ETV Bharat / state

ಅಲ್ಲೂ ಇಲ್ಲ, ದಿಲ್ಲಿಯಲ್ಲೂ ಅಲ್ಲ... ಇಲ್ಲಿದ್ರಂತೆ ಬೆಳಗಾವಿಯ ಸಾಹುಕಾರ್​​! - undefined

ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬಳಿಕ ಅಲ್ಲಿದ್ದಾರೆ, ಇಲ್ಲಿದ್ದಾರೆ ಎಂದೇ ಚರ್ಚಿಸಲಾಗುತ್ತಿತ್ತು. ಆದ್ರೆ ಇಂದು ಅಂತಿಮವಾಗಿ ನಗರದ ಆನಂದರಾವ್ ವೃತ್ತದ ರಾಜಮಹಲ್ ಹೋಟೆಲ್​ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ರಾಜಮಹಲ್ ಹೋಟೆಲ್
author img

By

Published : Jul 2, 2019, 7:55 PM IST

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮುಂಬೈನಲ್ಲಿದ್ದಾರೆ, ದಿಲ್ಲಿಯಲ್ಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಅಂತಿಮವಾಗಿ ಇಂದು ನಗರದ ಆನಂದರಾವ್ ವೃತ್ತದ ರಾಜಮಹಲ್ ಹೋಟೆಲ್​​ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ ಇದ್ದದ್ದು ಇದೇ ಹೋಟೆಲ್​ನಲ್ಲಂತೆ

ಪಕ್ಷದ ನಾಯಕರ, ಗುಪ್ತಚರ ಇಲಾಖೆಯ ಕಣ್ಣು ತಪ್ಪಿಸಿ ಬೆಳಗಾವಿಯ ಸಾಹುಕಾರ ತಮ್ಮ ಆಪ್ತರ ಜತೆ ಚರ್ಚಿಸುವ ಉದ್ದೇಶದಿಂದ ರಾಜಮಹಲ್ ಎಂಬ ಸಣ್ಣದೊಂದು ಹೋಟೆಲ್​​ನಲ್ಲಿ ತಂಗಿದ್ದರು. ಆದರೆ ಅದೂ ಪತ್ತೆಯಾದ ಹಿನ್ನೆಲೆ ನಿನ್ನೆ ರಾತ್ರಿಯಿಂದ ತಂಗಿದ್ದ ರಾಜಮಹಲ್ ಹೋಟೆಲ್​ನ 811ನೇ ಸಂಖ್ಯೆಯ ಕೊಠಡಿಯನ್ನು ಬೆಳಗ್ಗೆ 10ಕ್ಕೆ ಖಾಲಿ ಮಾಡಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ. ಆದರೆ ಕೂಗಳತೆಯಷ್ಟು ದೂರದಲ್ಲಿದ್ದ ಖಾಸಗಿ ಪಂಚತಾರಾ ಹೋಟೆಲ್, ಅನತಿ ದೂರದಲ್ಲಿದ್ದ ತಮ್ಮ ಸರ್ಕಾರಿ ನಿವಾಸ ಬಿಟ್ಟು ಇಲ್ಲಿ ಇಷ್ಟೊಂದು ಚಿಕ್ಕ ಜಾಗದಲ್ಲಿ ಹೇಗೆ ತಂಗಿದ್ದರು ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.

Intro:news

Body:ಎಲ್ಲೂ ಹೋಗಿಲ್ಲ, ರಮೇಶ್ ಇಲ್ಲೇ ಇದ್ರಲ್ಲಾ!

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮುಂಬೈನಲ್ಲಿದ್ದಾರೆ, ದಿಲ್ಲಿಯಲ್ಲಿ ಇದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಅಂತಿಮವಾಗಿ ಇಂದು ನಗರದ ಆನಂದರಾವ್ ವೃತ್ತದ ರಾಜಮಹಲ್ ಹೋಟೆಲ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.
ಪಕ್ಷದ ನಾಯಕರ, ಗುಪ್ತಚರ ಇಲಾಖೆಯ ಕಣ್ಣು ತಪ್ಪಿಸಿ ಸಣ್ಣ ಹೋಟೆಲ್ ನಲ್ಲಿ ಬೆಳಗಾವಿಯ ಸಾಹುಕಾರ ತಮ್ಮ ಆಪ್ತರ ಜತೆ ಚರ್ಚಿಸುವ ಉದ್ದೇಶದಿಂದ ಗಲೀಜಾದ ವಾತಾವರಣದಿಂದ ಕೂಡಿದ್ದ, ಟ್ರಾವೆಲ್ಸ್ ಗಳು, ಖಾಸಗಿ ಬಸ್ ಗಳಿಂದಲೇ ತುಂಬಿರುವ ವಾತಾವರಣದಲ್ಲಿರುವ ರಾಜಮಹಲ್ ಹೋಟೆಲ್ ನಲ್ಲಿ ತಂಗಿದ್ದರು. ಆದರೆ ಅದೂ ಪತ್ತೆಯಾದ ಹಿನ್ನೆಲೆ ನಿನ್ನೆ ರಾತ್ರಿಯಿಂದ ತಂಗಿದ್ದ ರಾಜಮಹಲ್ ಹೋಟೆಲ್ ನ 811 ನೇ ಸಂಖ್ಯೆಯ ಕೊಠಡಿಯನ್ನು ಬೆಳಗ್ಗೆ 10 ಕ್ಕೆ ಖಾಲಿ ಮಾಡಿ ತೆರಳಿದ್ದಾರೆ. ಸದ್ಯ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ. ಆದರೆ ಕೂಗಳತೆಯಷ್ಟು ದೂರದಲ್ಲಿದ್ದ ಖಾಸಗಿ ಪಂಚತಾರಾ ಹೋಟೆಲ್, ಅನತಿ ದೂರದಲ್ಲಿದ್ದ ತಮ್ಮ ಸರ್ಕಾರಿ ನಿವಾಸ ಬಿಟ್ಟು ಇಲ್ಲಿ ಇಷ್ಟೊಂದು ಗಲೀಜಿನಲ್ಲಿ ಹೇಗೆ ತಂಗಿದ್ದರು ಅನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.

Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.