ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿನ ಮಣಿಪಾಲ್ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಯೂನಿಟ್ (ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಆರೈಕೆ ಘಟಕ) 25 ವರ್ಷ ಪೂರೈಸಿದೆ. ಅಲ್ಲದೇ, ಇದುವರೆಗೂ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದೆ ಎಂದು ಜಯನಗರ ಮಣಿಪಾಲ್ ಹಾಸ್ಪಿಟಲ್ಸ್‌ನ ಗಂಭೀರ ಸ್ಥಿತಿಯ ರೋಗಿಗಳ ಆರೈಕೆ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸುನಿಲ್ ಕಾರಂತ್ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋಪಾಲ್‌ದಾಸ್, ಈ 25 ವರ್ಷದಲ್ಲಿ ಅನೇಕ ಬೆಳವಣಿಗೆಗಳು ಐಸಿಯು ಘಟಕದಲ್ಲಿ ಆಗಿದ್ದು, ಜನರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಸಮರ್ಪಿತ ತಂಡವು 35,000 ಕ್ಕೂ ಹೆಚ್ಚು ರೋಗಿಗಳಿಗೆ ದಣಿವಿಲ್ಲದೇ ಸೇವೆ ಸಲ್ಲಿಸಿದೆ.
25 ವರ್ಷಗಳಲ್ಲಿ ವಿಭಾಗವು ಸಣ್ಣ 11 ಹಾಸಿಗೆಯ ಘಟಕದಿಂದ 4 ವಲಯಗಳ 50 ಹಾಸಿಗೆಯ ಘಟಕವಾಗಿ ಬೆಳೆದಿದೆ. ತೀವ್ರ ರೀತಿಯಲ್ಲಿ ಅಸ್ವಸ್ಥರಾಗಿರುವ ರೋಗಿಗಳನ್ನು ತಲುಪುವ ಸೇವೆಗಳನ್ನು ಪೂರೈಸುವ ಕ್ರಮವನ್ನು ಈ ತೀವ್ರ ನಿಗಾ ಘಟಕ ವಿಕಾಸಗೊಳಿಸಿದ್ದು, ಅದನ್ನು ಅಳವಡಿಸಿಕೊಂಡಿದೆ.
ಅಂತಹ ಗಂಭೀರ ರೀತಿಯಲ್ಲಿ ಅಸ್ವಸ್ಥರಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸಿಬ್ಬಂದಿ ಕೌಶಲ್ಯಪೂರ್ಣರು ಮತ್ತು ಅನುಭವಿಗಳಾಗಿರಬೇಕು. ಮಣಿಪಾಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಾರ್ಯಕ್ಷಮತೆಯೊಂದಿಗೆ ಚಿಕಿತ್ಸೆ ನೀಡಲು ವೈದ್ಯರ ಜೊತೆ ಜೊತೆಗೆ ಎಲ್ಲ ಸಿಬ್ಬಂದಿಗಳಿಗೂ ಅನೇಕ ತರಬೇತಿ ನೀಡಲಾಗುತ್ತದೆ. ಇದರಿಂದ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.
ಪ್ರಸ್ತುತ ಈ ವಿಭಾಗ ವಾರ್ಷಿಕ 3000ಕ್ಕೂ ಹೆಚ್ಚಿನ ರೋಗಿಗಳಿಗೆ ಸೇವೆ ನೀಡುತ್ತದೆ. ಇದರೊಂದಿಗೆ ಈ ತೀವ್ರ ನಿಗಾ ಘಟಕವು ದೇಶದಲ್ಲಿನ ಅತ್ಯಂತ ಹೆಚ್ಚಿನ ಚಟುವಟಿಕೆಯ ಘಟಕಗಳಲ್ಲಿ ಒಂದಾಗಿದೆ. ನಮ್ಮ ಐಸಿಯು ತಂಡದ ಪ್ರಯತ್ನಗಳು ಮತ್ತು ಸಮರ್ಪಣಾ ಕಾರ್ಯಗಳು 5,000 ಗಂಭೀರ ಅಸ್ವಸ್ಥತೆಯ ರೋಗಿಗಳು ಯಶಸ್ವಿಯಾಗಿ ಮತ್ತು ಕ್ಷಿಪ್ರಗತಿಯಲ್ಲಿ ಚೇತರಿಕೆ ಹೊಂದಲು ನೆರವಾಗಿವೆ ಎಂದು ಕಾರಂತ್ ವಿವರಿಸಿದರು.