ETV Bharat / state

ಬೆಂಗಳೂರು ಸಂಚಾರ ದಟ್ಟಣೆ ಶೇ 32ರಷ್ಟು ಇಳಿಮುಖ: ಎಲೆಕ್ಟ್ರಿಕ್ ವಾಹನ ಖರೀದಿ ಹೆಚ್ಚಳ - ಬೆಂಗಳೂರು ಸಂಚಾರ ದಟ್ಟಣೆ 32% ಇಳಿಮುಖ

ಭೌಗೋಳಿಕ ಪ್ರದೇಶ ತಂತ್ರಜ್ಞಾನ ತಜ್ಞ ಸಂಸ್ಥೆ 'ಟಾಮ್ ಟಾಮ್' ತನ್ನ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು ಅದರಲ್ಲಿ ಬೆಂಗಳೂರಿನಲ್ಲಿ ಹಿಂದೆಂದಿಗಿಂತಲೂ ವಾಹನ ದಟ್ಟಣೆ ಇಳಿಮುಖವಾಗಿದೆ ಎಂದು ತಿಳಿಸಿದೆ.

ಬೆಂಗಳೂರು ಸಂಚಾರ ದಟ್ಟಣೆ
ಬೆಂಗಳೂರು ಸಂಚಾರ ದಟ್ಟಣೆ
author img

By

Published : Feb 10, 2022, 8:54 AM IST

ಬೆಂಗಳೂರು: ಉಸಿರುಗಟ್ಟಿಸುವ ಸಂಚಾರ ದಟ್ಟಣೆಯಿಂದ ಸಾರ್ವಜನಿಕರನ್ನು ಸುಸ್ತು ಹೊಡೆಸುತ್ತಿದ್ದ ಬೆಂಗಳೂರಿನಲ್ಲಿ 2021ರ ಸಾಲಿನಲ್ಲಿ ಶೇ.32ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿದೆ.

ಈ ಕುರಿತು ಭೌಗೋಳಿಕ ಪ್ರದೇಶ ತಂತ್ರಜ್ಞಾನ ತಜ್ಞ ಸಂಸ್ಥೆ 'ಟಾಮ್ ಟಾಮ್' ತನ್ನ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು, ನಗರದಲ್ಲಿ ಹಿಂದೆಂದಿಗಿಂತಲೂ ವಾಹನ ದಟ್ಟಣೆ ಇಳಿಮುಖವಾಗಿದೆ ಎಂದು ತಿಳಿಸಿದೆ.

ಟಾಮ್ ಟಾಮ್ ಸಂಸ್ಥೆಯು ವಿಶ್ವದ ಪ್ರಮುಖ 404 ಮಹಾನಗರಗಳಲ್ಲಿನ ಭೌಗೋಳಿಕ ಅನ್ವೇಷಣೆ ನಡೆಸಿ, ಅಲ್ಲಿನ ಸಂಚಾರ ದಟ್ಟಣೆ ಬಗ್ಗೆ ಪ್ರತಿ ವರ್ಷ ವರದಿ ಬಿಡುಗಡೆ ಮಾಡುತ್ತದೆ. 11ನೇ ಆವೃತ್ತಿಯಾಗಿ ಬಿಡುಗಡೆ ಮಾಡಿರುವ 2021ರ ಈ ವರದಿಯ ಪ್ರಕಾರ, ಬೆಂಗಳೂರು ವಾಹನ ಸಂಚಾರ ದಟ್ಟಣೆಯು ಶೇ.31ರಷ್ಟು ಕಡಿಮೆಯಾಗಿದೆ. 2019ರಲ್ಲಿ 6ನೇ ಸ್ಥಾನದಲ್ಲಿದ್ದ ಬೆಂಗಳೂರು 2021ರಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ. ಮುಂಬೈ 5ನೇ ಸ್ಥಾನ ಪಡೆದುಕೊಂಡಿದ್ದರೆ, ನವದೆಹಲಿ 11 ಹಾಗೂ ಪುಣೆ 21ನೇ ಸ್ಥಾನಕ್ಕೆ ತಲುಪಿದೆ.

ಇದನ್ನೂ ಓದಿ: ಯುಪಿ ವಿಧಾನಸಭೆ: ಮೊದಲ ಹಂತದ ಚುನಾವಣೆಗೆ ಮತದಾನ ಆರಂಭ​​; ಯೋಗಿ ಸಂಪುಟದ 9 ಸಚಿವರ ಭವಿಷ್ಯ ನಿರ್ಧಾರ

ಕೋವಿಡ್ ಸಾಂಕ್ರಾಮಿಕದಿಂದ ಬಹುತೇಕ ಖಾಸಗಿ ಕಂಪನಿಗಳು, ಶಾಲಾ ಕಾಲೇಜುಗಳು ವರ್ಕ್ ಫ್ರಮ್ ಹೋಮ್ ಹಾಗೂ ಆನ್‌ಲೈನ್ ಕ್ಲಾಸ್ ಮೊರೆ ಹೋದ ಕಾರಣ ರಸ್ತೆಯಲ್ಲಿ ವಾಹನ ಸಂಚಾರ ತೀರಾ ಇಳಿಮುಖವಾಗಿದೆ. ಆದರೆ, ಅಕ್ಟೋಬರ್ 9 ರಂದು ಬೆಂಗಳೂರಿನಲ್ಲಿ ಹೆಚ್ಚು ಮಳೆಯಾದ ಕಾರಣದಿಂದ ಈ ಸಂದರ್ಭದಲ್ಲಿ ಸಂಚಾರ ದಟ್ಟಣೆ ಹೆಚ್ಚಿನ ಮಟ್ಟದಲ್ಲಿ ವರದಿಯಾಗಿದೆ.

ಖಾಸಗಿ ವಾಹನಗಳ ಹೆಚ್ಚಳ: ಮತ್ತೊಂದು ಆಘಾತಕಾರಿ ವಿಷಯವೆಂದರೆ ಸಂಚಾರ ದಟ್ಟಣೆ ಕಡಿಮೆಯಾದರೂ ರಸ್ತೆಗಿಳಿಯುತ್ತಿರುವ ಖಾಸಗಿ ವಾಹನಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಹಾಗೂ ಲಾಕ್‌ಡೌನ್ ಪರಿಣಾಮದಿಂದ ಬಹುತೇಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಆದರೆ ಸಮಾಧಾನಕರ ಸಂಗತಿ ಎಂದರೆ ಬಹುತೇಕರು ಎಲೆಕ್ಟ್ರಿಕ್ ವಾಹನ ಖರೀದಿಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಆರ್‌ಟಿಒ ಮಾಹಿತಿ: ಆರ್‌ಟಿಒ ಮಾಹಿತಿ ಪ್ರಕಾರ, 2018ರಲ್ಲಿ ಕೇವಲ 3,806 ವಿದ್ಯುತ್ ವಾಹನ ನೋಂದಣಿಯಾಗಿತ್ತು. 2021ರ ನವೆಂಬರ್ ವೇಳೆಗೆ ಈ ಪ್ರಮಾಣ 22,264ಕ್ಕೆ ಏರಿಕೆಯಾಗಿದೆ. ಅದರಲ್ಲೂ 19, 615 ದ್ವಿಚಕ್ರ ವಾಹನ ನೋಂದಣಿಯಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ 163 ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.