ETV Bharat / state

ಪಾನಮತ್ತರಾಗಿದ್ದ ವಿದೇಶಿ‌ ಮಹಿಳೆಯರಿಂದ ಪೊಲೀಸರ ಮೇಲೆ ಹಲ್ಲೆ

author img

By

Published : Aug 29, 2022, 2:55 PM IST

ಕಂಠಪೂರ್ತಿ ಕುಡಿದ ವಿದೇಶಿ ಮಹಿಳಾಮಣಿಗಳು ನಿಗದಿತ ಅವಧಿ‌ ಮುಗಿದರೂ ಸ್ಥಳದಿಂದ ಹೋಗದೆ ಪಬ್ ಸಿಬ್ಬಂದಿ ಜೊತೆ ತಗಾದೆ ತೆಗೆದಿದ್ದರು.‌‌ ಇದೇ ವೇಳೆ ರೌಂಡ್ಸ್​ನಲ್ಲಿ ಹೊಯ್ಸಳ ಪೊಲೀಸರು ಗಮನಿಸಿ ವಿಚಾರಿಸಿದ್ದಾರೆ.‌

drunken-foreign-women-attacked-on-police
ಪಾನಮತ್ತರಾಗಿದ್ದ ವಿದೇಶಿ‌ ಮಹಿಳೆಯರಿಂದ ಪೊಲೀಸರ ಮೇಲೆ ಹಲ್ಲೆ

ಬೆಂಗಳೂರು : ಮದ್ಯ ಕುಡಿದ ಮತ್ತಿನಲ್ಲಿ ಅನುಚಿತ ವರ್ತನೆ ತೋರಿದ ಅಫ್ರಿಕನ್‌ ಮಹಿಳೆಯರನ್ನು ಪ್ರಶ್ನಿಸಲು ಮುಂದಾಗಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿಗ್ರೇಡ್ ರಸ್ತೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ನೈಜೀರಿಯಾ ಮೂಲದ ಪೀಸ್ ಪರ್ನಾಷ್ ಹಾಗೂ ಜೂಲಿಯ ವಾಂಜೀರೋ ಸೇರಿದಂತೆ ಮೂವರು ಮಹಿಳೆಯರು ನಗರದ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ವೀಕೆಂಡ್​ ಆಗಿದ್ದರಿಂದ ಬಿಗ್ರೇಡ್ ರೋಡ್​ನಲ್ಲಿರುವ ಪಬ್ ಆ್ಯಂಡ್ ರಸ್ಟೋರೆಂಟ್​ವೊಂದಕ್ಕೆ ಬಂದಿದ್ದರು. ಕಂಠಪೂರ್ತಿ ಕುಡಿದ ಮಹಿಳಾಮಣಿಗಳು ನಿಗದಿತ ಅವಧಿ‌ ಮುಗಿದರೂ ಸ್ಥಳದಿಂದ ಹೋಗದೆ ಪಬ್ ಸಿಬ್ಬಂದಿ ಜೊತೆ ತಗಾದೆ ತೆಗೆದಿದ್ದರು.‌‌ ಇದೇ ವೇಳೆ ರೌಂಡ್ಸ್​ನಲ್ಲಿ ಹೊಯ್ಸಳ ಪೊಲೀಸರು ಗಮನಿಸಿ ವಿಚಾರಿಸಿದ್ದಾರೆ.‌

ಪಾನಮತ್ತರಾಗಿದ್ದ ವಿದೇಶಿಯರಿಗೆ ಪ್ರಶ್ನಿಸಿ ಮನೆಗೆ ಹೋಗುವಂತೆ ತಾಕೀತು ಮಾಡಿದ್ದಾರೆ. ಇದರಿಂದ ಕೆರಳಿ‌ದ ಮಹಿಳೆಯರು ಪೊಲೀಸರ ವಿರುದ್ಧವೇ ಮಾತನಾಡಿದ್ದಾರೆ. ನೋಡು-ನೋಡುತ್ತಿದ್ದಂತೆ ಮಾತಿನ ಚಕಮಕಿ‌ ನಡೆಸಿದ ಮಹಿಳೆಯರು ಪೊಲೀಸರ ಮೇಲೆಯೇ ಕೈ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಮಹಿಳಾ ಪಿಎಸ್ಐ ಅನ್ನು ಕರೆಯಿಸಿಕೊಂಡು ವಶಕ್ಕೆ‌ ಪಡೆದು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಇಂದು ವಿಚಾರಣೆಗೆ ಹಾಜರಾಗುವಂತೆ‌ ಪೊಲೀಸರು ತಿಳಿಸಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.