ಬೆಂಗಳೂರು: ಭಾರತದ ಮೊದಲ ಕಾಂಟ್ಯಾಕ್ಟ್ಲೆಸ್ ರಿಮೋಟ್ ಹೆಲ್ತ್ ಮಾನಿಟರಿಂಗ್ ಕಂಪನಿಯಾಗಿರುವ ಡೊಝಿ, ನಗರದ ವಿಕ್ಟೋರಿಯಾ ಮತ್ತು ಇಎಸ್‍ಐಸಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಿಮೋಟ್ ಮಾನಿಟರಿಂಗ್ ಸಾಮರ್ಥ್ಯಗಳೊಂದಿಗೆ ಆಸ್ಪತ್ರೆಗಳಲ್ಲಿರುವ ರೋಗಿಗಳ ಆರೋಗ್ಯದ ಮೇಲೆ ಇದು ಮೇಲ್ವಿಚಾರಣೆ ನಡೆಸಲಿದೆ.
ಏನಿದು ಡೊಝಿ?
ಸಂಪರ್ಕವಿಲ್ಲದೆ ಅಂದರೆ ಕಾಂಟ್ಯಾಕ್ಟ್ಲೆಸ್ ಮೂಲಕ ರೋಗಿಗಳ ಆರೋಗ್ಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಡೊಝಿ 100 ಡಿವೈಸ್‍ಗಳನ್ನು ನಿಯೋಜನೆ ಮಾಡಿದೆ. ಇವುಗಳ ಮೂಲಕ ರೋಗಿಗಳ ಆರೋಗ್ಯ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಮತ್ತು ವೈದ್ಯರು ರೋಗಿಗಳನ್ನು ಖುದ್ದಾಗಿ ಸಂಪರ್ಕಿಸದೆ ಈ ಸಾಧನಗಳಿಂದ ಮೇಲ್ವಿಚಾರಣೆ ನಡೆಸಬಹುದಾಗಿದೆ.
ರೋಗಿಗಳ ಹೃದಯ ಬಡಿತದ ಪ್ರಮಾಣ, ಉಸಿರಾಟದ ಪ್ರಮಾಣ ಮತ್ತು ಆಮ್ಲಜನಕದ ಪ್ರಮಾಣ ಸೇರಿದಂತೆ ಇನ್ನಿತರೆ ಅಂಶಗಳನ್ನು ನಿಖರವಾಗಿ ಪಡೆದುಕೊಳ್ಳಲು ಈ ಡೊಝಿ ಸಾಧನಗಳು ಆಸ್ಪತ್ರೆಯ ಸಿಬ್ಬಂದಿಗೆ ನೆರವಾಗಲಿವೆ. ಈ ಮೂಲಕ ವೈದ್ಯಕೀಯ ಸಿಬ್ಬಂದಿ ರೋಗಿಯ ಪರಿಸ್ಥಿತಿಯನ್ನು ಅವಲೋಕನ ಮಾಡಿ ತ್ವರಿತವಾಗಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಅಂದರೆ ರೋಗಿಯ ಆರೋಗ್ಯ ಪರಿಸ್ಥಿತಿ ಬಿಗಡಾಯಿಸುವ ಮುನ್ನ ಅದರ ಅವಲೋಕನ ಮಾಡಿ ಅವರಿಗೆ ತಜ್ಞರಿಂದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.
ರೋಗಿಯ ಆರೋಗ್ಯ ಪರಿಸ್ಥಿತಿಯ ಮೇಲೆ ತೀವ್ರ ನಿಗಾ
ವೈದ್ಯರು ಮತ್ತು ಆರೋಗ್ಯ ರಕ್ಷಣೆ ತಂಡಗಳು ಒಂದೇ ಸ್ಕ್ರೀನ್‍ನಲ್ಲಿ ರೋಗಿಯ ಆರೋಗ್ಯ ಸ್ಥಿತಿಯನ್ನು ನಿರ್ವಹಣೆ ಮಾಡಬಹುದಾಗಿದೆ. ಇದರ ಪರಿಣಾಮ ನರ್ಸ್‍ಗಳು ಖುದ್ದಾಗಿ ರೋಗಿಯ ಬಳಿ ಪದೇ ಪದೆ ಹೋಗುವುದನ್ನು ಕಡಿಮೆ ಮಾಡುತ್ತದೆ. ಪ್ರತಿಯೊಬ್ಬ ರೋಗಿಗೂ ಕಸ್ಟಮ್ ಅಲರ್ಟ್‍ಗಳನ್ನು ಹಾಕಲಾಗಿರುತ್ತದೆ. ಇದು ವೈದ್ಯರಿಗೆ ಚಿಕಿತ್ಸೆ ನೀಡಲು ನೆರವಾಗುತ್ತದೆ ಮತ್ತು ರೋಗಿಯ ಆರೋಗ್ಯ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇಡಲು ಸಹಕಾರಿಯಾಗಲಿದೆ.
ಈ ಬಗ್ಗೆ ಮಾತನಾಡಿದ ಡೊಝಿ ಸಿಇಒ ಮತ್ತು ಸಹ ಸಂಸ್ಥಾಪಕ ಮುದಿತ್ ದಂಡವತೆ, ಬೆಂಗಳೂರಿನ ವಿಕ್ಟೋರಿಯಾ ಮತ್ತು ಇಎಸ್‍ಐಸಿ ಆಸ್ಪತ್ರೆಗಳೊಂದಿಗೆ ಪಾಲುದಾರಿಕೆ ಹೊಂದುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ತಮ್ಮ ಸಿಬ್ಬಂದಿಯನ್ನು ಸುರಕ್ಷಿತವಾಗಿಟ್ಟು ಸಾಧ್ಯವಾದಷ್ಟೂ ಅತ್ಯುತ್ತಮ ಆರೋಗ್ಯ ಸೇವೆಯನ್ನು ನೀಡುವುದು ಆರೋಗ್ಯ ರಕ್ಷಣೆ ಸಂಸ್ಥೆಗಳಿಗೆ ಸವಾಲಿನ ಕೆಲಸವಾಗಿದೆ. ಈ ಅವಧಿಯಲ್ಲಿ ರಿಮೋಟ್ ಹೆಲ್ತ್ ಕೇರ್ ಮಾನಿಟರಿಂಗ್ ಅತ್ಯಂತ ಸುರಕ್ಷಿತ ಮತ್ತು ಸಮರ್ಪಕವಾದ ವ್ಯವಸ್ಥೆಯಾಗಿದೆ. ಈ ಹಿನ್ನೆಲೆ ಡೊಝಿ ವೃದ್ಧ ರೋಗಿಗಳ ಆರೋಗ್ಯ ಸ್ಥಿತಿ ಬಿಗಡಾಯಿಸುವುದನ್ನು ತಪ್ಪಿಸುತ್ತದೆ ಮತ್ತು ಆರೋಗ್ಯ ಸಿಬ್ಬಂದಿ ನೇರವಾಗಿ ರೋಗಿಗಳನ್ನು ಭೇಟಿ ಮಾಡದೆ ಈ ವ್ಯವಸ್ಥೆಯಿಂದ ಆರೋಗ್ಯ ಪರಿಸ್ಥಿತಿಯನ್ನು ಅವಲೋಕಿಸಬಹುದಾಗಿದೆ ಎಂದು ತಿಳಿಸಿದರು.
ದೈಹಿಕ ಸಂಪರ್ಕವನ್ನು ಕಡಿಮೆ ಮಾಡಲು ಸುಧಾರಿತ ತಂತ್ರಜ್ಞಾನ
ಇಎಸ್‍ಐ ಆಸ್ಪತ್ರೆಯ ಜನರಲ್ ಮೆಡಿಸಿನ್‍ನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಹೆಚ್.ಆರ್.ಅವಿನಾಶ್ ಮಾತನಾಡಿ, ನಮ್ಮ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಮತ್ತು ನಮ್ಮ ವೈದ್ಯಕೀಯ ಹಾಗೂ ನರ್ಸಿಂಗ್ ಸಿಬ್ಬಂದಿಯ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಮತ್ತು ರೋಗಿಗಳೊಂದಿಗೆ ದೈಹಿಕ ಸಂಪರ್ಕವನ್ನು ಕಡಿಮೆ ಮಾಡಲು ಸುಧಾರಿತ ತಂತ್ರಜ್ಞಾನವನ್ನು ಸಜ್ಜುಗೊಳಿಸುತ್ತಿದ್ದೇವೆ ಎಂದರು.
ಹೆಚ್ಚಿನ ಸಂಖ್ಯೆಯ ಸಿಒವಿಐಡಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವುದರಿಂದ ರೋಗಿಗಳು ದೈಹಿಕವಾಗಿ ಸಂವಹನ ನಡೆಸುವ ವಾರ್ಡ್‍ಗಳಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡುವ ಮೂಲಕ ನರ್ಸ್‍ಗಳು ಮತ್ತು ವೈದ್ಯರನ್ನು ರಕ್ಷಿಸುವುದು ಮುಖ್ಯವಾಗಿದೆ. ಈ ದಿಸೆಯಲ್ಲಿ ಡೊಝಿಯನ್ನು ಬಳಸುವುದರಿಂದ ಸಂಪೂರ್ಣ ಮೇಲ್ವಿಚಾರಣಾ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲು ಸಮರ್ಥವಾಗಿದೆ. ನರ್ಸ್‍ಗಳು ಇನ್ನು ಮುಂದೆ ರೋಗಿಗಳ ಜೊತೆಗೆ ಗಂಟೆಗಟ್ಟಲೆ ಇರುವಂತಿಲ್ಲ ಮತ್ತು ಡೊಝಿ ಒದಗಿಸುವ ಡ್ಯಾಶ್‍ಬೋರ್ಡ್ ಮೂಲಕ ನೀಡುವ ಡೇಟಾಗಳ ಆಧಾರದಲ್ಲಿ ಮೇಲ್ವಿಚಾರಣೆ ಮಾಡಲು ವೈದ್ಯರಿಗೆ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಡೊಝಿ ಬಗೆಗಿನ ಹೆಚ್ಚಿನ ಮಾಹಿತಿ:
ವೈದ್ಯಕೀಯ ಸಾಧನಗಳಿಗೆ ಹೋಲಿಸಿದರೆ ಹೃದಯದ ಆರೋಗ್ಯ, ಉಸಿರಾಟ, ನಿದ್ರೆಯ ಗುಣಮಟ್ಟ ಮತ್ತು ಒತ್ತಡದ ಮಟ್ಟವನ್ನು 98.4% ನಿಖರತೆಯೊಂದಿಗೆ ಪತ್ತೆಹಚ್ಚುವ ಡೋಝಿ ಭಾರತದ ಮೊದಲ ಸಂಪರ್ಕವಿಲ್ಲದ ರಿಮೋಟ್ ಹೆಲ್ತ್ ಮಾನಿಟರಿಂಗ್ ಸ್ಟಾರ್ಟ್ಅಪ್ ಆಗಿದೆ. ಇದರ ಕೃತಕ ಬುದ್ಧಿಮತ್ತೆ ಆಧಾರಿತ ಮಾಡ್ಯೂಲ್ ಅಡ್ವಾನ್ಸ್ಡ್ ಹೆಲ್ತ್ ಇಂಟೆಲಿಜೆನ್ಸ್, ಬಳಕೆದಾರರ ಜೀವಕೋಶಗಳ ಡೇಟಾವನ್ನು ನಿರಂತರವಾಗಿ ನಿರ್ಣಯಿಸುವುದರ ಮೂಲಕ ಮತ್ತು ಅಪಾಯದ ವಿಶ್ಲೇಷಣೆಯನ್ನು ನಡೆಸುವ ಮೂಲಕ ಆರೋಗ್ಯ ಕ್ಷೀಣಿಸುವಿಕೆಯ ಆರಂಭಿಕ ಚಿಹ್ನೆಗಳನ್ನು ಪತ್ತೆ ಮಾಡುತ್ತದೆ.
ಓದಿ: ಆರ್ಥಿಕ ಸಂಕಷ್ಟದ ಬರೆ.. ಸೊರಗಿದ ಆದಾಯ ಸಂಗ್ರಹದಿಂದ ಕುಗ್ಗಲಿದೆ ಮುಂಬರುವ ಬಜೆಟ್ ಗಾತ್ರ!
ಐಐಟಿ ಪದವೀಧರರಾದ ಮುದಿತ್ ದಂಡವತೆ ಮತ್ತು ಗೌರವ್ ಪರ್ಚಾನಿ ಅವರು 2015ರ ಅಕ್ಟೋಬರ್‌ನಲ್ಲಿ ಡೋಝಿಯನ್ನು ಪ್ರಾರಂಭಿಸಿದರು ಮತ್ತು ಜುಲೈ 2019ರಲ್ಲಿ ಪ್ರಾರಂಭವಾದ ಡೋಝಿಗೆ ಗೋಯಿಸ್ ಬೈರಾಕ್, ಸೈನ್ ಐಐಟಿ ಬಾಂಬೆ, ಎಸಿಟಿ ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಇಲ್ಲಿಯವರೆಗೆ 19 ಕೋಟಿ ರೂ. ಅನುದಾನ ನೀಡಿದೆ.
ಪ್ರಾರಂಭದಲ್ಲಿ ಉಸಿರಾಟ, ಹೃದಯ ಮತ್ತು ನರವೈಜ್ಞಾನಿಕ ಮಾದರಿಗಳನ್ನು ಪತ್ತೆಹಚ್ಚಲು ಮತ್ತು ನಿರ್ವಹಿಸಲು ಹಾಗೂ ಆರೋಗ್ಯ ಕ್ಷೀಣಿಸುವಿಕೆಯ ಮುಂಚಿನ ಎಚ್ಚರಿಕೆಗಾಗಿ ಪ್ರಮುಖ ಸಂಕೇತಗಳ ಆಳವಾದ ವಿಶ್ಲೇಷಣೆಯನ್ನು ಒದಗಿಸಲು ಹಲವಾರು ಪೇಟೆಂಟ್‌ಗಳನ್ನು ಸಲ್ಲಿಸಿದೆ. 2020ರಲ್ಲಿ, ಡೊಝಿ ಎಕನಾಮಿಕ್ ಟೈಮ್ಸ್ ಇನೋವೇಶನ್ಸ್ ಅವಾರ್ಡ್ 2020, ನಾಸ್ಕಾಮ್ ಎಮರ್ಜ್ 50, ಅಂಜನಿ ಮಶೆಲ್ಕರ್ ಇಂಪ್ಯಾಕ್ಟ್ ಅವಾರ್ಡ್ ಮತ್ತು ಇನ್ನೂ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ.