ETV Bharat / state

ಇಂಗ್ಲೀಷ್ ಕೇವಲ ಸಾಮ್ರಾಜ್ಯದ ಭಾಷೆಯಾಗದೇ ಜಗದ್ವಲಯ ಭಾಷೆಯಾಗಿದೆ: ಯುನೆಸ್ಕೋದ ವಿಶ್ರಾಂತ ರಾಯಭಾರಿ ಚಿರಂಜೀವಿ ಸಿಂಗ್​ - Dr vanamala vishwanath

ಯುನೆಸ್ಕೋದ ವಿಶ್ರಾಂತ ರಾಯಭಾರಿ ಚಿರಂಜೀವಿ ಸಿಂಗ್​ ಅವರಿಂದು ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ 'ಭವನ್ ಶಂಕರ್ ಪಾಠಕ್' ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

english-is-not-only-the-language-of-empire-but-also-the-language-of-the-world
ಇಂಗ್ಲೀಷ್ ಕೇವಲ ಸಾಮ್ರಾಜ್ಯದ ಭಾಷೆಯಾಗದೇ ಜಗದ್ವಲಯ ಭಾಷೆಯಾಗಿದೆ: ಯುನೆಸ್ಕೋದ ವಿಶ್ರಾಂತ ರಾಯಭಾರಿ ಚಿರಂಜೀವಿ ಸಿಂಗ್​
author img

By

Published : May 27, 2023, 8:45 PM IST

ಬೆಂಗಳೂರು: ಇಂಗ್ಲಿಷ್​​ ಕೇವಲ ಸಾಮ್ರಾಜ್ಯದ ಭಾಷೆಯಾಗದೇ ಜಗದ್ವಲಯ ಭಾಷೆಯಾಗಿದೆ ಎಂದು ಯುನೆಸ್ಕೋದ ವಿಶ್ರಾಂತ ರಾಯಭಾರಿ ಮತ್ತು ಭಾರತೀಯ ವಿದ್ಯಾಭವನದ ಉಪಾಧ್ಯಕ್ಷ ಚಿರಂಜೀವಿ ಸಿಂಗ್​​ ಹೇಳಿದರು.

ಭಾರತೀಯ ವಿದ್ಯಾಭವನದಲ್ಲಿ ಇಂದು ಏರ್ಪಡಿಸಿದ್ದ 'ಭವನ್ ಶಂಕರ್ ಪಾಠಕ್' ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಲವು ಪ್ರಶಸ್ತಿ, ಬಹುಮಾನಗಳಿವೆ. ಆದರೆ, ಭವನ್ ಜಾಕೀಯ ಶಂಕರ್ ಪಾಠಕ್ ಪ್ರಶಸ್ತಿ ಸಾಹಿತ್ಯ ಕ್ಷೇತ್ರದ ಘನ ಕಾರ್ಯವನ್ನು ಮಾತ್ರ ಗುರುತಿಸಿದೆ. ಸಾಮಾಜಿಕ ಸಾಮರ್ಥ್ಯದ ಸಂಕೇತವಾಗಿಯೂ ಮುಖ್ಯವಾಗಿ ಗುರುತಿಸಲ್ಪಟ್ಟಿದೆ ಎಂದರು. ಜಾಕಿಯ ಅವರು ದೆಹಲಿಯ ಪ್ರಸಿದ್ಧ ಮಿರಾಂಡಾ ಸೆಂಟರ ಸಮಾಜೋ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಿದವರಲ್ಲಿ ಮುಖ್ಯರಾದವರು. ಅವರ ಹೆಸರಿನಲ್ಲಿ ಈ ದತ್ತಿ ನಿಧಿಯನ್ನು ಸ್ಥಾಪಿಸಿರುವ ಅವರ ಕುಟುಂಬ ಭಾರತೀಯ ವಿದ್ಯಾಭವನದಲ್ಲಿ ಶ್ಲಾಘನೀಯ ಕೆಲಸ ಮಾಡಿದೆ ಎಂದು ಪ್ರಶಂಶಿಸಿದರು.

ಇಂಗ್ಲಿಷ್​​ ಹಿಂದೆ ಒಂದು ದೇಶದ ಒಂದೇ ಭಾಷೆಯಾಗಿತ್ತು. ಈಗ ಹಲವು ದೇಶಗಳ ಭಾಷೆಗಳು ತಮ್ಮ ಅಸ್ಮಿತೆಯ ಮೂಲಕ ಇಂಗ್ಲಿಷ್ ಭಾಷೆಯನ್ನು ಸಂಪರ್ಕವಾಗಿಸಿವೆ, ಭಾರತದಲ್ಲಿ ರಾಜಾರಾವ್, ಮುಲ್ಕ ರಾಜ್ ಆನಂದ್, ಶಶಿ ದೇಶಪಾಂಡೆ, ಆರ್.ಕೆ. ನಾರಾಯಣ್, ಸಲ್ಮಾನ್ ರಶ್ದಿ ಮುಂತಾದವರು ಭಾರತೀಯ ಇಂಗ್ಲಿಷ್ ಮೂಲಕ ಜಾಗತಿಕವಾಗಿ ಗಮನಿಸಲ್ಲಟ್ಟಿದ್ದಾರೆ.

ಹೊಸಗನ್ನಡದ ಆದ್ಯ ಲೇಖಕರಾದ ಬಿ.ಎಂ.ಶ್ರೀ ಅವರು ಪಾಶ್ಚಿಮಾತ್ಯ ಸಾಹಿತ್ಯವನ್ನು ಕನ್ನಡದ್ದೇ ಸಂವೇದನೆಗಳ ಮೂಲಕ ಕಟ್ಟಿಕೊಟ್ಟರು. ರವೀಂದ್ರನಾಥ್ ಠಾಗೋರ್ ಅವರು ಪೌರಾತ್ಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳನ್ನು ಹದವಾಗಿ ಬೆರೆಸಿದ ಉದಾಹರಣೆಯಾಗಿದ್ದಾರೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ವನಮಾಲ ವಿಶ್ವನಾಥ್, 80-90ರ ದಶಕದಲ್ಲಿ ಇಂಗ್ಲಿಷ್ ಭಾಷೆಯ ಬಗೆಗೆ ಕುತೂಹಲ ಆಸಕ್ತಿಗಳಿದ್ದವು. ಈಗ ಕನ್ನಡದ ಬಗೆಗೆ ಅಂತದೇ ಭಾವನೆ ಉಂಟಾಗಿದೆ. ನಮ್ಮ ಒಂದು ಕಾಲು ಕನ್ನಡ ಎನ್ನುವುದಾದರೆ ಮತ್ತೊಂದು ಕಾಲು ಇಂಗ್ಲಿಷ್ ಆಗಬೇಕು, ಈ ಎರಡೂ ಕಾಲುಗಳ ಮೇಲೆ ನಿಂತರೆ ಯಶಸ್ಸು ಸಾಧ್ಯ. ನಾವು ಶೈಕ್ಷಣಿಕ ರಾಜಕೀಯ ಪ್ರಜ್ಞೆಯ ವಿಕೇಂದ್ರೀಕರಣದ ಭಾಗವಾಗಿ ವಿದ್ಯಾರ್ಥಿಗಳಿಗೆ ಇಂಡಿಯನ್ ಇಂಗ್ಲಿಷ್ ಕೃತಿಗಳನ್ನು ಪಠ್ಯವಾಗಿಸುವಾಗ ಜಾಕಿಯಾ ಅವರ ವೈಚಾರಿಕ ನಿಲುವಿನ ಲೇಖನಗಳು ನೆರವಾದವು. ಈ ಪ್ರಶಸ್ತಿ ದೊರೆತಿರುವುದು ಮುಂದಿನ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು.

ಡಾ‌. ವನಮಾನಾ ವಿಶ್ವನಾಥ್​​ ಅವರಿಗೆ ಭವನ ಶಂಕರ್‌ ಪಾಠಕ್ ಸಾಹಿತ್ಯ ಪ್ರಶಸ್ತಿ, ಹಗರಿಬೊಮ್ಮನಹಳ್ಳಿಯ ಬನ್ನಿಗೋಳ ಶಾಲೆಯ ಇಂಗ್ಲಿಷ್ ಶಿಕ್ಷಕಿ ಎಚ್.ಎಮ್. ವನಿತಾ ಅವರಿಗೆ ಭವನ್ ಜಾಕಿಯ ಪಾಠಕ್ ಶೈಕ್ಷಣಿಕ ಪ್ರಶಸ್ತಿ, ಬಿಬಿಎಂಪಿ ಶಾಲೆಯ ವಿದ್ಯಾರ್ಥಿನಿ ಪ್ರಿನ್ಸಿ ಬಿಲ್ಲಾ ಅವರಿಗೆ ಭವನ್ ಜಾಕಿಯ ವಿದ್ಯಾರ್ಥಿ ಪುರಸ್ಕಾರವನ್ನು ಈ ಸಂದರ್ಭದಲ್ಲಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಗಳು‌ ಕ್ರಮವಾಗಿ ಹತ್ತು ಐದು‌ ಮತ್ತು ಮೂರು‌ ಸಾವಿರ ರೂಪಾಯಿ‌ ನಗದು‌ ಸ್ಮರಣಿಕೆಗಳನ್ನು‌ ಒಳಗೊಂಡಿದೆ.

ಭವನ್ ಬಿಬಿಎಂಪಿ ಶಾಲೆಯ ಪ್ರಾಂಶುಪಾಲೆ ವಿನುತಾ ಶಾಸ್ತ್ರಿ, ಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ. ರಾವ್, ಕೇಂದ್ರ ಕಮಿಟಿ ಸದಸ್ಯ ಅಭಿನವದ ರವಿಕುಮಾರ್, ಮಕ್ಕಳ ಸಾಹಿತಿ ಪರಮೇಶ್ವರ ಸೊಪ್ಪಿಮಠ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಕುಲ ಸಚಿವರಾಗಿ ನೇಮಕಗೊಂಡಿರುವ ಸುರೇಶ್​ ನಾಯ್ಡು ಅವರನ್ನು ಆತ್ಮೀಯವಾಗಿ ಭವನದ ನಿರ್ದೇಶಕರು ಗೌರವಿಸಿದರು.

ಇದನ್ನೂ ಓದಿ: ನೂತನ ಸಂಸತ್ ಭವನದ ಉದ್ಘಾಟನೆ ಪೂಜೆ ಮಾಡಲಿರುವ ಶೃಂಗೇರಿ ಪುರೋಹಿತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.