ETV Bharat / state

2ನೇ ಹಂತದ ಕ್ಲಿನಿಕಲ್ ಟ್ರಯಲ್​​​ಗೆ ಅನುಮತಿ ನೀಡಿ; ಸಿಎಂ ಗೆ ಡಾ. ಕಜೆ ಮನವಿ

ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ ಅವರು ಇಂದು ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ, ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಕುರಿತು ಸಿಎಂ ಜೊತೆ ಮಾತುಕತೆ ನಡೆಸಿದರು.

ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ
ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ
author img

By

Published : Jul 22, 2020, 11:53 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಆಯುರ್ವೇದ ಕ್ಲಿನಿಕಲ್ ಟ್ರಯಲ್ ಮುಂದುವರೆಸುವ ಸಂಬಂಧ, ಅನುಮತಿ ನೀಡುವಂತೆ ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಜೊತೆಯಲ್ಲಿ ಡಾ. ಗಿರಿಧರ್ ಕಜೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದರು. ಸಿಎಂ ಯಡಿಯೂರಪ್ಪ ಜೊತೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಆಯುರ್ವೇದ ಔಷಧಿ ಬಳಸುವ ಸಂಬಂಧ ಮಹತ್ವದ ಮಾತುಕತೆ ನಡೆಸಿದರು.

ಈಗಾಗಲೇ 10 ಸೋಂಕಿತರ ಮೇಲೆ ನಡೆದಿರುವ ಕ್ಲಿನಿಕಲ್ ಟ್ರಯಲ್ ಶೇ.100 ರಷ್ಟು ಯಶಸ್ವಿಯಾಗಿರುವ ಹಿನ್ನೆಲೆ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಐಸಿಎಂಆರ್​ನಿಂದ ಅನುಮತಿ ಕಲ್ಪಿಸಿಕೊಡುವಂತೆ ಮನವಿ ಮಾಡಿದರು. ಟ್ರಯಲ್​ಗೆ ಬೇಕಿರುವ ಸಿದ್ದತೆ ಮಾಡಿಕೊಂಡಿದ್ದು, ಅನುಮತಿ ಸಿಗುತ್ತಿದ್ದಂತೆ ಕಾರ್ಯೋನ್ಮುಖರಾಗುವುದಾಗಿ ಸಿಎಂಗೆ ಮನವರಿಕೆ ಮಾಡಿಕೊಟ್ಟರು.

ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ
ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು, ಔಷಧಿ ಪ್ರಯೋಗ ನಡೆಸಲು ಕಾನೂನು ಸಂಕೋಲೆಗಳು ಸಾಕಷ್ಟಿವೆ. ಅವುಗಳನ್ನು ನಿವಾರಿಸಿಕೊಳ್ಳಲು ಸಮಯವಾಗಲಿದೆ. ಹಾಗಾಗಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಆಯುರ್ವೇದ ಔಷಧ ನೀಡಿದರೆ ಅವರು ಕೊರೊನಾ ಪಾಸಿಟಿವ್ ಆಗುವುದನ್ನು ತಡೆಯಬಹುದು. ಹಾಗಾಗಿ ಈ ಪ್ರಯೋಗಕ್ಕೆ ಕಾನೂನು ರೀತಿ ಅವಕಾಶ ಕಲ್ಪಿಸಬೇಕು, ಸರ್ಕಾರದ ಮೂಲಕವೇ ಇದು ನಡೆಯಬೇಕು, ಅಗತ್ಯ ಔಷಧಿ ಪೂರೈಕೆ ಮಾಡಲು ಸಿದ್ದರಿದ್ದೇವೆ ಎಂದು ಸಿಎಂ ಮುಂದೆ ಪ್ರಯೋಗದ ವಿವರವನ್ನು ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಎಲ್ಲವನ್ನೂ ಸಮಚಿತ್ತದಿಂದ ಆಲಿಸಿದ್ದು, ಪರಿಶೀಲಿಸಿ ವೈದ್ಯಕೀಯ ತಜ್ಞರ ತಂಡ ಹಾಗೂ ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.