ETV Bharat / state

ಸಿಎಎ ಕಾಯ್ದೆ ವಿರೋಧಿಸಿ ಶಾಹೀನ್ ಶಾಲೆಯಲ್ಲಿ ನಾಟಕ ಪ್ರಕರಣ.. ವಿದ್ಯಾರ್ಥಿಗಳನ್ನ ಪ್ರಶ್ನಿಸಿದ ಪೊಲೀಸರ ವಿರುದ್ಧ ತನಿಖೆ..

author img

By

Published : Sep 6, 2021, 4:27 PM IST

ಪೊಲೀಸರು ಮಕ್ಕಳನ್ನ ವಿಚಾರಣೆ ನಡೆಸಿದ ಹಿನ್ನೆಲೆ ಮಕ್ಕಳು ಮಾನಸಿಕ ಆಘಾತಕ್ಕೊಳಗಾಗಿದ್ದಾರೆ ಎಂದು ಹೈಕೋರ್ಟ್​ಗೆ ವಕೀಲ ನಾರಾಯಣ ಜ್ಯೋತಿ ಜವಾಹರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಪೊಲೀಸ್ ಅಧಿಕಾರಿಗಳು 96 ಅಪ್ರಾಪ್ತ ಮಕ್ಕಳ ವಿಚಾರಣೆ ನಡೆಸಿದಾಗ ಸಮವಸ್ತ್ರದ ಜೊತೆ ಗನ್​ಗಳನ್ನ ತಂದಿದ್ದರು ಎಂದು ಈ ಅರ್ಜಿಯಲ್ಲಿ ತಿಳಿಸಲಾಗಿದೆ..

Drama performance against the CAA Act at Bidar School case
ಬೀದರ್ ಶಾಲೆಯಲ್ಲಿ ಸಿಎಎ ಕಾಯ್ದೆ ವಿರೋಧಿಸಿ ನಾಟಕ ಪ್ರದರ್ಶನ ನೀಡಿದ ಪ್ರಕರಣ

ಬೆಂಗಳೂರು : ಬೀದರ್ ಶಾಲೆಯಲ್ಲಿ ಸಿಎಎ ಕಾಯ್ದೆ ವಿರೋಧಿಸಿ ನಾಟಕ ಪ್ರದರ್ಶನ ನೀಡಿದ ಪ್ರಕರಣಕ್ಕೆ ಮತ್ತೆ ಮರುಜೀವ ಸಿಕ್ಕಿದೆ. ವಿದ್ಯಾರ್ಥಿಗಳನ್ನ ಪ್ರಶ್ನೆ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ಹೈಕೋರ್ಟ್​ಗೆ ರಾಜ್ಯ ಸರ್ಕಾರ ಹೇಳಿದೆ.

ಕಳೆದ ಶುಕ್ರವಾರ ನಡೆದ ಕೋರ್ಟ್ ವಿಚಾರಣೆಯಲ್ಲಿ ಬೀದರ್​ನ ಶಾಹೀನ್ ಶಾಲೆಯಲ್ಲಿ ಸಿಎಎ ಕಾಯ್ದೆ ವಿರೋಧಿಸಿ ನಾಟಕ ಪ್ರದರ್ಶನ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಅಪ್ರಾಪ್ತ ಮಕ್ಕಳನ್ನು ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಆಂತರಿಕ ತನಿಖೆ ನಡೆಸಲು ಸರ್ಕಾರ ಸೂಚಿಸಿದೆ ಎಂದು ಸರ್ಕಾರಿ ಪರ ವಕೀಲರು, ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠಕ್ಕೆ ತಿಳಿಸಿದರು. ಬಳಿಕ ಈ ಪ್ರಕರಣದ ವಿಚಾರಣೆಯನ್ನು ಅಕ್ಟೊಬರ್ 22ಕ್ಕೆ ಮುಂದೂಡಲಾಗಿದೆ.

ಆಗಸ್ಟ್ 16ರಂದು ಅಪ್ರಾಪ್ತ ಮಕ್ಕಳ ಹಕ್ಕುಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ತಿಳಿದಿರಬೇಕು ಎಂದು ಹೈಕೋರ್ಟ್ ಹೇಳಿತ್ತು. ವಿಚಾರಣೆ ಸಂದರ್ಭದಲ್ಲಿ ವಿಭಾಗೀಯ ಪೀಠ ಪೊಲೀಸ್ ಅಧಿಕಾರಿಗಳು ಮಕ್ಕಳ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಗನ್ ಜೊತೆ ನಾಲ್ಕು ಅಧಿಕಾರಿಗಳು ಪೊಲೀಸ್ ಸಮವಸ್ತ್ರದ ಜತೆ ಕಾಣಿಸಿದ್ದಾರೆ.

ಆದರೆ, ಡಿವೈಎಸ್ಪಿ ಬಸವೇಶ್ವರ ಅಪ್ರಾಪ್ತ ಮಕ್ಕಳ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಸಮವಸ್ತ್ರವನ್ನು ಧರಿಸಲಿಲ್ಲ ಎಂದು ಅಫಿಡವಿಟ್​ನಲ್ಲಿ ಹೇಳಲಾಗಿತ್ತು. ಜೊತೆಗೆ ಅಫಿಡವಿಟ್​ನ ಫೋಟೋದಲ್ಲಿ ಎರಡು ಶಾಲೆಯ ಹುಡುಗರು ಹಾಗೂ ಒಂದು ಹುಡುಗಿಯನ್ನ ವಿಚಾರಣೆ ನಡೆಸುತ್ತಿರುವುದನ್ನು ಪೀಠ ಗಮನಿಸಿದೆ.

ಪೊಲೀಸರು ಮಕ್ಕಳನ್ನ ವಿಚಾರಣೆ ನಡೆಸಿದ ಹಿನ್ನೆಲೆ ಮಕ್ಕಳು ಮಾನಸಿಕ ಆಘಾತಕ್ಕೊಳಗಾಗಿದ್ದಾರೆ ಎಂದು ಹೈಕೋರ್ಟ್​ಗೆ ವಕೀಲ ನಾರಾಯಣ ಜ್ಯೋತಿ ಜವಾಹರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಪೊಲೀಸ್ ಅಧಿಕಾರಿಗಳು 96 ಅಪ್ರಾಪ್ತ ಮಕ್ಕಳ ವಿಚಾರಣೆ ನಡೆಸಿದಾಗ ಸಮವಸ್ತ್ರದ ಜೊತೆ ಗನ್​ಗಳನ್ನ ತಂದಿದ್ದರು ಎಂದು ಈ ಅರ್ಜಿಯಲ್ಲಿ ತಿಳಿಸಲಾಗಿದೆ.

ಓದಿ: ಮೈಸೂರು ಗ್ಯಾಂಗ್​ರೇಪ್​ ಬಳಿಕ ಪೊಲೀಸರು ಅಲರ್ಟ್​ : ಪ್ರವಾಸಿತಾಣ, ನಿರ್ಜನ ಪ್ರದೇಶದಲ್ಲಿ ಹದ್ದಿನ ಕಣ್ಣು

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.