ಬೆಂಗಳೂರು: ಏರೋ ಇಂಡಿಯಾ 2021 ಫೆ 3-7 ರ ವರೆಗೆ ನಡೆಯಲಿದ್ದು, ಏರೋ ಇಂಡಿಯಾ ವೆಬ್ಸೈಟ್ನಲ್ಲಿ ಇ ಟಿಕೆಟ್ ಮಾರಾಟ ಪ್ರಾರಂಭವಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ವೀಕ್ಷಕರು ನಿಯಮಿತ ಗಂಟೆಗಳು ಮಾತ್ರ ಕಾರ್ಯಕ್ರಮದಲ್ಲಿ ಇರಬೇಕು. ಒಂದುವೇಳೆ ವೀಕ್ಷಕರು ಹೆಚ್ಚು ಸಮಯ ಇದ್ದಿದ್ದು ಕಂಡುಬಂದಲ್ಲಿ ದಂಡ ವಿಧಿಸಲಾಗುವುದು ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.
ಕೋವಿಡ್ 19 ಮುಂಜಾಗ್ರತಾ ಕ್ರಮ ಹಿನ್ನೆಲೆಯಲ್ಲಿ ಏರೋ ಇಂಡಿಯಾ ಕಾರ್ಯಕ್ರಮದ 72 ಗಂಟೆಗಳ ಮುಂಚಿನ ಕೋವಿಡ್ 19ರ ನೆಗೆಟಿವ್ ರಿಪೋರ್ಟ್ ಹಾಗೂ ಮಾಸ್ಕ್ ಕಡ್ಡಾಯ ಎಂದು ಆಯೋಜಕರು ಸ್ಪಷ್ಟ ಪಡಿಸಿದ್ದಾರೆ.
ಟಿಕೆಟ್ ವಿವರ:
ಬೆಳಿಗ್ಗೆ 9:00 ರಿಂದ ಮದ್ಯಾಹ್ನ 1:30ಕ್ಕೆ ಹಾಗೂ ಮದ್ಯಾಹ್ನ 1:30 ರಿಂದ ಸಂಜೆ 6ರ ವರೆಗಿನ ಟಿಕೆಟ್ ದರ ₹ 2500 (ಭಾರತೀಯರಿಗೆ) $75 (ವಿದೇಶಿಗರಿಗೆ). ಇನ್ನು ಪೂರ್ಣ ದಿನದ ವೀಕ್ಷಣೆಗೆ ₹5000 (ಭಾರತೀಯರಿಗೆ) $ 150 (ವಿದೇಶಿಗರಿಗೆ).
ಇದಲ್ಲದೆ ADVA ಟಿಕೆಟ್ ದರ ₹ 500 (ಭಾರತೀಯರಿಗೆ) $20(ವಿದೇಶಿಗರಿಗೆ) ನಿಗದಿಪಡಿಸಲಾಗಿದ್ದು, ವೀಕ್ಷಕರು ಕೇವಲ 45 ನಿಮಿಷಗಳು ಮಾತ್ರ ಉಕ್ಕಿನ ಹಕ್ಕಿಯ ಹಾರಾಟ ನೋಡಲು ಅವಕಾಶವಿರುತ್ತದೆ.