ETV Bharat / state

ಎಕನಾಮಿಕ್ ಕ್ಯಾಪಿಟಲ್ ಟು ಕಲ್ಚರಲ್ ಕ್ಯಾಪಿಟಲ್: ಎಕ್ಸ್​ಪ್ರೆಸ್ ವೇ ಕುರಿತ ಪಕ್ಷಿನೋಟ ಇಲ್ಲಿದೆ - bengaluru mysuru express highway

ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು - ಮೈಸೂರು ಎಕ್ಸ್​ಪ್ರೆಸ್​ ವೇಯನ್ನು ಉದ್ಘಾಟನೆ ಮಾಡಲಿದ್ದು, ಈ ದಶಪಥ ಹೆದ್ದಾರಿಯ ಉದ್ಘಾಟನೆಯಿಂದ ಮೈಸೂರು ಮತ್ತು ಬೆಂಗಳೂರು ನಡುವಿನ ಅಂತರ ಕಡಿಮೆ ಆಗಲಿದೆ, ಇದರಿಂದ ಹಲವಾರು ರೀತಿಯ ಅನುಕೂಲಗಳು ಆಗಲಿವೆ ಎನ್ನಲಾಗುತ್ತಿದೆ.

economic-capital-to-cultural-capital-bangalore-mysore-expressway
ಎಕನಾಮಿಕ್ ಕ್ಯಾಪಿಟಲ್ ಟು ಕಲ್ಚರಲ್ ಕ್ಯಾಪಿಟಲ್: ಎಕ್ಸ್ ಪ್ರೆಸ್ ವೇ ಕುರಿತ ಪಕ್ಷಿನೋಟ ಇಲ್ಲಿದೆ...!
author img

By

Published : Mar 11, 2023, 5:53 PM IST

ಬೆಂಗಳೂರು: ರಾಜ್ಯದ ಆರ್ಥಿಕ ರಾಜಧಾನಿ ಮತ್ತು ಸಾಂಸ್ಕೃತಿಕ ರಾಜಧಾನಿ ಜನತೆಯ ದಶಕದ ಕನಸು ನನಸಾಗುತ್ತಿದೆ. ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇಯನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದು, ಅಧಿಕೃತವಾಗಿ ಸಂಚಾರ ಮುಕ್ತಗೊಳಿಸಲಿದ್ದಾರೆ. ಸಾಕಷ್ಟು ಅಡೆತಡೆಗಳ ನಡುವೆಯೂ ಎಕ್ಸ್​ಪ್ರೆಸ್ ವೇ ಮುಕ್ತಾಯಗೊಂಡಿದ್ದು, ಲೋಕಾರ್ಪಣೆಗೆ ಸಜ್ಜಾಗಿ ನಿಂತಿದೆ. ದಶಪಥದ ಕುರಿತ ಪಕ್ಷಿ ನೋಟ ಇಲ್ಲಿದೆ.

ಎಕ್ಸ್​ಪ್ರೆಸ್ ವೇ ಪಕ್ಷಿನೋಟ
ಎಕ್ಸ್​ಪ್ರೆಸ್ ವೇ ಪಕ್ಷಿನೋಟ

ಬೆಂಗಳೂರು ಮತ್ತು ಮೈಸೂರು ನಡುವೆ ಹಳೆಯ ಹೆದ್ದಾರಿ ಪ್ರಕಾರ 143 ಕಿಲೋಮೀಟರ್ ಅಂತರವಿದೆ. ಆದರೆ, ಈ ಅಂತರವನ್ನು ದಶಪಥ ಹೆದ್ದಾರಿ 118 ಕಿಲೋಮೀಟರ್​ಗೆ ಇಳಿಸಿದೆ. ದಶಪಥವಾಗಿರುವ ಹಿನ್ನೆಲೆಯಲ್ಲಿ ರಸ್ತೆ ವಿಶಾಲವಾಗಿದ್ದು, ಯಾವುದೇ ಸಂಚಾರ ದಟ್ಟಣೆ ಇಲ್ಲದೆ ಪ್ರಯಾಣಿಸಬಹುದಾಗಿದೆ. ಹಾಗಾಗಿ 118 ಕಿಲೋಮೀಟರ್ ಅಂತರದ ದೂರವನ್ನು ಕ್ರಮಿಸಲು ಕೇವಲ 90 ನಿಮಿಷ ಸಾಕಾಗಲಿದೆ. ಈವರೆಗೂ 3ಗಂಟೆ ಬೇಕಾಗುತ್ತಿದ್ದ ಸಮಯ ಈಗ ಅರ್ಧಕ್ಕೆ ಇಳಿಕೆಯಾಗಿದೆ.

ಎಕ್ಸ್​ಪ್ರೆಸ್ ವೇ ಪಕ್ಷಿನೋಟ
ಎಕ್ಸ್​ಪ್ರೆಸ್ ವೇ ಪಕ್ಷಿನೋಟ

ಒಟ್ಟು ಎರಡು ಹಂತದಲ್ಲಿ ದಶಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲಾಗಿದ್ದು. ಮೊದಲ ಹಂತದ 56 ಕಿಲೋಮೀಟರ್ ಯೋಜನೆಗೆ 4428 ಕೋಟಿ ವೆಚ್ಚ, ಎರಡನೇ ಹಂತದ 61 ಕಿ.ಮೀ​ ಗೆ 4500 ಕೋಟಿ ಖರ್ಚು ಮಾಡಲಾಗಿದೆ. ಬೆಂಗಳೂರು ಹೊರವಲಯದ ನೈಸ್ ಜಂಕ್ಷನ್ ಬಳಿಯ ಪಂಚಮುಖಿ ದೇವಸ್ಥಾನದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆವರೆಗೆ ಎಕ್ಸ್ ​ಪ್ರೆಸ್ ವೇ ನಿರ್ಮಾಣವಾಗಿದೆ.

ಎಕ್ಸ್​ಪ್ರೆಸ್ ವೇ ಪಕ್ಷಿನೋಟ
ಎಕ್ಸ್​ಪ್ರೆಸ್ ವೇ ಪಕ್ಷಿನೋಟ

ದಶಪಥದ ರಸ್ತೆಯಲ್ಲಿ 6 ಪಥದ ಎಕ್ಸ್​ಪ್ರೆಸ್ ಹೈವೆ ಇರಲಿದ್ದು, ಎರಡೂ ಕಡೆ ದ್ವಿಪಥದ ಸರ್ವಿಸ್ ರಸ್ತೆ ಇರಲಿದೆ. 118 ಕಿಲೋಮೀಟರ್ ಎಕ್ಸ್​ಪ್ರೆಸ್ ವೇನಲ್ಲಿ 9 ಬೃಹತ್ ಸೇತುವೆಗಳ ನಿರ್ಮಾಣ ಮಾಡಲಾಗಿದ್ದು, 44 ಸಣ್ಣಪುಟ್ಟ ಸೇತುವೆಗಳನ್ನೂ ನಿರ್ಮಿಸಲಾಗಿದೆ. ಈ ಎಕ್ಸ್​ಪ್ರೆಸ್ ವೇನಲ್ಲಿ ಎಲೆವೇಟೆಡ್ ಮಾರ್ಗವೂ ಇದ್ದು, 8.7 ಕಿಲೋ ಮೀಟರ್ ಉದ್ದದ ಎಲಿವೇಟೆಡ್ ಹೈವೇ ನಿರ್ಮಿಸಲಾಗಿದೆ. ಹಾಗಾಗಿ ಟೋಲ್ ಶುಲ್ಕದಲ್ಲಿ ತುಸು ಹೆಚ್ಚಾಗುತ್ತಿದೆ. ಇನ್ನು ದಶಪಥದ ನಡುವೆ 4 ರೈಲ್ವೆ ಮೇಲ್ಸೇತುವೆ ನಿರ್ಮಿಸಿದ್ದು, ವಾಹನಗಳ ಸಂಚಾರಕ್ಕೆ ಪೂರಕವಾಗಿ 28 ಅಂಡರ್​ಪಾಸ್​ಗಳನ್ನು ನಿರ್ಮಿಸಲಾಗಿದೆ, 13 ಕಡೆ ಪಾದಚಾರಿ ಅಂಡರ್ ಪಾಸ್ ನಿರ್ಮಿಸಲಾಗಿದೆ. ಅಲ್ಲದೆ ರಾಜ್ಯದ ಮೊದಲ ಆಕ್ಸಲ್ ಕಂಟ್ರೋಲ್ಡ್ ಹೈವೇ ಎನ್ನುವ ಹೆಗ್ಗಳಿಕೆ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ವೇಯದ್ದಾಗಿದೆ.

ಎಕ್ಸ್​ಪ್ರೆಸ್ ವೇ ಪಕ್ಷಿನೋಟ
ಎಕ್ಸ್​ಪ್ರೆಸ್ ವೇ ಪಕ್ಷಿನೋಟ

ಹೈವೆ ಇತಿಹಾಸ: ಪ್ರಧಾನಿ ನರೇಂದ್ರ ಮೋದಿ 2018ರ ಫೆಬ್ರವರಿಯಲ್ಲಿ ಮೈಸೂರಿಗೆ ಬಂದಾಗ ದಶಪಥ ರಸ್ತೆ ಘೋಷಿಸಿದ್ದರು. ಮರುದಿನವೇ ಕ್ಯಾಬಿನೆಟ್ ಸಬ್ ಕಮಿಟಿಯೂ ಇದಕ್ಕೆ ಅನುಮೋದನೆ ಕೊಟ್ಟಿತ್ತು. ನಂತರ ಕೇವಲ ಒಂದು ತಿಂಗಳಿನಲ್ಲಿಯೇ 2018 ಮಾರ್ಚ್‍ನಲ್ಲಿ ಯಶವಂತಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಎಕ್ಸ್​ಪ್ರೆಸ್ ವೇ ಗೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಸರಿಯಾಗಿ 5 ವರ್ಷಕ್ಕೆ 118 ಕಿಲೋಮೀಟರ್ ಉದ್ದದ 9500 ಕೋಟಿ ವೆಚ್ಚದ ಎಕ್ಸ್​ಪ್ರೆಸ್ ವೇ ಉದ್ಘಾಟನೆಯಾಗುತ್ತಿದೆ.

ಎಕ್ಸ್​ಪ್ರೆಸ್ ವೇ ಪಕ್ಷಿನೋಟ
ಎಕ್ಸ್​ಪ್ರೆಸ್ ವೇ ಪಕ್ಷಿನೋಟ

ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮಕ್ಕೆ ಒತ್ತು: ಸುಮಾರು 6,500 ಜನರಿಗೆ ಈ ರಸ್ತೆ ಉದ್ಯೋಗ ಕೊಟ್ಟಿದೆ. ಈ ಹೈವೇಯ ಎರಡೂ ಬದಿಗಳಲ್ಲಿ ಕೈಗಾರಿಕಾ ಕಾರಿಡಾರ್ ಆರಂಭಗೊಳ್ಳಲಿದೆ, ದಶಪಥ ಮಾರ್ಗದ ಉದ್ದಕ್ಕೂ ಅಲ್ಲಲ್ಲಿ ಮಳಿಗೆಗಳು, ಹೋಟೆಲ್‍ಗಳು ತಲೆ ಎತ್ತಲಿದ್ದು, ಆ ಮೂಲಕ ಉದ್ಯೋಗ ಲಭಿಸುತ್ತದೆ. ಅಲ್ಲದೆ ಎಕ್ಸ್​ಪ್ರೆಸ್ ವೇ ನಿರ್ಮಾಣದಿಂದಾಗಿ ಪ್ರವಾಸೋದ್ಯಮದಲ್ಲಿ ಉತ್ತುಂಗ ಸ್ಥಿತಿಗೆ ಮೈಸೂರನ್ನು ಒಯ್ಯಲು ಸಾಧ್ಯವಿದೆ. ವಿಶ್ವವಿಖ್ಯಾತ ದಸರಾ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಾಗಲಿದೆ.

ಸರ್ವಿಸ್ ರಸ್ತೆ ಅಪೂರ್ಣ: ದಶಪಥ ಮಾರ್ಗದುದ್ದಕ್ಕೂ ಎರಡೂ ಕಡೆ ಸರ್ವಿಸ್ ರಸ್ತೆ ನಿರ್ಮಾಣವಾಗುತ್ತಿದ್ದು, ಕೆಲವೆಡೆ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ ಹಾಗಾಗಿ ಎಕ್ಸ್​ಪ್ರೆಸ್ ವೇ ಕಾಮಗಾರಿ ಪೂರ್ಣಕ್ಕೂ ಮೊದಲೇ ಉದ್ಘಾಟನೆ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಬಿಜೆಪಿ ಸರ್ಕಾರ ಎದುರಿಸುತ್ತಿದೆ. ಸರ್ವಿಸ್ ರಸ್ತೆ ಕೊಡದೆ ಟೋಲ್ ಶುಲ್ಕ ಸಂಗ್ರಹ ಮಾಡಬಾರದು ಎನ್ನುವ ಆಗ್ರಹಗಳು ಕೇಳಿ ಬಂದಿವೆ.

ಇದನ್ನೂ ಓದಿ: ನಾಳೆ ಧಾರವಾಡಕ್ಕೆ ಪ್ರಧಾನಿ ಮೋದಿ ಆಗಮನ:ಭರದಿಂದ ಸಾಗಿದ ಸಿದ್ದತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.