ETV Bharat / state

ದುಃಸ್ಥಿಯಲ್ಲಿರುವ ಕೆರೆ ಅಭಿವೃದ್ಧಿಗೆ ಹೈಟೆಕ್ ಸ್ಪರ್ಷ: ಕಾಮಗಾರಿಗೆ ಕೃಷ್ಣಬೈರೇಗೌಡ ಚಾಲನೆ

ಏರ್‌ಪೋರ್ಟ್ ರಸ್ತೆಯ ಏರ್ ಫೋರ್ಸ್ ಕೂಗಳತೆ ದೂರದಲ್ಲಿರುವ ಹುಣಸಮಾರನಹಳ್ಳಿ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ಸುಮಾರು 40ಲಕ್ಷ ರೂ. ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗೆ ಮಾಜಿ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು.

drive-to-the-lake-development-works-at-bangalore

author img

By

Published : Jan 28, 2020, 6:13 PM IST

ಬೆಂಗಳೂರು: ಬೆಂಗಳೂರು ನಿರ್ಮಾತೃ ಕೆಂಪೇಗೌಡರು ನಗರದಲ್ಲಿ ನೀರಿನ ಹಾಹಾಕಾರ ತಪ್ಪಿಸುವ ನಿಟ್ಟಿನಲ್ಲಿ ಹಲವಾರು ಕೆರೆಕಟ್ಟೆಗಳನ್ನು ನಿರ್ಮಿಸಿದ್ದರು. ಆದರೆ ನಗರೀಕರಣ ಪ್ರಭಾವಕ್ಕೊಳಗಾಗಿ ನಗರ ಹಾಗೂ ನಗರದ ಸುತ್ತಮುತ್ತಲ ಕೆರೆಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಆದರೆ, ಮುಚ್ಚಿ ಹೋಗಬೇಕಿದ್ದ ಕೆರೆಯನ್ನು ಪುನಶ್ಚೇತನಗೊಳಿಸಿ ಕೆರೆಗೆ ನೀರು ತುಂಬಿಸಿ ವಾಕಿಂಗ್ ಟ್ರಾಕ್ ಸೇರಿದಂತೆ ಇನ್ನಿತರ ಹೈಟೆಕ್ ಸೌಲಭ್ಯ ಕಲ್ಪಿಸಲು ಹುಣಸಮಾರನಹಳ್ಳಿ ಗ್ರಾಮ ಪಂಚಾಯಿತಿ ಮುಂದಾಗಿದೆ.

ನಗರದ ಏರ್‌ಪೋರ್ಟ್ ರಸ್ತೆಯ ಏರ್ ಫೋರ್ಸ್ ಕೂಗಳತೆ ದೂರದಲ್ಲಿರುವ ಹುಣಸಮಾರನಹಳ್ಳಿ ಕೆರೆ ಸುಮಾರು 26 ಎಕರೆ ವಿಸ್ತೀರ್ಣ ಹೊಂದಿದೆ. ಈ ಕೆರೆ ನಿರ್ಲಕ್ಷ್ಯ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಟಿಗೆ ಸಿಲುಕಿ ವಿನಾಶದ ಅಂಚಿನಲ್ಲಿತ್ತು. ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ ಈ ಕೆರೆ ದುರಸ್ತಿಗೆ ಹಣ ಬಿಡುಗಡೆ ಮಾಡಿತ್ತು. ಆದರೆ, ಅಭಿವೃದ್ದಿ ಕಾಮಗಾರಿಯತ್ತ ಗಮನ ಹರಿಸಿರಲಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶರವಣ ಅಧಿಕಾರವಹಿಸಿಕೊಂಡ ಬಳಿಕ ಶಾಸಕ ಕೃಷ್ಣ ಬೈರೇಗೌಡರ ಮಾರ್ಗದರ್ಶನದಂತೆ ಕೆರೆ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ.

ದುಸ್ಥಿಯಲ್ಲಿರುವ ಕೆರೆ ಅಭಿವೃದ್ಧಿಗೆ ಹೈಟೆಕ್ ಸ್ಪರ್ಷ

ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ಸುಮಾರು 40ಲಕ್ಷ ರೂ. ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗೆ ಮಾಜಿ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹುಣಸಮಾರನಹಳ್ಳಿ ಕೆರೆ ಅಭಿವೃದ್ಧಿ ಪಡಿಸಬೇಕೆಂಬುದು ಈ ಭಾಗದ ಜನ ಬಹಳ ಕಾಲದಿಂದ ಮನವಿ ಮಾಡುತ್ತಿದ್ದರು. ಇದೀಗ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದು ಕೆರೆಯ ಹೂಳು ಎತ್ತಿ ತ್ಯಾಜ್ಯ ನೀರನ್ನು ಸಂಸ್ಕರಿದ ನೀರನ್ನು ತುಂಬಿಸಲಾಗುತ್ತಿದೆ. ಜೊತೆಗೆ, ವಾಕಿಂಗ್ ಟ್ರ್ಯಾಕ್ ಸೇರಿದಂತೆ ಉದ್ಯಾನ ನಿರ್ಮಿಸುವ ಮೂಲಕ ಕೆರೆಯ ಅಂದ ಹೆಚ್ಚಿಸಲಾಗುವುದು ಎಂದರು.

ಈ ಕೆರೆಗೆ ನೀರು ತುಂಬಿಸಿದ ಬಳಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಲಿದ್ದು, ಕುಡಿವ ನೀರಿನ ಬವಣೆಗೆ ಕೊಂಚವಾದರೂ ಪರಿಹಾರ ದೊರಕಲಿದೆ ಎಂದ ಅವರು, ಜನತೆ ನೀರಿನ ಮರು ಬಳಕೆಗೆ ಒತ್ತು ನೀಡಬೇಕು ಇದರಿಂದ ಭವಿಷ್ಯದಲ್ಲಿ ಉಂಟಾಗುವ ನೀರಿನ ಬವಣೆ ತಗ್ಗಿಸಬಹುದು ಎಂದು ಹೇಳಿದರು.

ಮುಂದಿನ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗ್ರಾ.ಪಂ. ಅಧ್ಯಕ್ಷ ಶರವಣ ಪಣತೊಟ್ಟಿದ್ದಾರೆ. ಹಾಗೆಯೇ ನಗರದ ಸುತ್ತಮುತ್ತ ದುಃಸ್ಥಿತಿಯಲ್ಲಿರುವ ಕೆರೆಗಳನ್ನು ಪುನಶ್ಚೇತನಗೊಳಿಸಲು ಸ್ಥಳೀಯ ಆಡಳಿತ ಮುಂದಾದರೆ, ಮುಚ್ಚಿಹೋಗುವ ಅಂಚಿನಲ್ಲಿರುವ ಕೆರೆಗಳಿಗೆ ಮರುಜೀವ ನೀಡುವುದರ ಜೊತೆಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ನೀರಿನ ಬವಣೆ ನೀಗಿಸಬಹುದಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.