ETV Bharat / state

ಡ್ರಗ್ಸ್​​ ಪ್ರಕರಣ: ಆಳ್ವಾ ಬಗ್ಗೆ ಸಿಗದ ಮಾಹಿತಿ... ರಿಕ್ಕಿ ರೈ ಮೊಬೈಲ್​​ ಎಫ್​ಎಸ್​​ಎಲ್​ಗೆ ರವಾನೆ

author img

By

Published : Oct 7, 2020, 8:21 AM IST

ಆದಿತ್ಯಾ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇರೆಗೆ ಸಿಸಿಬಿ ರಿಕ್ಕಿ ರೈ ವಿಚಾರಣೆ ನಡೆಸಿದರೂ ಆದಿತ್ಯಾ ಆಳ್ವಾ ಬಗ್ಗೆ ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ. ಹೀಗಾಗಿ ರಿಕ್ಕಿ ರೈ ಮೊಬೈಲ್​ ಜಪ್ತಿ ಮಾಡಿರುವ ಸಿಸಿಬಿ ಪೊಲೀಸರು, ಎಫ್​​ಎಸ್​​ಎಲ್​​ಗೆ ರವಾನೆ ಮಾಡಿದ್ದಾರೆ.

Drugs case: CCB investigated to Ricky Rye
ರಿಕ್ಕಿ ವಿಚಾರಣೆ ನಡೆಸಿದ ಸಿಸಿಬಿ

ಬೆಂಗಳೂರು: ಡ್ರಗ್ಸ್​​ ಪ್ರಕರಣದ ಎ6 ಆರೋಪಿ ಆದಿತ್ಯಾ ಆಳ್ವಾನಿಗಾಗಿ ಸಿಸಿಬಿ ಪೊಲೀಸರು ಶೋಧ ನಡೆಸಿದ್ದು, ಇದುವರೆಗೆ ಆತನ ಸುಳಿವು ಸಿಕ್ಕಿಲ್ಲ. ಮಾಜಿ ಭೂಗತ ದೊರೆ ದಿ. ಮುತ್ತಪ್ಪ ರೈ ಪುತ್ರನ ಜೊತೆ ಲಿಂಕ್ ಹೊಂದಿರುವ ಆರೋಪದ ಮೇರೆಗೆ ದಾಳಿ ನಡೆಸಲಾಗಿತ್ತು. ಡ್ರಗ್ಸ್​​ ಕೇಸ್ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗುತ್ತಿದ್ದ ಹಾಗೆ ಆದಿತ್ಯಾ ಆಳ್ವಾ ಸೇರಿ ಇನ್ನಿಬ್ಬರು ಪ್ರಮುಖ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.

ಆದರೆ ಆದಿತ್ಯಾ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇರೆಗೆ ಸಿಸಿಬಿ ರಿಕ್ಕಿ ರೈ ವಿಚಾರಣೆ ನಡೆಸಿದರೂ ಆದಿತ್ಯಾ ಆಳ್ವಾ ಬಗ್ಗೆ ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ ಎನ್ನಲಾಗಿದೆ. ಹೀಗಾಗಿ ರಿಕ್ಕಿ ರೈ ಮೊಬೈಲ್​ ಜಪ್ತಿ ಮಾಡಿರುವ ಸಿಸಿಬಿ ಪೊಲೀಸರು, ಎಫ್​​ಎಸ್​​ಎಲ್​​ಗೆ ರವಾನೆ ಮಾಡಿದ್ದಾರೆ. ಯಾಕಂದರೆ ಆದಿತ್ಯಾ ಆಳ್ವಾ, ರಿಕ್ಕಿ ಜೊತೆ ಸಂಪರ್ಕ ಇರುವ ವಿಚಾರ ತನಿಖೆ ವೇಳೆ ಬಯಲಾಗಿದೆ‌. ಹಾಗೆಯೇ ಇಬ್ಬರು ಸ್ನೇಹಿತರಾಗಿದ್ದು, ತಲೆಮರೆಸಿಕೊಳ್ಳಲು ಸಹಾಯ ಮಾಡಿರುವ ಆರೋಪ ಕೂಡ ಇದೆ. ಹೀಗಾಗಿ ಸದ್ಯ ಸಿಸಿಬಿ ಪೊಲೀಸರು ರಿಕ್ಕಿ ಮೊಬೈಲ್ ಎಫ್​​ಎಸ್​ಎಲ್​​ಗೆ ರವಾನೆ ಮಾಡಿ ಮೊಬೈಲ್​​ನಲ್ಲಿ ಇರುವ ಕೆಲ ಮಾಹಿತಿ ಕಲೆ‌ಹಾಕಲಿದ್ದಾರೆ ಎನ್ನಲಾಗಿದೆ.‌

ಮೊಬೈಲ್ ರಿಟ್ರೈವ್​ ಆದರೆ ಸಂಕಷ್ಟ: ಇನ್ನು ರಿಕ್ಕಿ ರೈ ಮೊಬೈಲ್ ರಿಟ್ರೈವ್​ ಆದರೆ ಸಂಕಷ್ಟ ಪಕ್ಕ. ಮೊಬೈಲ್ ರಿಟ್ರೈವ್​ ಅದರೆ ಆರೋಪಿಗಳ ಜೊತೆ ರಿಕ್ಕಿ ಸಂಪರ್ಕ ಏನು ಅನ್ನೋದರ ಬಗ್ಗೆ ಮಾಹಿತಿ ದೊರೆಯಲಿದೆ. ಹಾಗೆಯೇ ರಿಕ್ಕಿ ಬಂಧಿತ ಪೇಜ್ 3 ಪಾರ್ಟಿ ಆಯೋಜಕರು ಸೇರಿ ಡ್ರಗ್ಸ್​​ ಪೆಡ್ಲರ್​​ಗಳ ಸ್ನೇಹ ಹೊಂದಿದ್ದಾನೆ. ಸದ್ಯ ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡದ ರಿಕ್ಕಿ ಮೊಬೈಲ್ ರಿಟ್ರೈವ್​ ಆದ ನಂತರ ವಿಚಾರಣೆ ಎದುರಿಸುವುದು ಅನಿವಾರ್ಯವಾಗಿದೆ. ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.