ಬೆಂಗಳೂರು: ನಗರದ ಹಲವು ಏರಿಯಾಗಳಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ನಾಳೆಯಿಂದ ಡಿಸೆಂಬರ್ 27ರವರೆಗೆ ಪವರ್ ಕಟ್ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಸ್ಕಾಂ ಹಲವು ದುರಸ್ತಿ ಕಾರ್ಯಗಳನ್ನು ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಟಾಟಾ ಐಬಿಎಂ, ಎಸ್ಜೆಆರ್ ಪಾರ್ಕ್, ಸುಮಧುರಾ ಅಪಾರ್ಟ್ಮೆಂಟ್ ಸಮುಚ್ಚಯ, ನಲ್ಲೂರಹಳ್ಳಿ, ಯುಟಿಎಲ್ ಕಂಪನಿ, ವಿಕೆ ಟೆಕ್ ಪಾರ್ಕ್, ಗಾಯತ್ರಿ ಟೆಕ್ ಪಾರ್ಕ್, ಮೈಕ್ರೋ ಚಿಪ್, ವೈದೇಹಿ ಆಸ್ಪತ್ರೆ, ಸತ್ಯ ಸಾಯಿ ಬಾಬಾ ಆಸ್ಪತ್ರೆ, ಚನ್ನಮ್ಮ ಬಡಾವಣೆ, ಗ್ರಾಫೈಟ್ ಇಂಡಿಯಾ ಸಿಗ್ನಲ್, ಆಕಾಶ್ ಟೆಕ್‌ಪಾರ್ಕ್ ಏರಿಯಾ ಗಳ ಸುತ್ತ ಮುತ್ತ ವಿದ್ಯುತ್ ಕೈ ಕೊಡಲಿದೆ.
ಜನತಾ ಕಾಲೋನಿ, ಕೋಡಿಪಾಳ್ಯ, ಅನ್ನ ಪೂರ್ಣೇಶ್ವರಿ ಬಡಾವಣೆ, ವಿದ್ಯಾಪೀಠ ರಸ್ತೆ, ಡಿ.ಬಿ. ಕಲ್ಲು, ಬಿ.ಜಿ.ಎಸ್. ಆಸ್ಪತ್ರೆ ರಸ್ತೆ, ಸಿದ್ಧಗಂಗಾ ಬಡಾವಣೆ, ಮಾರಣ್ಣ ಬಡಾವಣೆ, ಉಲ್ಲಾಳ ನಗರ, ಮಾರುತಿನಗರ, ಕುವೆಂಪು ಮುಖ್ಯ ರಸ್ತೆ, ಜಿ.ಕೆ. ಗಲ್ಲಿ, ಬಿಇಎಲ್ 1ನೇ ಮತ್ತು 2ನೇ ಹಂತ ಸುತ್ತಮುತ್ತ ಪ್ರದೇಶಗಳು ಸುತ್ತಮುತ್ತಲ ಪ್ರದೇಶಗಳಲ್ಲಿ ಎರಡು ದಿನಗಳ ಕಾಲ ಪವರ್ ಕಟ್ ಆಗಲಿದೆ.
ಇದನ್ನೂ ಓದಿ: ನೈಟ್ ಕರ್ಫ್ಯೂ, ಒಮಿಕ್ರಾನ್ ತಡೆಯುವ ಕುರಿತು ನಾಳೆ ತಜ್ಞರ ಜತೆ ಸಭೆ : ಬಸವರಾಜ ಬೊಮ್ಮಾಯಿ