ETV Bharat / state

ಬೆಂಗಳೂರಲ್ಲಿ ಚೀನಾ ಮೂಲದ ಲೋನ್ ಕಂಪನಿಗಳ ಮೇಲೆ ಇಡಿ ದಾಳಿ: 78 ಕೋಟಿ ಜಪ್ತಿ - ಬೆಂಗಳೂರಲ್ಲಿ ಕಂಪನಿಗಳ ಮೇಲೆ ಇಡಿ ದಾಳಿ

ಚೀನಾ ಮೂಲದ ಲೋನ್ ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿ 78 ಕೋಟಿ ರೂ ಜಪ್ತಿ ಮಾಡಿಕೊಂಡಿದೆ.

ಇಡಿ ದಾಳಿ
ಇಡಿ ದಾಳಿ
author img

By

Published : Oct 22, 2022, 8:19 PM IST

ಬೆಂಗಳೂರು: ಚೀನಾ ಮೂಲದ ಲೋನ್ ಕಂಪನಿಗಳಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ಅಧಿಕಾರಿಗಳು (ಜಾರಿ ನಿರ್ದೇಶನಾಲಯ) ನಗರದ 5 ಕಡೆ ದಾಳಿ ಮಾಡಿ 78 ಕೋಟಿ ಹಣ ಜಪ್ತಿ ಮಾಡಿದ್ದಾರೆ.

ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ 18 ಎಫ್​​ಐಆರ್ ದಾಖಲಿಸಲಾಗಿದ್ದು, ಕೇಸ್ ಆಧಾರದ ಮೇಲೆ ತನಿಖೆ ನಡೆಸಿದಾಗ ಎಲ್ಲಾ ಲೋನ್ ಆ್ಯಪ್‌ಗಳ ಮೂಲ ಚೀನಾ ಕಂಪನಿಗಳಿಗೆ ಸೇರಿದ್ದು ಎಂಬುದು ಪತ್ತೆಯಾಗಿತ್ತು. ಭಾರತೀಯ ಮೂಲದ ಉದ್ಯೋಗಿಗಳನ್ನು ನಿರ್ದೇಶಕರನ್ನಾಗಿ ಕಂಪನಿ ನೇಮಿಸಿತ್ತು. ಕಡಿಮೆ ಸಾಲ ನೀಡಿ ಅಧಿಕ ಬಡ್ಡಿ ವಸೂಲಿ ಮೂಲಕ ಗ್ರಾಹಕರಿಗೆ ಕಿರುಕುಳ ನೀಡಲಾಗುತ್ತಿತ್ತು. ವಸೂಲಿಯಾದ ಹಣವನ್ನು ಅಕ್ರಮವಾಗಿ ವಿದೇಶಿ ಖಾತೆಗಳಿಗೆ ವರ್ಗಾಯಿಸುತ್ತಿರುವ ಬಗ್ಗೆ ಆರೋಪ ಕೇಳಿಬಂದಿತ್ತು.

ಸದ್ಯ ಇಡಿ ಅಧಿಕಾರಿಗಳು ದಾಳಿ ನಡೆಸಿ 78 ಕೋಟಿ ಹಣ ಜಪ್ತಿ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಉದ್ಯೋಗದ ಭರವಸೆ ಕೊಟ್ಟು ಯುವಕರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ಚೀನಾ ಮೂಲದ ಕೀಪ್‌ಶೇರ್ ಆ್ಯಪ್​​ಗೆ ಸೇರಿದ 12 ಕೇಂದ್ರಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 5.88 ಕೋಟಿ ನಗದು ಹಾಗೂ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಆ್ಯಪ್ ವಿರುದ್ಧ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

(ಓದಿ: ಆಭರಣ ವ್ಯಾಪಾರಿಗಳ ನಿವಾಸದ ಮೇಲೆ ಇಡಿ ದಾಳಿ: 150 ಕೋಟಿ ಮೌಲ್ಯದ ಆಸ್ತಿ,ವಜ್ರಾಭರಣ, ನಗದು ವಶಕ್ಕೆ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.