ETV Bharat / state

ಶಿಕ್ಷಕ, ಪದವೀಧರರ ಕ್ಷೇತ್ರಕ್ಕೆ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ? - ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ

ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಚಿದಾನಂದಗೌಡ ಹೆಸರಿಗೆ ಸ್ಥಳೀಯ ಕೆಲ ನಾಯಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಆದರೂ ಚಿದಾನಂದಗೌಡ ಅಭ್ಯರ್ಥಿ ಎಂದು ಹೇಳಿಕೊಂಡು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಹಾಗಾಗಿ ಅವರಿಗೇ ಟಿಕೆಟ್ ಫೈನಲ್ ಎನ್ನಲಾಗಿದೆ..

List of BJP candidates
ಬಿಜೆಪಿ ಅಭ್ಯರ್ಥಿಗಳ ಪಟ್ಟಿ
author img

By

Published : Sep 29, 2020, 8:16 PM IST

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಆತಂಕದ ನಡುವೆಯೇ ಶಿಕ್ಷಕ ಹಾಗೂ ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ನಾಲ್ಕು ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಬಹುತೇಕ ಸಿದ್ದಗೊಂಡಿದ್ದು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ.

ಧಾರವಾಡ, ಹಾವೇರಿ,ಗದಗ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಒಳಗೊಂಡ ಪಶ್ಚಿಮ ಪದವೀಧರರ ಕ್ಷೇತ್ರ, ಚಿತ್ರದುರ್ಗ,ದಾವಣಗೆರೆ,ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಆಗ್ನೇಯ ಪದವೀಧರರ ಕ್ಷೇತ್ರ, ಬೀದರ್, ಗುಲ್ಬರ್ಗಾ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯ ಈಶಾನ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರು ನಗರ, ಬೆಂಗಳೂರು ಗ್ರಾ. ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಅಕ್ಟೋಬರ್‌ 28ಕ್ಕೆ ನಾಲ್ಕೂ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನವೆಂಬರ್ 2 ರಂದು ಮತ ಎಣಿಕೆ ಇದೆ.

ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಸುಶೀಲ್ ನಮೋಶಿ ಮತ್ತು ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಎಸ್ ವಿ ಸಂಕನೂರ್ ಹೆಸರನ್ನು ಅಂತಿಮಗೊಳಿಸಿ ಎರಡೂ ಕ್ಷೇತ್ರದಿಂದ ಒಂದೊಂದೇ ಹೆಸರನ್ನು ಪಕ್ಷದ ಕೇಂದ್ರ ಚುನಾವಣಾ ಮಂಡಳಿಗೆ ಕಳಿಸಿಕೊಡಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಪುಟ್ಟಣ್ಣಗೆ ಟಿಕೆಟ್ ಪಕ್ಕಾ. ಆದರೆ, ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮಾತ್ರ ಬಿಜೆಪಿಯಲ್ಲಿ ಗೊಂದಲವಿದೆ. ಶಿರಾದ ಚಿದಾನಂದಗೌಡಗೆ ಬಿಜೆಪಿ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಆದರೆ, ಹಾಲನೂರು ಲೇಪಾಕ್ಷಿ ಬಣ ವಿರೋಧ ವ್ಯಕ್ತಪಡಿಸಿದೆ.

ಟಿಕೆಟ್​ಗೆ ಕಾರಣ : ಕಲಬುರಗಿ ವಿಧಾನಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಶೀಲ್ ನಮೋಶಿಗೆ ಪರಿಷತ್ ಟಿಕೆಟ್‌ ಕೊಡುವ ಭರವಸೆ ನೀಡಿ ಅಂದು ಸಮಾಧಾನ ಪಡಿಸಲಾಗಿತ್ತು. ಅದರಂತೆ ಟಿಕೆಟ್ ನೀಡಲಾಗುತ್ತಿದೆ. ಸಂಕನೂರು ಮರು ಆಯ್ಕೆ ಬಯಸಿದ್ದು, ಅದಕ್ಕೆ ರಾಜ್ಯ ನಾಯಕರು ಸಮ್ಮತಿಸಿದ್ದಾರೆ. ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಪುಟ್ಟಣ್ಣಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ. ಅದರಂತೆ ರಾಜ್ಯ ಘಟಕ ಹೆಸರು ಅಂತಿಮಗೊಳಿಸಿದೆ. ಈ ಕ್ಷೇತ್ರದಿಂದ ಪುಟ್ಟಣ್ಣ ಹೆಸರನ್ನು ಮಾತ್ರವೇ ಹೈಕಮಾಂಡ್​ಗೆ ಕಳಿಸಿ ಕೊಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಚಿದಾನಂದಗೌಡ ಹೆಸರಿಗೆ ಸ್ಥಳೀಯ ಕೆಲ ನಾಯಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಆದರೂ ಚಿದಾನಂದಗೌಡ ಅಭ್ಯರ್ಥಿ ಎಂದು ಹೇಳಿಕೊಂಡು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಹಾಗಾಗಿ ಅವರಿಗೇ ಟಿಕೆಟ್ ಫೈನಲ್ ಎನ್ನಲಾಗಿದೆ.

ಪಟ್ಟಿ ದೆಹಲಿಗೆ : ಈಗಾಗಲೇ ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರರ ಕ್ಷೇತ್ರದಿಂದ ಒಂದೊಂದೇ ಹೆಸರನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳಿಸಿರುವ ಬಿಜೆಪಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಲೂ ಒಂದೇ ಹೆಸರು ಕಳಿಸಲಿದೆ. ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಸ್ವಲ್ಪ ಗೊಂದಲವಿದ್ದರೂ ಒಂದೇ ಹೆಸರು ಕಳಿಸುವ ಚಿಂತನೆ ರಾಜ್ಯ ನಾಯಕರದ್ದಾಗಿದೆ. ಬಹುತೇಕ ಚಿದಾನಂದ ಗೌಡರ ಹೆಸರೇ ಫೈನಲ್ ಎನ್ನಲಾಗಿದೆ. ಆದಷ್ಟು ಶೀಘ್ರ ಬಾಕಿ ಇರುವ ಎರಡೂ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಘಟಕ ವರಿಷ್ಠರಿಗೆ ಕಳಿಸಿಕೊಡಲಿದೆ.

ಮತದಾರರ ಸಂಖ್ಯೆ :

ಪಶ್ಚಿಮ ಪದವೀಧರರ ಕ್ಷೇತ್ರ : 68,049

ಆಗ್ನೇಯ ಪದವೀಧರರ ಕ್ಷೇತ್ರ : 1,02,287

ಈಶಾನ್ಯ ಶಿಕ್ಷಕರ ಕ್ಷೇತ್ರ : 24,941

ಬೆಂಗಳೂರು ನಗರ ಶಿಕ್ಷಕರ ಕ್ಷೇತ್ರ : 17,610

ಆಗ್ನೇಯ ಪದವೀಧರರ ಕ್ಷೇತ್ರ ಹೊರತುಪಡಿಸಿ ಇತರ ಮೂರು ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಕಳೆದ ಚುನಾವಣೆಗಿಂತ ಕಡಿಮೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.