿದ್ದಾರೆ. ಮಹಾದಾಯಿ ವಿಚಾರದಲ್ಲಿ ಆಡಿದ ಮಾತನ್ನು ಮೋದಿ ಉಳಿಸಿಕೊಂಡಿಲ್ಲ. ಬಿಜೆಪಿ ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸಿದೆ ಎಂಬುದನ್ನು ಪ್ರಶ್ನೆ ಮಾಡಿದರೂ ಸಾಕು ಅವರ ವಚನ ಭ್ರಷ್ಟತೆ ಬಯಲಾಗುತ್ತದೆ ಎಂದರು.

ಸಮಯ ಕಡಿಮೆ ಇದೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಇನ್ನು ಕೆಲವೇ ಸಮಯ ಇದೆ. ಮೊದಲ ಹಂತದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಜನರಿಗೆ ನಮ್ಮ ಮಾಹಿತಿ ತಲುಪಿಸಬೇಕಿದೆ. ಯುವಕರಿಗೆ ಆದಷ್ಟು ಕಾಂಗ್ರೆಸ್ ಸಾಧನೆ ಹಾಗೂ ಇತಿಹಾಸವನ್ನು ವಾಟ್ಸಪ್ ಸಂದೇಶ, ಸಾಮಾಜಿಕ ಜಾಲತಾಣದ ಮೂಲಕ ತಲುಪಬೇಕು. ಬಿಜೆಪಿಯವರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದನ್ನು ತಿಳಿಸುವ, ಜನರಿಗೆ ಇವರ ಮೋಸ ತಿಳಿಸಿ, ಸ್ವಚ್ಛ ಭಾರತ ಆರಂಭಿಸಿದ್ದು ನಾವು. ಜನರಿಗೆ 15 ಲಕ್ಷ ಮನೆ ಕಟ್ಟಿಕೊಟ್ಟಿದ್ದೇವೆ. ಬಿಜೆಪಿ ಇನ್ನೂ ಒಂದು ಮನೆ ಕಟ್ಟಿಲ್ಲ. 15 ಸಾವಿರ ಮನೆ ಕಟ್ಟುತ್ತಿದ್ದಾರೆ. ರೈತರ ಪ್ರತಿನಿಧಿಗಳಂತೆ ವರ್ತಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಯಾವ ನೈತಿಕತೆ ಇದೆ.

ಜನರಿಗೆ ಏನನ್ನೂ ನೀಡದೇ ಮತ್ತೆ ಚುನಾವಣೆಗೆ ಬಂದಿದ್ದಾರೆ. ರಕ್ಷಣೆ ವಿಚಾರದಲ್ಲಿ ಕೂಡ ಕಾಂಗ್ರೆಸ್ ಸಾಧನೆ ದೊಡ್ಡದು. ಇವರ ಅವಧಿಯಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚಾಗಿದೆ. ಸೈನಿಕರ ಸಾವು ದುಪ್ಪಟ್ಟಾಗಿದೆ. ಇದರಿಂದ ರಾಷ್ಟ್ರ, ದೇಶಭಕ್ತಿ ಬಿಜೆಪಿಯವರ ಸ್ವತ್ತಲ್ಲ. ಗಾಂಧಿ ಪರಿವಾರ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದೆ. ಇದರಿಂದ ಮತ್ತೊಮ್ಮೆ ಜಾತ್ಯಾತೀತ ಶಕ್ತಿ ತಲೆ ಎತ್ತಬೇಕು, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.

ರೈತರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಆಗಲಿದೆ. ರಾಹುಲ್ ಈ ನಿಟ್ಟಿನಲ್ಲಿ ಆಗಲಿದೆ. ರಾಹುಲ್ ಗಾಂಧಿ ಸಾಲಮನ್ನಾ ಹಾಗೂ ನಂತರ ಉತ್ತಮ ಕಾರ್ಯಯೋಜನೆ‌ ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿಯ ಅವ್ಯವಹಾರ ಹಾಗೂ ಕಾಂಗ್ರೆಸ್​ನ ಸಾಧನೆಯನ್ನು ಜನರಿಗೆ ತಲುಪಿಸಿ. ಇನ್ನು ಕೇವಲ ಇಪ್ಪತ್ತೈದು ದಿನ ಮಾತ್ರ ಕಾಲಾವಕಾಶ ಇದೆ. ಇರುವ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಜನರನ್ನು ತಲುಪುವ ಕಾರ್ಯ ಮಾಡಿ. ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿಸುವ ಸಂಕಲ್ಪ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು.

ಮುಂದೆ ಇರುವವರಿಗೆ ಯಶಸ್ಸು

ಯಾರು ಪ್ರಚಾರದಲ್ಲಿ ಮುಂದಿರುತ್ತಾರೆ. ಅವರಿಗೆ ಯಶಸ್ಸು ಸಿಗುತ್ತದೆ. ದೇಶದ ಜನರ ಬದುಕು ಕಟ್ಟಿಕೊಟ್ಟಿದ್ದು ಕಾಂಗ್ರೆಸ್. ಬಿಜೆಪಿಯವರು ಬರೀ ಸುಳ್ಳು ಹೇಳುವುದೇ ಕಾಯಕ. ದುರಾಡಳಿತ ನಡೆಸಿರುವುದೇ ಅವರ ಸಾಧನೆಯಾಗಿದೆ. ಜಾತಿ, ವರ್ಗ, ಬೇಧವನ್ನೂ ಮಾಡುತ್ತಿದ್ದಾರೆ. ಕೋಮುವಾದಿ ತನವನ್ನೇ ಅದು ಮುಂದುವರಿಸಿದೆ. ಹೀಗಾಗಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.