ETV Bharat / state

ಕುಮಾರಸ್ವಾಮಿ ಅಳ್ತಾರೆ, ರಾಜ್ಯದ ಜನರನ್ನು ಅಳುಸ್ತಾರೆ: ಕೇಂದ್ರ ಸಚಿವ ಡಿವಿಎಸ್​ ಲೇವಡಿ - Union Minister DV Sadananda Gowda latest news

ಕುಮಾರಸ್ವಾಮಿ ಯಾಕೆ ಸಾವಿರಾರು ಜನರು ಇರುವ ವೇದಿಕೆಯಲ್ಲೇ ಅಳುತ್ತಾರೆ. ಸತ್ತವರ ಮನೆಯಲ್ಲಿ ಹೋಗಿ ಅಳಬಹುದಲ್ವ? ಯಾಕೆ ಅಲ್ಲಿ ಹೋಗಿ ಅಳೋದಿಲ್ಲ ಎಂದು ಹೆಚ್​ಡಿಕೆಗೆ ಸದಾನಂದ ಗೌಡ ಪ್ರಶ್ನಿಸಿದ್ದಾರೆ.

D.V sadananda gowda
ಡಿ.ವಿ ಸದಾನಂದಗೌಡ
author img

By

Published : Nov 30, 2019, 9:12 PM IST

ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಪರ ಸದಾನಂದಗೌಡ ಅವರು ಪ್ರಚಾರ ನಡೆಸುವ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೈರತಿ ಬಸವರಾಜ್ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ

ಸಾವಿನ ಮನೆಯಲ್ಲೂ ಸದಾನಂದಗೌಡರು ನಗ್ತಾರೆ ಅಂತ ಗೇಲಿ ಮಾಡಿದ್ದ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ಕುಮಾರಸ್ವಾಮಿಯವರಿಗೆ ರಾಜಕೀಯದಿಂದ ಪರ್ಮನೆಂಟ್ ನಿವೃತ್ತಿ ಕೊಡಿಸಬೇಕು. ಸತ್ತವರ ಮನೆಯ ನೋವನ್ನು ಸ್ವತಃ ಅನುಭವಿಸಿದವರು ನಾವು, ಅದೆಲ್ಲಾ ಕುಮಾರಸ್ವಾಮಿಗೆ ಗೊತ್ತಾಗಲ್ಲ, ಕುಮಾರಸ್ವಾಮಿ ಯಾಕೆ ಸಾವಿರಾರು ಜನರು ಇರುವ ವೇದಿಕೆಯಲ್ಲೇ ಅಳುತ್ತಾರೆ. ಸತ್ತವರ ಮನೆಯಲ್ಲಿ ಹೋಗಿ ಅಳಬಹುದಲ್ವ? ಯಾಕೆ ಅಲ್ಲಿ ಹೋಗಿ ಅಳೋದಿಲ್ಲ. ಜನಪ್ರತಿನಿಧಿಯಾದವನು ನಗಬೇಕು, 10 ಜನರನ್ನ ನಗಿಸಬೇಕು ಎಂದರು.

ಇನ್ನೂ ಇದರ ಜೊತೆಗೆ ಸಿದ್ಧರಾಮಯ್ಯನವವರು ಸಿಎಂ ಆಗುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಿದ್ಧರಾಮಯ್ಯನವರಿಗೆ ಹುಚ್ಚುತನದ ಕನಸು ಬೀಳುತ್ತಿದೆ. ಅದು ಈಗ ತಾರಕಕ್ಕೇರಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಈಗಾಗಲೇ ಒಳಒಪ್ಪಂದ ಮಾಡಿಕೊಂಡಿದೆ. ಹಾಗಂತ ಜೆಡಿಎಸ್​ನವರು ಸಿದ್ಧರಾಮಯ್ಯರನ್ನು ಸಿಎಂ ಆಗಲು ಬಿಡ್ತಾರಾ ಎಂದು ಪ್ರಶ್ನಿಸಿದ್ದಾರೆ.

Intro:Body:ಕುಮಾರಸ್ವಾಮಿ ಅಳ್ತಾರೆ... ರಾಜ್ಯದ ಜನರನ್ನು ಅಳುಸ್ತಾರೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಲೇವಡಿ

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಬಿಜೆಪಿ‌ ಅಭ್ಯರ್ಥಿ ಬೈರತಿ ಬಸವರಾಜ್ ಪರ ಮತಯಾಚಿಸಿದರು. ಈ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಅಸಲಿಗೆ ಸಾವಿನ ಮನೆಯಲ್ಲೂ ಸದಾನಂದಗೌಡರು ನಗ್ತಾರೆ ಅಂತ ಗೇಲಿ ಮಾಡಿದ್ದ ಕುಮಾರಸ್ವಾಮಿಗೆ ಮೊದಲು ರಾಜಕೀಯದಿಂದ ಪರ್ಮನೆಂಟ್ ನಿವೃತ್ತಿ ಕೊಡಿಸಬೇಕು ಎಂದಿದ್ದಾರೆ.. ಸತ್ತವರ ಮನೆಯ ನೋವು ಸ್ವತಃ ಅನುಭವಿಸಿದವರು ನಾವು, ಅದೆಲ್ಲಾ ಕುಮಾರಸ್ವಾಮಿಗೆ ಗೊತ್ತಾಗಲ್ಲ, ಕುಮಾರಸ್ವಾಮಿ ಯಾಕೆ ಸಾವಿರಾರು ಜನರು ಇರುವ ವೇದಿಕೆಯಲ್ಲಿ ಅಳುತ್ತಾರೆ.. ಸತ್ತವರ ಮನೆಯಲ್ಲಿ ಹೋಗಿ ಅಳಬಹುದಲ್ವಾ.. ಯಾಕೆ ಅಲ್ಲಿ ಹೋಗಿ ಅಳೋದಿಲ್ಲ.. ಜನಪ್ರತಿನಿಧಿಯಾದವನು ನಗಬೇಕು, 10 ಜನರನ್ನ ನಗಿಸಬೇಕು ಎಂದರು
ಇನ್ನೂ ಇದರ ಜೊತೆಗೆ ಸಿದ್ಧರಾಮಯ್ಯನವರ ಸಿಎಂ ಆಗುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಿದ್ಧರಾಮಯ್ಯನವರಿಗೆ ಹುಚ್ಚುತನದ ಕನಸು ಬೀಳುತ್ತಿದೆ... ಅದು ಈಗ ತಾರಕಕ್ಕೇರಿದೆ.. ಜೆಡಿಎಸ್ ಹಾಗೂ ಕಾಂಗ್ರೆಸ್ ಈಗಾಗಲೇ ಒಳ ಒಪ್ಪಂದ ಮಾಡಿಕೊಂಡಿದೆ.. ಹಾಗಂತ ಜೆಡಿಎಸ್ ನವರು ಸಿದ್ಧರಾಮಯ್ಯರನ್ನ ಸಿಎಂ ಆಗಲು ಬಿಡ್ತಾರ ಎಂದು ಪ್ರಶ್ನಿಸಿದರು..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.