ಬೆಂಗಳೂರು : ಸೀರೆ ಮಾರಾಟ ಮಾಡುವ ನೆಪದಲ್ಲಿ ಕಳ್ಳರು ಮನೆಗೆ ಬಂದಿದ್ದಾರೆ. ಬಳಿಕ ಮನೆಯವರ ನಂಬಿಕೆ ಗಳಿಸಿ ತಿಂಡಿಯಲ್ಲಿ ನಿದ್ದೆ ಮಾತ್ರೆ ಬೆರೆಸಿ ತಿನ್ನುವಂತೆ ಮಾಡಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದ ಗ್ಯಾಂಗನ್ನು ದಕ್ಷಿಣ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಜೋಗಮಲ್ಲ ಪುರೋಹಿತ್, ವಿಷ್ಣು ಪೂಜಾ ಬಾಯಿ ತರ್ಪದೆ, ರಾಮಗಿರಿ ಎಂಬ ಆರೋಪಿಗಳು ರಾಜಸ್ತಾನ ಹಾಗು ಗುಜರಾತ್ ಮೂಲದ ಅಂತರ್‌ರಾಜ್ಯ ಕುಖ್ಯಾತ ಕಳ್ಳರಾಗಿದ್ದು ಬೆಂಗಳೂರು ನಗರ ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದರು. ಆರೋಪಿಗಳನ್ನು ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ರವರ ಮಾರ್ಗದರ್ಶನದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಗಳ ತನಿಖೆಯಿಂದಾಗಿ ವಿವಿಧ ಠಾಣೆಗಳಾದ ಮುದ್ದೇನಹಳ್ಳಿ ಪೊಲೀಸ್ ಠಾಣೆಯ 4 ಕಳವು ಪ್ರಕರಣ, ಸುಬ್ರಮಣ್ಯ ಪೊಲೀಸ್ ಠಾಣೆಯ 2 ಕಳವು ಪ್ರಕರಣ, ಬನಶಂಕರಿ ಪೊಲೀಸ್ ಠಾಣೆಯ 1 ಕಳವು ಪ್ರಕರಣ, ಗಿರಿನಗರ ಪೊಲೀಸ್ ಠಾಣೆಯ 1 ಕಳವು ಪ್ರಕರಣ, ಚಂದ್ರಾಲೇಔಟ್ ಪೊಲೀಸ್ ಠಾಣೆಯ 1 ಕಳವು ಪ್ರಕರಣ, ಹನುಮಂತನಗರ 1ಕಳವು ಪ್ರಕರಣ, ಪ್ರಕರಣಗಳು ಸೇರಿದಂತೆ ಒಟ್ಟು10 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಸದ್ಯ ಆರೋಪಿಗಳಿಂದ 32,30,000 ಮೌಲ್ಯದ ಸುಮಾರು 850 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು 1,27,510.ರೂ ಮೌಲ್ಯದ 3 ಕೆಜಿ 110 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳು ಮತ್ತು ಕೃತ್ಯಕ್ಕೆ ಬಳಸಿದ ಒಂದು ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ವಶಪಡಿಸಿ ತನಿಖೆ ಮುಂದುವರೆಸಿದ್ದಾರೆ.