ಬೆಂಗಳೂರು : ಕೇರಳ ಮಾಜಿ ಗೃಹ ಸಚಿವರ ಪುತ್ರ ಬಿನೀಶ್ ಕೊಡಿಯೇರಿ ವಿರುದ್ಧ ಇಡಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ 34ನೇ ಸಿಸಿಹೆಚ್ ನ್ಯಾಯಾಲಯಕ್ಕೆ 500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ಬಿನೇಶ್ ಪಾತ್ರದ ಕುರಿತು ಉಲ್ಲೇಖಿಸಲಾಗಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ ಪ್ರಕರಣ ಸಂಬಂಧ ಮೂವರು ಆರೋಪಿಗಳಾದ ಎ1 ಆರೋಪಿ, ಅನಿಕಾ ಡಿ, ಎರಡನೇ ಆರೋಪಿ, ರಿಜೇಶ್ ಮೂರನೇ ಆರೋಪಿ ಅನೂಪ್ ಮಹಮ್ಮದ್ನನ್ನು ಬಂಧಿಸಲಾಗಿತ್ತು. ತದನಂತರ ಅಕ್ರಮ ಹಣದ ವಹಿವಾಟು ಪ್ರಕರಣದ ಬಗ್ಗೆ ಇಡಿ ಅಧಿಕಾರಿಗಳು ಅನೂಪ್ ವಿಚಾರಣೆ ನಡೆಸಿದಾಗ ಅನೂಪ್ಗೆ ಬಿನೀಶ್ ₹50 ಲಕ್ಷ ಹಣ ಸಾಲವಾಗಿ ಕೊಟ್ಟಿದ್ದು, ಅದೇ ಹಣದಲ್ಲಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ಹಾಗೂ ಪಬ್ ತೆರೆಸಿದ್ದ.
ಆದರೆ, ಕೊರೊನಾ ಲಾಕ್ಡೌನ್ ಕಾರಣಕ್ಕೆ ರೆಸ್ಟೋರೆಂಟ್ ಹಾಗೂ ಪಬ್ ಲಾಸ್ನಲ್ಲಿತ್ತು. ಈ ಸಂದರ್ಭದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಿರುವ ಬಗ್ಗೆ ಅನೂಪ್ ಮಾಹಿತಿ ಬಿಚ್ಚಿಟ್ಟಿದ್ದ.. ಇದೆಲ್ಲದರ ಆಧಾರದ ಮೇರೆಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದು ಇಡಿ ಅಧಿಕಾರಿಗಳು, ಬಿನೀಶ್ ಕೊಡಿಗೇರಿಯ ತೀವ್ರ ವಿಚಾರಣೆ ಮಾಡಿದ್ರು.
ಹಣದ ವ್ಯವಹಾರದ ಮಾಹಿತಿ ಕಲೆ ಹಾಕಿ ತದನಂತರ ಪಿಎಂಎಲ್ಎ ಕೇಸ್ ಅಡಿ ಬಿನೀಶ್ ಕೊಡಿಯೇರಿಯನ್ನು ಬಂಧಿಸಿ ತನಿಖೆ ನಡೆಸಲಾಗಿತ್ತು. ಸದ್ಯ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಬಿನೇಶ್ ಪಾತ್ರದ ಬಗ್ಗೆಯೂ ಮಾಹಿತಿ ಉಲ್ಲೇಖವಾಗಿದೆ.