ETV Bharat / state

ಕೋಟ್ಯಂತರ ರೂ. ಬಾಕಿ ಪಾವತಿಸದೇ ಜಲಮಂಡಳಿಗೇ ನೀರು ಕುಡಿಸಿದ ಸರ್ಕಾರಿ ಇಲಾಖೆಗಳು!! - ಜಲಮಂಡಳಿಯ ಪ್ರಮುಖ ಆದಾಯ ಮೂಲ ನೀರಿನ ಬಿಲ್

ಜಲಮಂಡಳಿಯು ವಾರ್ಷಿಕವಾಗಿ ಸುಮಾರು 130 ಕೋಟಿ ರೂ. ಆದಾಯ ಕೊರತೆಯನ್ನು ಎದುರಿಸುತ್ತಿದೆ. ಸುಮಾರು 500 ಕೋಟಿ ರೂಪಾಯಿ ವಿದ್ಯುತ್ ಬಿಲ್ ರೂಪದಲ್ಲಿ ಪಾವತಿಸುತ್ತದೆ. ತನ್ನ ಪ್ರಮುಖ ಆದಾಯ ಸಂಗ್ರಹದಲ್ಲಿ ಸುಮಾರು ಶೇ. 80 ನೀರಿನ ಬಿಲ್ ಸಂಗ್ರಹದ ಮೂಲಕ ಬರುತ್ತದೆ..

Dues of bill of water
ಸರ್ಕಾರಿ ಇಲಾಖೆಗಳಿಂದ ಕೋಟ್ಯಂತರ ನೀರಿನ ಬಿಲ್ ಬಾಕಿ
author img

By

Published : Oct 24, 2020, 9:52 PM IST

ಬೆಂಗಳೂರು : ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಲಮಂಡಳಿ ನಿತ್ಯ ಬೆಂಗಳೂರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುತ್ತದೆ. ಆದರೆ, ನೀರಿನ ಬಿಲ್ ಪಾವತಿಯಾಗದಿರುವುದು ಜಲಮಂಡಳಿಯ ಪಾಲಿಗೆ ದೊಡ್ಡ ತಲೆನೋವಾಗಿದೆ. ವಿವಿಧ ಸರ್ಕಾರಿ ಇಲಾಖೆಗಳೇ ಕೋಟಿ ಕೋಟಿ ನೀರಿನ‌ ಬಿಲ್ ಬಾಕಿ ಉಳಿಸಿಕೊಂಡಿವೆ.

ತಾನು ಪೂರೈಸುವ ನೀರಿಗೆ ಗ್ರಾಹಕರಿಂದ ಪಡೆಯುವ ನೀರಿನ ತೆರಿಗೆಯೇ ಜಲಮಂಡಳಿಯ ಪ್ರಮುಖ ಆದಾಯದ ಮೂಲ. ನೀರಿನ ಬಿಲ್ ಪಾವತಿಸದೇ ಜಲಮಂಡಳಿಯನ್ನು ಸತಾಯಿಸುತ್ತಿರುವುದು ಸಾರ್ವಜನಿಕರಲ್ಲ, ಬದಲಿಗೆ ಸರ್ಕಾರಿ ಇಲಾಖೆಗಳು. ವಿವಿಧ ಸರ್ಕಾರಿ ಇಲಾಖೆಗಳೇ, ಜಲಮಂಡಳಿಗೆ ಪಾವತಿಸಬೇಕಾದ ಕೋಟಿ ಕೋಟಿ ನೀರಿನ ಬಿಲ್‌ನ ಬಾಕಿ ಉಳಿಸಿಕೊಂಡಿವೆ.

ಬೆಂಗಳೂರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲು ಜಲಮಂಡಳಿ ಭಗೀರಥ ಪ್ರಯತ್ನ ಮಾಡುತ್ತದೆ. ದೂರದ ಕಾವೇರಿ ನದಿಯಿಂದ ನೀರನ್ನು ರಾಜಧಾನಿಗೆ ತರುವುದಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತದೆ. ಕೋಟಿ ಕೋಟಿ ಹಣವನ್ನು ವಿದ್ಯುತ್ ಕಂಪನಿಗಳಿಗೇ, ಜಲಮಂಡಳಿಗೆ ವರ್ಷ ವರ್ಷ ಪಾವತಿಸಬೇಕಾಗಿದೆ.

ಸರ್ಕಾರಿ ಇಲಾಖೆಗಳಿಂದ ಕೋಟ್ಯಂತರ ನೀರಿನ ಬಿಲ್ ಬಾಕಿ

ರಾಜ್ಯ ಸರ್ಕಾರದ ಇಲಾಖೆಗಳು 23.25 ಕೋಟಿ ರೂಪಾಯಿ, ಕೇಂದ್ರ ಸರ್ಕಾರದ ಇಲಾಖೆಗಳು 7.81 ಕೋಟಿ ರೂಪಾಯಿ, ಬೆಂಗಳೂರು ಮಹಾನಗರ ಪಾಲಿಕೆ 6.10 ಕೋಟಿ ರೂಪಾಯಿ, ನಿಗಮ ಮಂಡಳಿಗಳು 2.70 ಕೋಟಿ ರೂಪಾಯಿ, ರಕ್ಷಣಾ ಇಲಾಖೆ 90 ಲಕ್ಷ ರೂಪಾಯಿ. ವಿವಿಧ ಇಲಾಖೆಗಳು ಜಲಮಂಡಳಿಗೆ ಬಾಕಿ ಉಳಿಸಿಕೊಂಡಿರುವ ನೀರಿನ ಬಿಲ್​​ನ ಮೊತ್ತ ಅಂದಾಜು ಒಟ್ಟು 40.76 ಕೋಟಿ ರೂಪಾಯಿ ಇದೆ. ಇಷ್ಟು ಹಣವನ್ನು ಸರ್ಕಾರಿ ಇಲಾಖೆಗಳು ಬಾಕಿ ಉಳಿಸಿಕೊಳ್ಳುವ ಮೂಲಕ, ಜಲಮಂಡಳಿ ಬೊಕ್ಕಸಕ್ಕೆ ತೀವ್ರ ಹೊರೆ ನೀಡುತ್ತಿವೆ.

ಹಲವು ವರ್ಷಗಳಿಂದ ಇಲಾಖೆಗಳು ನೀರಿನ ಬಿಲ್ ಪಾವತಿಸದ ಹಿನ್ನೆಲೆ, ಜಲಮಂಡಳಿಯು ಬಡ್ಡಿಯನ್ನು ವಿಧಿಸುತ್ತಿದೆ. ಬಾಕಿ ಬಿಲ್​​​ಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಲಮಂಡಳಿಯು, ಇಲಾಖೆಗಳಿಗೆ ನೋಟಿಸ್ ಜಾರಿ ಮಾಡುತ್ತಿದೆ. ಆದರೆ, ಸರ್ಕಾರಿ ಇಲಾಖೆಗಳ ಬಾಕಿ ನೀರಿನ ಬಿಲ್ ಮಾತ್ರ ಪ್ರತಿ ವರ್ಷ ಏರುತ್ತಲೇ ಇದೆ.

ಇನ್ನು ಬಡ್ಡಿ ಎಷ್ಟು ಸಂಗ್ರಹವಾಗಬೇಕಿದೆ ಎಂದು ನೋಡುವುದಾದ್ರೆ, ರಾಜ್ಯ ಸರ್ಕಾರಿ ಇಲಾಖೆಗಳ ಬಾಕಿ ಬಡ್ಡಿ 8.50 ಕೋಟಿ ರೂಪಾಯಿ, ಕೇಂದ್ರ ಸರ್ಕಾರ ಇಲಾಖೆಗಳ ಬಾಕಿ ಬಡ್ಡಿ 1.01ಕೋಟಿ ರೂಪಾಯಿ, ಬಿಬಿಎಂಪಿ ಬಾಕಿ ಬಡ್ಡಿಯ ಮೊತ್ತ 9.17 ಕೋಟಿ ರೂಪಾಯಿ, ನಿಗಮ ಮಂಡಳಿ ಮೇಲಿನ ಬಡ್ಡಿ 2.14 ಕೋಟಿ ರೂಪಾಯಿ, ರಕ್ಷಣಾ ಇಲಾಖೆ ಮೇಲಿನ ಬಾಕಿ ಬಡ್ಡಿ 72 ಲಕ್ಷ ರೂಪಾಯಿ. ಹೀಗೆ ಒಟ್ಟು ಬಡ್ಡಿಯ ಮೊತ್ತ 21.56 ಕೋಟಿ ರೂಪಾಯಿ ಆಗಿದೆ.

ಇನ್ನು ಜಲಮಂಡಳಿಯು ವಾರ್ಷಿಕವಾಗಿ ಸುಮಾರು 130 ಕೋಟಿ ರೂ. ಆದಾಯ ಕೊರತೆಯನ್ನು ಎದುರಿಸುತ್ತಿದೆ. ಸುಮಾರು 500 ಕೋಟಿ ರೂಪಾಯಿ ವಿದ್ಯುತ್ ಬಿಲ್ ರೂಪದಲ್ಲಿ ಪಾವತಿಸುತ್ತದೆ. ತನ್ನ ಪ್ರಮುಖ ಆದಾಯ ಸಂಗ್ರಹದಲ್ಲಿ ಸುಮಾರು ಶೇ. 80 ನೀರಿನ ಬಿಲ್ ಸಂಗ್ರಹದ ಮೂಲಕ ಬರುತ್ತದೆ. ಪರಿಸ್ಥಿತಿ ಹೀಗಿದ್ದಾಗ ಸರ್ಕಾರಿ ಇಲಾಖೆಗಳೇ ಕೋಟ್ಯಂತರ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿರುವುದು ವಿಪರ್ಯಾಸವೇ ಸರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.