ಬೆಂಗಳೂರು : ಕೆಲಸದಿಂದ ವಜಾ ಮಾಡಿದಕ್ಕೆ ಅಸಮಾಧಾನಗೊಂಡು ಸಿಬ್ಬಂದಿ ಅದೇ ರೆಸ್ಟೋರೆಂಟ್ನಲ್ಲಿ ಕಳ್ಳತನ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ನಾಗಲ್ಯಾಂಡ್ ಮೂಲದ ಆಟೋನಾಲ ಎಂಬಾತ ಜರಗನಹಳ್ಳಿಯಲ್ಲಿರುವ ಕೆಫೆರೋಶ್ ರೆಸ್ಟೋರೆಂಟ್ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ.
ಮದ್ಯ ಸೇವಿಸುತ್ತಿದ್ದ ಈತ ರೆಸ್ಟೋರೆಂಟ್ಗೆ ಬರುವ ಗ್ರಾಹಕರ ಜೊತೆ ಅನುಚಿತ ವರ್ತನೆ ತೋರುತ್ತಿದ್ದ. ಈತನ ದುರ್ವತನೆ ಕಂಡು ಕೆಲಸದಿಂದ ತೆಗೆದುಹಾಕಲಾಗಿತ್ತು. ಕಳೆದ ಆಗಸ್ಟ್ 27ರಂದು ಕೆಲಸದಿಂದ ತೆಗೆದು ಬಾಕಿ ವೇತನ ಕೊಟ್ಟು ಕಳುಹಿಸಲಾಗಿತ್ತು.
ಆದರೆ, ಇದರಿಂದ ಕೋಪಗೊಂಡಿದ್ದ ಆಟೋನಾಲ ಎರಡು ದಿನಗಳ ನಂತರ ಕಳೆದ ಆಗಸ್ಟ್ 30ರ ರಾತ್ರಿ ಕೆಫೆರೋಶ್ಗೆ ಎಂಟ್ರಿಕೊಟ್ಟಿದ್ದ. ಕೆಫೆಯ ಹಿಂಬದಿ ಪ್ಯಾಸೇಜ್ನಿಂದ ಒಳ ನುಗ್ಗಿದ್ದಾನೆ.
ಕೈಯಲ್ಲಿ ಚಾಕು ಹಿಡಿದು ಬಂದು ಕ್ಯಾಶ್ ಬಾಕ್ಸ್ನಲ್ಲಿದ್ದ 50 ಸಾವಿರ ನಗದು ಎಗರಿಸಿದ್ದಾನೆ. ಆರೋಪಿಯ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ರೆಸ್ಟೋರೆಂಟ್ ಮಾಲೀಕರು ಪುಟ್ಟೆನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.