ಬೆಂಗಳೂರು: ನಿರ್ಮಾಪಕ ಶಂಕರೇಗೌಡ ಹಾಗೂ ಬಿಗ್ಬಾಸ್ ಸ್ಪರ್ಧಿ ಮಸ್ತಾನ್ ಚಂದ್ರ ಮನೆ ಮೇಲಿನ ದಾಳಿ ಪ್ರಕರಣದ ತನಿಖೆಯನ್ನು ಗೋವಿಂದಪುರ ಪೊಲೀಸರು ಚುರುಕುಗೊಳಿಸಿದ್ದಾರೆ.
ಈ ಕುರಿತಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಸಂಜಯನಗರದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಸಿನಿಮಾ ಮಾತುಕತೆ ನಡೆಸುವ ಹೆಸರಲ್ಲಿ ನಿರ್ಮಾಪಕ ಶಂಕರೇಗೌಡ ಡ್ರಗ್ ಪಾರ್ಟಿ ಆಯೋಜನೆ ಮಾಡುತ್ತಿದ್ದರಂತೆ. ಈ ಪಾರ್ಟಿಗಳಿಗೆ ಡ್ರಗ್ ಪೆಡ್ಲರ್ಗಳಾದ ಫಯೂಮ್ ಹಾಗೂ ಜಾನ್ ಡ್ರಗ್ ಸರಬರಾಜು ಮಾಡುತ್ತಿದ್ದರಂತೆ. ಇವರಿಂದ ಪಡೆದ ಡ್ರಗ್ಸ್ನ್ನು ಸೆಲೆಬ್ರಿಟಿಗಳಿಗೆ ಮಸ್ತಾನ್ ಸರಬರಾಜು ಮಾಡುತ್ತಿದ್ದು, ಡ್ರಗ್ಸ್ ಸರಬರಾಜು ಹಾಗೂ ವಿತರಣೆ ಮಾಡಲು 'ಒನ್ ಲವ್' ಎನ್ನುವ ಕೋಡ್ವರ್ಡ್ ಇಡಲಾಗಿತ್ತು ಎಂಬ ಮಾಹಿತಿ ಬೆಳೆಕಿಗೆ ಬಂದಿದೆ.
ನಣಿಮಣಿಯರಿಗೆ ಶುರುವಾಯ್ತು ಟೆನ್ಶನ್!
ನಿರ್ಮಾಪಕ ಶಂಕರೇಗೌಡ ಹಾಗೂ ಮಸ್ತಾನ್ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ನಟಿ ಮಣಿಯರಾದ ಸಂಜನಾ ಹಾಗೂ ರಾಗಿಣಿ ಹಾಜರಾಗುತ್ತಿದ್ದರು ಎಂಬ ಮಾಹಿತಿಯನ್ನು ಮಸ್ತಾನ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಅಲ್ಲದೇ ಶಂಕರೇಗೌಡನ ನಿವಾಸದಲ್ಲಿ ತಡರಾತ್ರಿ ಏರ್ಪಡಿಸುತ್ತಿದ್ದ ಪಾರ್ಟಿಗಳಿಗೆ ತಮಿಳು, ತೆಲುಗು ಚಿತ್ರರಂಗದ ಹಲವು ನಿರ್ಮಾಪಕರು ನಟ, ನಟಿಯರು ಹಾಜರಾಗುತ್ತಿದ್ದರು. ನಟಿ ಮಣಿಯರನ್ನು ಮುಂದಿಟ್ಟಕೊಂಡು ಪಾರ್ಟಿಯಲ್ಲಿ ಡ್ರಗ್ಸ್ ಸಪ್ಲೈ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.
ಓದಿ: ಗೋಕರ್ಣದಲ್ಲಿ ಶಿವರಾತ್ರಿ ಸಂಭ್ರಮ: ಆತ್ಮಲಿಂಗದ ದರ್ಶನ ಪಡೆದ ಭಕ್ತರು
ಮೊಬೈಲ್ ಸೀಜ್ ಮಾಡಿ ತನಿಖೆ ನಡೆಸುತ್ತಿರುವ ಪೊಲೀಸರು:
ಮಸ್ತಾನ್ ಹಾಗೂ ಶಂಕರೇಗೌಡರ ಮೊಬೈಲ್ಗಳನ್ನು ಪೊಲೀಸರು ಸೀಜ್ ಮಾಡಿ ರಿಟ್ರಿವಲ್ ಮಾಡುತ್ತಿದ್ದು, ಇವರಿಬ್ಬರ ಮೊಬೈಲ್ಗಳನಲ್ಲಿ ಡ್ರಗ್ ಪಾರ್ಟಿ ಆಯೋಜನೆಯ ಹಲವು ಫೋಟೋ, ವಿಡಿಯೋ ಲಭ್ಯವಾಗಿವೆ. ಸ್ಯಾಂಡಲ್ವುಡ್ ಡ್ರಗ್ ಕೇಸ್ನಲ್ಲಿ ವಿಚಾರಣೆ ಎದುರಿಸಿದ್ದ ಬಹುತೇಕ ಪಾರ್ಟಿ ಫೋಟೋಗಳು ಹಾಗೂ ವಿಡಿಯೋಗಳು ಸೇರಿದಂತೆ ಮಹತ್ವದ ಸಾಕ್ಷ್ಯಗಳು ಪೊಲೀಸರ ಕೈ ಸೇರಿದೆ.
ಕಳೆದ ಬಾರಿ ಕಾಟನ್ಪೇಟೆ ಡ್ರಗ್ ಕೇಸ್ನಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಹಲವು ನಟ - ನಟಿಯರು ಬಚಾವಾದೆವು ಎಂದು ನಿಟ್ಟುಸಿರು ಬಿಟ್ಟಿದ್ದರು. ಸದ್ಯ ಮಸ್ತಾನ್ ನಶೆ ಜಾಲದಲ್ಲಿ ಪೊಲೀಸರ ಖೆಡ್ಡಾಗೆ ಬಿದ್ದಿರುವುದರಿಂದ ಯ್ಯಾಯಾರಿಗೆ ಪೊಲೀಸ್ ನೋಟಿಸ್ ಬರಲಿದೆ ಎಂಬ ಟೆನ್ಶನ್ನಲ್ಲಿ ಸ್ಟಾರ್ ನಟ-ನಟಿಯರಿದ್ದಾರೆ.