ETV Bharat / state

ಗೊಂದಲಕ್ಕೆ ತೆರೆ ಎಳೆದ ದೇವೇಗೌಡರು: ಜೆಡಿಎಸ್​ ನೂತನ ಸಾರಥಿ ಹೆಸರು ಘೋಷಣೆ

ಕೊನೆಗೂ ಜೆಡಿಎಸ್​ ಪಕ್ಷದ ರಾಜ್ಯಾಧ್ಯಕ್ಷ ಯಾರೂ ಆಗುತ್ತಾರೆ ಅನ್ನೋದಕ್ಕೆ ತೆರೆ ಬಿದ್ದಿದೆ. ಹೆಸರಿನ ಅಧಿಕೃತ ಘೋಷಣೆಯೊಂದೇ ಬಾಕಿ ಇದ್ದು, ಜೆಡಿಎಸ್​ ವರಿಷ್ಠ ಹೆಚ್.ಡಿ. ದೇವೇಗೌಡರು ಈ ಬಗ್ಗೆ ಇಂದು ನಡೆಸುತ್ತಿರುವ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ.

ಜೆಡಿಎಸ್​ ರಾಜ್ಯಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಇಂದು ಹೆಸರು ಘೋಷಣೆ
author img

By

Published : Jul 4, 2019, 1:13 PM IST

Updated : Jul 4, 2019, 1:21 PM IST

ಬೆಂಗಳೂರು: ಜೆಡಿಎಸ್​ ರಾಜ್ಯಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಇಂದು ಹೆಸರನ್ನು ಘೋಷಣೆ ಮಾಡುವ ಹಿನ್ನೆಲೆಯಲ್ಲಿ ಜೆಡಿಎಸ್​ ವರಿಷ್ಠ ಹೆಚ್.ಡಿ. ದೇವೇಗೌಡರು ಪಕ್ಷದ ಕಚೇರಿಯತ್ತ ಆಗಮಿಸಿದ್ದಾರೆ.

ನೂತನ ಜೆಡಿಎಸ್​ ರಾಜ್ಯಾಧ್ಯಕ್ಷರಾಗಿ ನೇಮಕಗೊಳ್ಳಲಿರುವ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್. ವಿಶ್ವನಾಥ್ ಸಹ ಕಚೇರಿಗೆ ಆಗಮಿಸಿದ್ದಾರೆ. ದೇವೇಗೌಡರು ಬಂದ ತಕ್ಷಣ ವಿಶ್ವನಾಥ್ ಅವರು ಹಸ್ತಲಾಘವ ಮಾಡಿದರು. ನಂತರ ಮೂವರು ಕಚೇರಿ ಒಳಗೆ ತೆರಳಿದರು.

ಜೆಡಿಎಸ್​ ರಾಜ್ಯಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಇಂದು ಹೆಸರು ಘೋಷಣೆ

ನೂತನ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಕೂಡ ಆಗಮಿಸಿದ್ದಾರೆ. ವಿಶ್ವನಾಥ್ ಅವರಿಂದಲೇ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಲಾಗುವುದು ಎಂದು ದೇವೇಗೌಡರು ಈ ಹಿಂದೆ ಹೇಳಿದ್ದರು. ಅದರಂತೆ ವಿಶ್ವನಾಥ್ ಅವರಿಂದ ಹೊಸ ಅಧ್ಯಕ್ಷರಿಗೆ ಪಕ್ಷದ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸುವ ಸಾಧ್ಯತೆ ಇದೆ. ಒಂದು ವೇಳೆ ಇಂದು ಹೆಸರುಗಳನ್ನು ಘೋಷಣೆ ಮಾಡಿ ನಂತರ ಬೃಹತ್ ಸಮಾವೇಶ ನಡೆಸಿ ಅಲ್ಲಿಯೇ ಅಧಿಕಾರ ನೀಡುವ ಸಾಧ್ಯತೆಯನ್ನು ಸಹ ತಳ್ಳಿಹಾಕುವಂತಿಲ್ಲ. ಈಗ ಎಲ್ಲರ ಚಿತ್ತ ದೇವೇಗೌಡರ ಸುದ್ದಿಗೋಷ್ಟಿಯತ್ತ ನೆಟ್ಟಿದೆ.

Intro:ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಇಂದು ಹೆಸರನ್ನು ಘೋಷಣೆ ಮಾಡುವ ಹಿನ್ನೆಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪಕ್ಷದ ಕಚೇರಿ ಜೆಪಿ ಭವನಕ್ಜೆ ಆಗಮಿಸಿದ್ದಾರೆ.Body:ನೂತನ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕಗೊಳ್ಳಲಿರುವ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್. ವಿಶ್ವನಾಥ್ ಸಹಾ ಕಚೇರಿಗೆ ಆಗಮಿಸಿದ್ದಾರೆ.
ದೇವೇಗೌಡರು ಬಂದ ತಕ್ಷಣ ವಿಶ್ವನಾಥ್ ಅವರು ಹಸ್ತಲಾಘವ ಮಾಡಿದರು. ನಂತರ ಮೂವರು ದೇವೇಗೌಡರ ಕಚೇರಿಗೆ ಒಳಗೆ ತೆರಳಿದರು.
ನೂತನ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಕೂಡ ಆಗಮಿಸಿದ್ದಾರೆ. ಹೆಸರು ಘೋಷಣೆಗೂ ಮುನ್ನ ದೇವೇಗೌಡರ ಕೊಠಡಿಯಲ್ಲಿ ಗೌಪ್ಯ ಸಭೆ ನಡೆಸುತ್ತಿದ್ದಾರೆ.
ವಿಶ್ವನಾಥ್ ಅವರಿಂದಲೇ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಲಾಗುವುದು ಎಂದು ದೇವೇಗೌಡರು ಈ ಹಿಂದೆ ಹೇಳಿದ್ದರು. ಅದರಂತೆ ವಿಶ್ವನಾಥ್ ಅವರಿಂದ ಹೊಸ ಅಧ್ಯಕ್ಷರಿಗೆ ಪಕ್ಷದ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸುವ ಸಾಧ್ಯತೆ ಇದೆ. ಒಂದು ವೇಳೆ ಇಂದು ಹೆಸರುಗಳನ್ನು ಘೋಷಣೆ ಮಾಡಿ ನಂತರ ಬೃಹತ್ ಸಮಾವೇಶ ಮಾಡಿ ಅಲ್ಲಿ ಪಕ್ಷದ ಬಾವುಟ ನೀಡಿ ಅಧಿಕಾರ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈಗ ಎಲ್ಲ ಚಿತ್ತ ದೇವೇಗೌಡರ ಸುದ್ದಿಗೋಷ್ಠಿಯತ್ತ ನೆಟ್ಟಿದೆ.Conclusion:
Last Updated : Jul 4, 2019, 1:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.