ಬೆಂಗಳೂರು: ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಕೇರಳ ಮೂಲದ ಸಹಜೀವನ (ಲಿವಿಂಗ್ ಟುಗೇದರ್) ನಡೆಸುತ್ತಿದ್ದ ಟ್ಯಾಟೂ ಕಲಾವಿದರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಲಿವಿಂಗ್ ಟುಗೇದರ್ನಲ್ಲಿದ್ದ ಕಲಾವಿದರಾದ ಸಿಗಲ್ ವರ್ಗಿಸ್ ಹಾಗೂ ವಿಷ್ಣು ಪ್ರಿಯಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲಂಬಿಯಾದ ಕುಖ್ಯಾತ ಕೊಕೇನ್ ಫೆಕ್ಲರ್‌ನ ಭಾವಚಿತ್ರ ಪತ್ತೆಯಾಗಿದೆ. 25 ಲಕ್ಷ ರೂಪಾಯಿ ಮೌಲ್ಯದ ಡ್ರಗ್ ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ತಿಳಿಸಿದರು.
ಕೊಲಂಬಿಯಾದ ಕೊಕೇನ್ ಫೆಡ್ಲರ್ ಪಬ್ಲೊ ಎಸ್ಕೊಬರ್‌ನ ರೋಲ್ ಮಾಡೆಲ್ ಮಾಡಿಕೊಂಡು ಆತನಂತೆ ತಾವೂ ಮಾದಕ ಲೋಕದ ದೊರೆಯಾಗಬೇಕು ಎಂಬ ಗುರಿಯನ್ನು ಬಂಧಿತ ಆರೋಪಿಗಳು ಹೊಂದಿದ್ದರು. ಆರೋಪಿಗಳು ತಮ್ಮ ಗ್ರಾಹಕರಿಗೆ ನಿರ್ದಿಷ್ಟವಾದ ಸ್ಥಳಗಳಲ್ಲಿ ಅಂದರೆ ಮರದ ಬಳಿ, ರಸ್ತೆ ಬದಿಯ ಕಸದ ತೊಟ್ಟಿಗಳ ಬಳಿ ಡ್ರಗ್ಸ್ ಇಟ್ಟು ಆ ಸ್ಥಳದ ಫೋಟೊ ಕಳುಹಿಸುತ್ತಿದ್ದರು ಎಂದು ತಿಳಿಸಿದರು.
ಆನ್ಲೈನ್ ಮೂಲಕ ಹಣ ವರ್ಗಾವಣೆ: ಆರೋಪಿಗಳು ಆನ್ಲೈನ್ ಮೂಲಕ ಹಣ ಪಡೆಯುತ್ತಿದ್ದರು. ಇದರಿಂದ ಡ್ರಗ್ಸ್ ಪೆಡ್ಲರ್‌ಗಳಿಗೂ ಗ್ರಾಹಕರಿಗೂ ಮುಖಾಮುಖಿಯಾಗುತ್ತಿರಲಿಲ್ಲ. ಅಲ್ಲದೇ ಡ್ರಗ್ಸ್ ಮಾರಾಟ ಮಾಡಿದ ವ್ಯಕ್ತಿ ಯಾರು ಎಂಬುದು ಗ್ರಾಹಕರಿಗೆ ತಿಳಿಯದೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳಿಗೆ ಅನುಕೂಲವಾಗುತ್ತಿತ್ತು ಎಂದು ಮಾಹಿತಿ ನೀಡಿದರು.
ಚಂದಾಪುರದ ಫ್ಲಾಟ್ನಲ್ಲಿ ಮಾದಕ ವಸ್ತುಗಳು ವಶಕ್ಕೆ: ಚಂದಾಪುರದ ಫ್ಲಾಟ್ನಲ್ಲಿ ಶೇಖರಿಸಿದ್ದ 25 ಲಕ್ಷ ರೂ. ಮೌಲ್ಯದ 100 ಗ್ರಾಂ ಎಂ.ಡಿ.ಎಂ.ಎ, 150 ಗ್ರಾಂ ಎಸ್ ಎಲ್.ಡಿ ಮಾತ್ರೆಗಳು, ಡ್ರಗ್ಸ್ ವ್ಯವಹಾರದ ಡೈರಿ, ಕುಖ್ಯಾತ ಡ್ರಗ್ ಪೆಡ್ಲರ್ ಭಾವಚಿತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
(ಓದಿ: ಅಂಗವೈಕಲ್ಯ ಮೆಟ್ಟಿ ನಿಂತ ಸಾಧಕರು: ವಿಶೇಷ ಚೇತನರಿಂದ ನಡೆಯುತ್ತಿದೆ ಮಿಟ್ಟಿ ಕೆಫೆ )