ETV Bharat / state

ನೋಡ ನೋಡುತ್ತಿದ್ದಂತೆ ವೃದ್ಧೆಯ ಸರ ಎಗರಿಸಿದ ಕಳ್ಳರು.. ಸಿಸಿ ಟಿವಿಯಲ್ಲಿ ದೃಶ್ಯ ಸೆರೆ - ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ

ಸುಮಾರು 35 ಗ್ರಾಂ ಚಿನ್ನದ ಸರವನ್ನು ಆರೋಪಿಗಳು ಕದ್ದೊಯ್ದಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಘಟನಾ ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ..

Bangalore Chain snatched
ಬೆಳಗಿನ ಜಾವ ಬೆಂಗಳೂರಿನಲ್ಲಿ ಸರಗಳ್ಳರ ಕೈಚಳಕ
author img

By

Published : Jul 19, 2021, 3:35 PM IST

ಬೆಂಗಳೂರು : ರಾಜಧಾನಿಯಲ್ಲಿ ಅನ್​ಲಾಕ್ ನಂತರ ಸರಗಳ್ಳರು ಮತ್ತೆ ಬಾಲ ಬಿಚ್ಚಿದ್ದಾರೆ. ಬ್ಲ್ಯಾಕ್ ಪಲ್ಸರ್ ಬೈಕ್​ನಲ್ಲಿ ಬಂದ ಖದೀಮರು, ವಿಜಯನಗರದ 2ನೇ ಕ್ರಾಸ್​ನಲ್ಲಿ ಸರಗಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಬೆಳಗಿನ ಜಾವ ಬೆಂಗಳೂರಿನಲ್ಲಿ ಸರಗಳ್ಳರ ಕೈಚಳಕ

ಬೆಳಗಿನ ಜಾವ 6 ಗಂಟೆ ಸುಮಾರಿಗೆ ಈ ಘಟನೆ ನೆಡೆದಿದೆ. 72 ವರ್ಷದ ವಯೋವೃದ್ಧೆ ಇಂದ್ರಮ್ಮ ಎಂಬುವರ ಚಿನ್ನದ ಸರವನ್ನು ಬೈಕ್​ನಲ್ಲಿ ಬಂದ ಇಬ್ಬರು ಸರಗಳ್ಳರು ಕದ್ದು ಪರಾರಿಯಾಗಿದ್ದಾರೆ.

ಸುಮಾರು 35 ಗ್ರಾಂ ಚಿನ್ನದ ಸರವನ್ನು ಆರೋಪಿಗಳು ಕದ್ದೊಯ್ದಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಘಟನಾ ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕೊಡಗು ಗಡಿಯಲ್ಲಿ ಐರಾವತ ಬಸ್ ಅಪಘಾತ: ಚಾಲಕ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.